ಪೊಲೀಸ್ ಹುದ್ದೆಯಲ್ಲ, ಅದೊಂದು ಜವಾಬ್ದಾರಿ
ಮೈಸೂರು

ಪೊಲೀಸ್ ಹುದ್ದೆಯಲ್ಲ, ಅದೊಂದು ಜವಾಬ್ದಾರಿ

November 19, 2021

ಮೈಸೂರು, ನ.18(ಎಂಕೆ)- ಪೊಲೀಸ್ ಹುದ್ದೆ ಇರುವುದು ಸಮಾಜಕ್ಕೋಸ್ಕರ. ಇದು ಬರೀ ಹುದ್ದೆಯಲ್ಲ, ಜವಾಬ್ದಾರಿ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಹಿಳಾ ಪೆÇಲೀಸ್ ಪ್ರಶಿ ಕ್ಷಣಾರ್ಥಿಗಳಿಗೆ ತಿಳಿಹೇಳಿದರು.

ಮೈಸೂರಿನ ಜ್ಯೋತಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಆಯೋಜಿಸಿದ್ದ ‘7ನೇ ತಂಡದ ಮಹಿಳಾ ಪೆÇಲೀಸ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ’ಯ ಉದ್ಘಾಟನಾ ಸಮಾ ರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್ ಹುದ್ದೆಯ ಮಹತ್ವ ತಿಳಿಸಿದ ಅವರು, ಹೆಚ್ಚೆಚ್ಚು ಜನರು ಪೊಲೀಸ್ ಹುದ್ದೆಗೆ ಸೇರಲು ಬರು ತ್ತಿದ್ದಾರೆ ಎಂದರೆ, ಹುದ್ದೆಯ ಮಹತ್ವ ಹೆಚ್ಚಾ ಗಿದೆ ಎಂದರ್ಥ. ಪೊಲೀಸ್ ಹುದ್ದೆಯನ್ನು ಪೊಲೀಸರೇ ನಿರ್ವಹಿಸಬೇಕೇ ಹೊರತು ಮತ್ತ್ಯಾರಿಂದಲೂ ಸಾಧ್ಯವಿಲ್ಲ ಎಂದರು.

ದ್ವಿತೀಯ ಪಿಯುಸಿ ವಿದ್ಯಾರ್ಹತೆಯುಳ್ಳ ಪೊಲೀಸ್ ಸಿಬ್ಬಂದಿ ಹುದ್ದೆಗೆ ಪದವಿ, ಸ್ನಾಕೋತ್ತರ ಪದವಿ ಪಡೆದವರು ಬಂದಿ ದ್ದೀರಿ ಇದಕ್ಕೆ ಕಾರಣವೇನು? ಎಂದು ಪ್ರಶಿಕ್ಷಣಾರ್ಥಿಗಳನ್ನು ಪ್ರಶ್ನಿಸಿದ ಆಯುಕ್ತ ರಿಗೆ ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಹುದ್ದೆ ಪಡೆ ಯುವುದು ಮುಖ್ಯ’ವೆಂಬ ಉತ್ತರ ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಾ. ಚಂದ್ರಗುಪ್ತ, ನಾವು ಈ ಹಿಂದಿನಿಂದಲೂ ಸ್ಪರ್ಧಾತ್ಮಕ ಜಗತ್ತಿನಲ್ಲೇ ಇದ್ದೇವೆ. ಮುಖ್ಯ ವಾಗಿ ಮಾಡುವ ಕೆಲಸದಲ್ಲಿ ನಂಬಿಕೆ ಇರಬೇಕು. ಸರ್ಕಾರಿ ಕೆಲಸ, ಸಂಸಾರ ಎನ್ನು ವುದಕ್ಕಿಂತ ಸಮಾಜಕ್ಕೆ ಏನಾದರು ಕೊಡುಗೆ ನೀಡುವ ಉನ್ನತ ಚಿಂತನೆಗಳನ್ನು ಮಾಡ ಬೇಕು ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆಯೇ ಮುಖ್ಯ ಧ್ಯೇಯ: ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್‍ನಿಂದ ಹಿಡಿದು ಉನ್ನತ ಹುದ್ದೆ ಯಲ್ಲಿರುವವರದ್ದು ಕೂಡ ಒಂದೇ ಕೆಲಸ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾ ಡುವುದೇ ಮುಖ್ಯ ಧ್ಯೇಯ. ತಮ್ಮ ಬಳಿ ಬಂದವರಿಗೆ ನ್ಯಾಯ ದೊರಕಿಸಿ ಕೊಡುವ ಮಹತ್ತರ ಜವಾಬ್ದಾರಿ ಪೊಲೀಸರದ್ದಾಗಿದೆ. ಸಾರ್ವಜನಿಕರನ್ನು ಪೊಲೀಸರು ನಮ ಗಿಂತಲೂ ಚೆನ್ನಾಗಿದ್ದಾರೆ ಎಂಬ ಗೌರವದ ಭಾವನೆ ಮೂಡುವಂತೆ ನಮ್ಮ ಕಾರ್ಯ ಚಟುವಟಿಕೆಗಳು ಇರಬೇಕು. ತಾವೇ ಮುಂದೆ ಬಂದು ಜವಾಬ್ದಾರಿಗಳನ್ನು ಪಡೆದು ನಿರ್ವ ಹಿಸಿದರೆ ತಮ್ಮ ಮೇಲೆ ಮತ್ತಷ್ಟು ಗೌರವ ಹೆಚ್ಚಾ ಗುತ್ತದೆ ಎಂದು ಹೇಳಿದರು.

7ನೇ ತಂಡ: ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ ಮಾತನಾಡಿ, ಪೊಲೀಸ್ ತರ ಬೇತಿ ಶಾಲೆಗೆ ಆಗಮಿಸಿರುವ 7ನೇ ಮಹಿಳಾ ಪ್ರಶಿಕ್ಷಣಾರ್ಥಿಗಳ ತಂಡ ಇದಾಗಿದ್ದು, 116 ಮಂದಿ ಇದ್ದಾರೆ. ಪಿಯುಸಿ ವಿದ್ಯಾಭ್ಯಾಸ ಮಾಡಿದವರು 7 ಮಂದಿ ಇದ್ದು, ಇನ್ನು ಳಿದವರೆಲ್ಲರು ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದವರೆ ಹೆಚ್ಚಾಗಿದ್ದಾರೆ ಎಂದರು. ಪೊಲೀಸ್ ತರಬೇತಿ ಶಾಲೆ ಉಪ ಪ್ರಾಂಶು ಪಾಲ ಶಂಕರೇಗೌಡ, ಇನ್ಸ್‍ಸ್ಪೆಕ್ಟರ್‍ಗಳಾದ ಗಂಗಾಧರ್, ನಾಗೇಶ್, ಚಂದ್ರಕಲಾ, ಆರ್‍ಎಸ್‍ಐ ಸ್ಪೂರ್ತಿರಾಜ್ ಮತ್ತಿತರರಿದ್ದರು

Translate »