ಆಸ್ತಿ ನೋಂದಣಿ ಆದ ಏಳು ದಿನದಲ್ಲಿ ಖಾತಾ ನೀಡಿಕೆ
News

ಆಸ್ತಿ ನೋಂದಣಿ ಆದ ಏಳು ದಿನದಲ್ಲಿ ಖಾತಾ ನೀಡಿಕೆ

November 23, 2022

ಬೆಂಗಳೂರು, ನ.22 (ಕೆಎಂಶಿ)- ಆಸ್ತಿ ನೋಂದಣಿ ಮಾಡಿದ ಏಳು ದಿನಗಳ ಒಳಗೆ ಖಾತಾ ನೀಡುವ ಸರ್ಕಾರಿ ಆದೇಶ ಹೊರಬಿದ್ದಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿ ಸಿದ ಕಂದಾಯ ಸಚಿವ ಆರ್. ಅಶೋಕ್, ಇದುವರೆಗೆ ನೋಂದಣಿ ಮಾಡಿದ ಮೂವತ್ನಾಲ್ಕು ದಿನಗಳ ನಂತರ ಖಾತಾ ನೀಡಲಾಗುತ್ತಿತ್ತು. ಹಾಗಾಗಿ ಖಾತಾ ಪಡೆಯಲು ನೋಂದಣಿ ಕಚೇರಿಗಳಿಗೆ ಸುತ್ತಾಡಬೇಕಾಗಿತ್ತು ಹಾಗೂ ಅನಗತ್ಯವಾಗಿ ಜೇಬಿನಿಂದ ಹಣ ಕಳೆದುಕೊಳ್ಳುವುದಲ್ಲದೆ, ಹಿಂಸೆಗೆ ಒಳಪಡು ತ್ತಿದ್ದರು. ಇದನ್ನು ತಪ್ಪಿಸಲು ಮತ್ತು ಸರಳ ರೀತಿಯಲ್ಲಿ ಆಸ್ತಿ ನೋಂದಣಿ ಪತ್ರ ಮತ್ತು ಖಾತಾ ದೊರೆಯುವಂತೆ ಮಾಡಲು ಈ ಆದೇಶ ಹೊರಡಿಸಲಾಗಿದೆ ಎಂದರು.

ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಎರಡು ಪ್ರಮುಖ ವಿಧೇಯಕಗಳನ್ನು ಮಂಡಿಸುವುದಾಗಿ ಅವರು ವಿವರಿಸಿ ದರು. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿ ಕೊಡಲು ಮತ್ತು ಕೊಡಗು, ಹಾಸನ, ಚಿಕ್ಕಮಗ ಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 1 ಲಕ್ಷ ಹೆಕ್ಟೇರ್ ಭೂಮಿ ಯನ್ನು ಒತ್ತುವರಿ ಮಾಡಿಕೊಂಡು ಕಾಫೀ ತೋಟ ಮಾಡು ತ್ತಿರುವವರಿಗೆ ಅಂತಹ ಭೂಮಿಯನ್ನು ಅವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ವಿಧೇಯಕಗಳಿಗೆ ಅನುಮತಿ ಪಡೆಯಲಾಗುವುದು. ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳ ಲಂಬಾಣಿ ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಜನವರಿ ಮೊದಲ ವಾರದಲ್ಲಿ ಹಕ್ಕುಪತ್ರ ನೀಡಲಾಗುವುದು.

ಈ ಸಂಬಂಧ ದಾವಣಗೆರೆಯಲ್ಲಿ ಸಮಾವೇಶವೊಂ ದನ್ನು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಐದು ದಶಕಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಹೆಚ್.ಡಿ. ಕೋಟೆ ತಾಲೂಕಿನ ಹಾಡಿಗಳ ಕುಟುಂಬಗಳಿಗೂ ಅಲ್ಲಿಯೇ ಹಕ್ಕುಪತ್ರ ಒದಗಿಸಲಾಗುವುದು ಎಂದರು.

ಕಬಿನಿ ಅಣೆಕಟ್ಟು ಕಟ್ಟುವಾಗ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡುತ್ತಿದ್ದ ಇವರು, ಭೂಮಿ ಕಳೆದುಕೊಂಡಿ ದ್ದರು. ಹೀಗೆ ಕೆಂಚನಹಳ್ಳಿ ಸೇರಿದಂತೆ ಹೆಚ್.ಡಿ.ಕೋಟೆ ತಾಲೂಕಿನ ಕೆಲ ಗ್ರಾಮಗಳ ಜನ 1070 ಎಕರೆಯಷ್ಟು ಭೂಮಿ ಕಳೆದುಕೊಂಡಿದ್ದರು. ಆದರೆ ಹೀಗೆ ಕಳೆದುಕೊಂಡ ಜಮೀ ನಿಗೆ ಪರ್ಯಾಯವಾಗಿ ಭೂಮಿ ಕೊಡುವಾಗ 800 ಎಕರೆಯಷ್ಟು ಭೂಮಿ ಮಾತ್ರ ಅವರಿಗೆ ನೀಡಲಾಯಿತು. ಇದರಿಂದಾಗಿ ಕೊರತೆಯಾದ 330 ಎಕರೆ ಭೂಮಿ ಗಾಗಿ ಆ ಭಾಗದ ಜನರು 5 ದಶಕಗಳ ಕಾಲದಿಂದ ನಿರಂತರ ವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಈಗ ಅವರಿಗೆ ಕೊಡಬೇಕಿದ್ದ ಭೂಮಿಯನ್ನು ಜನವರಿ ತಿಂಗಳಲ್ಲಿ ಕೊಡುವುದಾಗಿ ಹೇಳಿದರು. ತಾವು ಸದರಿ ಪ್ರದೇಶಕ್ಕೆ ಹೋಗಿ ವಾಸ್ತವ್ಯ ಮಾಡಿದ ನಂತರ ಹಲವು ವಿವರಗಳು ತಮಗೆ ಸಿಕ್ಕಿದ್ದು, ಅವರಿಗೆ ನ್ಯಾಯಯುತ ವಾಗಿ ಸಲ್ಲಬೇಕಾದ ಭೂಮಿಯನ್ನು ಮರಳಿ ಕೊಡಿಸುವ ಸಂಬಂಧ ಈ ವಾರ ಉನ್ನತ ಮಟ್ಟದ ಸಭೆ ನಡೆಸುವುದಾಗಿ ತಿಳಿಸಿದರು.
ಅರಣ್ಯ ಇಲಾಖೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಚಾಮ ರಾಜನಗರ ಜಿಲ್ಲಾಧಿ ಕಾರಿಗಳು ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗವ ಹಿಸಲಿದ್ದು, ಕಬಿನಿ ಸಂತ್ರಸ್ತರಿಗೆ ಸಲ್ಲಬೇಕಾದ ಭೂಮಿ ಯನ್ನು ಕೊಡುವ ಮಾರ್ಗೋಪಾಯಗಳ ಕುರಿತು ಚರ್ಚಿಸುವುದಾಗಿ ನುಡಿದರು. ಎರಡು ದಿನಗಳ ಕಾಲ ಆ ಪ್ರದೇಶದಲ್ಲಿದ್ದಾಗ ಸದರಿ ಭೂಮಿ ಕೊಡಲು ಅಡ್ಡಗಾಲಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಆ ಸಂದರ್ಭದಲ್ಲಿ ಅವರು, ಕಬಿನಿ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದವರು ಬೇರೆ ಊರಿನಲ್ಲಿ ಒತ್ತುವರಿ ಮಾಡಿಕೊಂಡಿದ್ದು, ಅವರು ಭೂಮಿ ತೆರವು ಮಾಡದೇ ಇವರಿಗೆ ಹೇಗೆ ಭೂಮಿ ಕೊಡಲು ಸಾಧ್ಯ ಎಂದು ಕೇಳಿದರು.

ಆದರೆ ಬೇರೆ ಯಾರೋ, ಮತ್ತೆಲ್ಲೋ ಭೂಮಿ ಒತ್ತುವರಿ ಮಾಡಿಕೊಂಡಿದ್ದಕ್ಕೂ, ಇದಕ್ಕೂ ಸಂಬಂಧವಿಲ್ಲ. ಒತ್ತುವರಿ ಮಾಡಿಕೊಂಡವರನ್ನು ನೀವು ತೆರವುಗೊಳಿಸಿ,ಆದರೆ ಅದಕ್ಕೂ ಈ ಪ್ರಕರಣಕ್ಕೂ ಹೋಲಿಕೆ ಮಾಡಬೇಡಿ. ಇಲ್ಲಿ ಭೂಮಿಗಾಗಿ ಹೋರಾಡು ತ್ತಿರುವವರು ತಮ್ಮ ಹಕ್ಕಿನ ಪರವಾಗಿ ಹೋರಾಡುತ್ತಿದ್ದಾರೆ. ಅವರಿಗೆ ಕೊಡಬೇಕಾದ 300 ಎಕರೆ ಭೂಮಿಯನ್ನು ಕೊಡಲೇಬೇಕು ಎಂದು ಹೇಳಿದ್ದೇನೆ. ಅದೇ ರೀತಿ ಈ ಕುರಿತಂತೆ ಉನ್ನತ ಮಟ್ಟದ ಸಭೆಯನ್ನು ಈ ವಾರ ನಡೆಸಿ, ಕೆಂಚನಹಳ್ಳಿ ಮತ್ತಿತರ ಭಾಗಗಳ ಇಪ್ಪತ್ಮೂರು ಹಾಡಿಗಳ ಜನರಿಗೆ ಭೂಮಿ ಕೊಡುವ ಕೆಲಸಕ್ಕೆ ಚಾಲನೆ ನೀಡುವುದಾಗಿ ವಿವರಿಸಿದರು. ಒಂದೊಂದು ಹಾಡಿಯಲ್ಲಿ ಮೂವತ್ತರಿಂದ ನಲವತ್ತು ಕುಟುಂಬಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು. ಇನ್ನು ಸದರಿ ಭೂಮಿಗಾಗಿ ದಶಕಗಳ ಕಾಲದಿಂದ ಅಲ್ಲಿನ ಜನ ಹೋರಾಟ ನಡೆಸಿದ್ದು ಅವರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆ ಮೊಕದ್ದಮೆಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.

Translate »