ಮೈಸೂರು, ನ. 18- ಮೈಸೂರಿನ ಕೆ.ಆರ್. ಆಸ್ಪತ್ರೆಯು ಕ್ರಿಟಿಕಲ್ ಕೇರ್ ಮೂಲ ಸೌಕರ್ಯವನ್ನು ಡೋಝಿ ಯಿಂದ (ಆozee) ಮಿಲಿಯನ್ ಐಸಿಯು ಉಪಕ್ರಮದ ಮೂಲಕ ಮೇಲ್ದರ್ಜೆಗೇರಿಸಲ್ಪಟ್ಟಿದ್ದು, ಮುಂದಿನ 3 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಕ್ರಿಟಿಕಲ್ ಕೇರ್ ವ್ಯವಸ್ಥೆ ಮಾಡಲು ಅನುಕೂಲವಾಗುವಂತೆ 35 ಸಾಮಾನ್ಯ ಹಾಸಿಗೆಗಳನ್ನು ಸ್ಟೆಪ್‍ಡೌನ್ ಐಸಿಯುಗಳಾಗಿ ನವೀಕರಿಸಲಾಗಿದೆ ಎಂದು ಕೆ.ಆರ್.ಆಸ್ಪತ್ರೆಯ ಅರವಳಿಕೆ ವಿಭಾಗದ ಡಾ. ಹೆಚ್.ಜಿ. ಮಂಜುನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್. ಆಸ್ಪತ್ರೆಯಲ್ಲಿ ಡೋಝಿ 24×7 ಸೆಂಟ್ರಲ್ ಮಾನಿಟರಿಂಗ್ ಸೆಲ್ ಅನ್ನು ಸ್ಥಾಪಿಸಿದ್ದು, ಇದು ಆರೋಗ್ಯ ಸಿಬ್ಬಂದಿಗೆ ಸ್ತ್ರೀರೋಗ ಶಾಸ್ತ್ರ ಮತ್ತು ಶಸ್ತ್ರಚಿಕಿತ್ಸಾ ಐಸಿಯು ವಿಭಾಗ ಗಳಿಂದ ದೂರದಿಂದಲೇ ಅನೇಕ ರೋಗಿಗಳನ್ನು ಮೇಲ್ವಿ ಚಾರಣೆ ಮಾಡಲು ಶಕ್ತಗೊಳಿಸುತ್ತದೆ ಎಂದರು.
ಕೆ.ಆರ್. ಆಸ್ಪತ್ರೆಯಲ್ಲಿ ಸಾಮಾನ್ಯ ಔಷಧ, ಸಾಮಾನ್ಯ ಶಸ್ತ್ರಚಿಕಿತ್ಸೆ, ಇಎನ್‍ಟಿ, ನೇತ್ರಶಾಸ್ತ್ರ, ಮೂತ್ರಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಮನೋವೈದ್ಯ ಶಾಸ್ತ್ರ ಮತ್ತು ಇತರ ವಿಶೇಷತೆ ಗಳನ್ನು ಒಳಗೊಂಡಂತೆ 1300 ಹಾಸಿಗೆಗಳನ್ನು ಹೊಂದಿದೆ. ಮಿಲಿಯನ್ ಐಸಿಯು ಉಪಕ್ರಮವು ರೋಗಿಗಳ ರಿಮೋಟ್ ಮಾನಿಟರಿಂಗ್ ಆಸ್ಪತ್ರೆಯಲ್ಲಿನ ನಮ್ಮ ವೈದ್ಯರಿಗೆ ವರದಾನ ವಾಗಿ ಕಾರ್ಯನಿರ್ವಹಿಸಿದೆ. ನಾವು ಈಗ ವೆಬ್ ಡ್ಯಾಶ್ ಬೋರ್ಡ್‍ನಿಂದ ಮತ್ತು ಮೊಬೈಲ್ ಫೋನ್ ಅಪ್ಲಿ ಕೇಷನ್‍ನಿಂದ 24×7 ನಿರ್ಣಾಯಕ ರೋಗಿಗಳನ್ನು ಮೇಲ್ವಿ ಚಾರಣೆ ಮಾಡಲು ಸಾಧ್ಯವಾಗುತ್ತದೆ. ಲಭ್ಯವಿರುವ ಹಾಸಿಗೆ ಗಳನ್ನು ಕಡಿಮೆ ವೆಚ್ಚದಲ್ಲಿ ಹೆಚ್‍ಡಿಯುಗಳಾಗಿ ನವೀಕರಿ ಸಲು ಸರ್ಕಾರಿ ಆಸ್ಪತ್ರೆಗಳಿಗೆ ಮಿಲಿಯನ್ ಐಸಿಯು ಉಪಕ್ರಮ ಸಹಕಾರಿಯಾಗಿದೆ ಎಂದರು. ಮಿಲಿಯನ್ ಐಸಿಯು ಉಪ ಕ್ರಮವು ದೀರ್ಘಾವಧಿಯ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸುವ ತುರ್ತು ಅಗತ್ಯವನ್ನು ಪೂರೈಸ ಲಿದ್ದು, ಗುಣಮಟ್ಟದ ಆರೋಗ್ಯ ಸೇವೆಯನ್ನು ಬಹುಪಾಲು ಜನರಿಗೆ ಕೈಗೆಟಕುವಂತೆ ಮಾಡುತ್ತದೆ ಎಂದರು. ಮುಂದಿನ 12 ತಿಂಗಳಲ್ಲಿ ಭಾರತದಾದ್ಯಂತ 50 ಸಾವಿರ ಸ್ಟೆಪ್‍ಡೌನ್ ಐಸಿಯು ಹಾಸಿಗೆಗಳನ್ನು ಸ್ಥಾಪಿಸುವ ಹಾಗೂ 3 ವರ್ಷದಲ್ಲಿ 1 ಮಿಲಿಯನ್ ಐಸಿಯು ಹಾಸಿಗೆಗಳನ್ನು ಸಿದ್ಧಪಡಿ ಸುವ ಗುರಿಯನ್ನು ಕಂಪನಿ ಹೊಂದಿದೆ. ಈಗಾಗಲೇ ಭಾರತದ 20 ರಾಜ್ಯಗಳ 32 ಆಸ್ಪತ್ರೆಗಳಿಗೆ ಈ ಪ್ರಯೋ ಜನವನ್ನು ನೀಡಲಾಗಿದ್ದು, 12 ಸಾವಿರಕ್ಕೂ ಹೆಚ್ಚು ರೋಗಿ ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಕರ್ನಾಟಕ ದಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಚರಕ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಮೈಸೂರು ಜಿಲ್ಲಾ ಆಸ್ಪತ್ರೆ, ಬೀದರ್‍ನ ಬಿಆರ್‍ಐಎಂಎಸ್, ಹುಬ್ಬಳ್ಳಿಯ ಕಿಮ್ಸ್, ಶಿವಮೊಗ್ಗದ ಸಿಮ್ಸ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದರು.
ಡೋಝಿಯ ಸಿಇಓ ಮುದಿತ್ ದಂಡವತೆ ಮಾತ ನಾಡಿ, ಮಿಲಿಯನ್ ಐಸಿಯು ಉಪಕ್ರಮವು ಕೆ.ಆರ್. ಆಸ್ಪತ್ರೆ ಯಲ್ಲಿ ನಿರಂತರವಾಗಿ ಕ್ರಿಟಿಕಲ್ ಕೇರ್ ಅನ್ನು ಸುಗಮ ಗೊಳಿಸುವಲ್ಲಿ ಪ್ರಮುಖ ಕೊಡುಗೆಯಾಗಿದೆ. ರಿಮೋಟ್ ಪೇಶಂಟ್ ಮಾನಿಟರಿಂಗ್ ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರಿಗೆ ಸಾಂಕ್ರಾಮಿಕ ಮತ್ತು ಅದರಾ ಚೆಗಿನ ಗುಣ ಮಟ್ಟದ ರೋಗಿಗಳ ಆರೈಕೆಯ ವರ್ದಿತ ಮಟ್ಟವನ್ನು ವೇಗವಾಗಿ ತಲುಪಿಸಲು ಸಹಕರಿಸುತ್ತದೆ. ಡೋಝಿಯೊಂ ದಿಗೆ ವೈದ್ಯರು ದೂರದಿಂದಲೇ ಹಲ ವಾರು ರೋಗಿಗಳಿಗೆ ಆರೈಕೆ ಒದಗಿಸಲು ಸಹಾಯ ಮಾಡುವ ಮೂಲಕ ಪರಿಣಾಮ ಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ರೋಗಿಯ ಹೃದಯ ಬಡಿತ, ಉಸಿರಾಟದ ಬಡಿತ ಮತ್ತು ಆಮ್ಲಜನ ಕದ ಶುದ್ಧತ್ವದಂತಹ ಪ್ರಮುಖ ಅಂಶಗಳನ್ನು ಮೊದಲೇ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ ಎಂದರು.