ದೇಜಗೌ ಹೆಸರೇ ಒಂದು ವಿಸ್ಮಯ ಲೋಕ
ಮೈಸೂರು

ದೇಜಗೌ ಹೆಸರೇ ಒಂದು ವಿಸ್ಮಯ ಲೋಕ

October 5, 2018

ಮೈಸೂರು: ಎಲ್ಲರಲ್ಲೂ ಕನ್ನಡ ನಾಡು, ನುಡಿಯ ಪ್ರೀತಿ ತುಂಬಿದ ನಾಡೋಜ ದೇಜಗೌ ಒಂದು ವಿಸ್ಮಯ ಲೋಕವೇ ಹೌದು ಎಂದು ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಇಂದಿಲ್ಲಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾ ಟಕ ಜಾನಪದ ಪರಿಷತ್ತು ಮೈಸೂರು ಘಟಕ ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದೇಜಗೌ ಜನ್ಮ ಶತ ಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಸಜ್ಜನರಾದವರು ತಾವು ಪಡೆದ ಉಪ ಕಾರವನ್ನು ಮರೆಯುವುದಿಲ್ಲ. ಮೈಸೂರು ವಿವಿ ಕುಲಪತಿ, ಪ್ರಿನ್ಸಿಪಾಲ್, ಮಹಾರಾಜ ಕಾಲೇಜಿನ ಅಧ್ಯಾಪಕರಾಗಿ ನೂರಾರು ಮಂದಿಗೆ ವಿದ್ಯೆ ಕಲಿಸಿದ ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಇಷ್ಟೊಂದು ಕೆಲಸ ಮಾಡುತ್ತಾರೆಂದರೆ ಅದೊಂದು ವಿಸ್ಮಯ ಲೋಕ ಎಂದರು.

ಕುವೆಂಪು ಅವರ ಮಾನಸಗಂಗೋತ್ರಿಯ ಕನಸನ್ನು ನನಸು ಮಾಡಿದವರು ದೇಜಗೌ. ಅವರು ಪಾಠ ಮಾಡುವ ಮುನ್ನ 2-3 ನಿಮಿಷ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿಯೇ ಮುಂದಿನ ಪಾಠಕ್ಕೆ ಹೋಗು ತ್ತಿದ್ದರು. ನಮಗೆ ಬದುಕಿನ ದಾರಿ, ಒಳ್ಳೆಯ ಬದುಕು ಕಟ್ಟಿಕೊಟ್ಟವರು. ನಮ್ಮ ಕಣ್ಣಿಗೆ ಕಂಡ ದೇವರು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಜಾನ ಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ದೇಜಗೌ ಕನ್ನಡದ ಪಿತಾ ಮಹ. ಕನ್ನಡ ಅಧ್ಯಯನ ಸಂಸ್ಥೆ ಪ್ರಾರಂ ಭಿಸಿ, ರಾಜ್ಯಾದ್ಯಂತ ಕನ್ನಡಕ್ಕೆ ಒತ್ತು ಕೊಟ್ಟರು. ವಿವಿ ಆವರಣದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಪ್ರಾರಂಭಿಸಿದರು. ದೇಜಗೌ ಮತ್ತು ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.
ಗ್ರಾಮೀಣ ಪ್ರತಿಭೆಯಾದ ಅವರು ಕುವೆಂಪು ಶಿಷ್ಯರಾಗಿ ಮೈಸೂರು ವಿವಿ ಕುಲಪತಿಯಾಗಿ ಕನ್ನಡವನ್ನು ಜಾನಪದ ವನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ದ ಕನ್ನಡದ ದಿಗ್ಗಜ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲ ಗತ್ತಿ ಮಾತನಾಡಿ, ದೇಜಗೌ ಗದ್ಯ ಬ್ರಹ್ಮ, ಬರಹವನ್ನು ತಪಸ್ಸನ್ನಾಗಿ ಸ್ವೀಕರಿಸಿದ್ದರು. ಹಳಗನ್ನಡ, ನಡುಗನ್ನಡ, ಹೊಸಗನ್ನಡ, ಜಾನಪದ ಎಲ್ಲದರಲ್ಲೂ ಕೆಲಸ ಮಾಡಿ ರುವ ಅವರ ಸಾಹಿತ್ಯದ ಪಟ್ಟಿ ಓದುವುದೇ ಒಂದು ಸಾಹಿತ್ಯ ಯಾತ್ರೆ ಮಾಡಿದಂತೆ. ಅವರ ಸಾಹಿತ್ಯ ಕೃಷಿ ನೋಡಿದಾಗ ಅವರು ಸರಸ್ವತಿಯ ಮುಂದೆ ಹಚ್ಚಿಟ್ಟ ಹಣತೆ ಯಂತೆ ಕಾಣುತ್ತಾರೆ ಎಂದರು.

ಕನ್ನಡ ಅಧ್ಯಯನ ಸಂಸ್ಥೆ ಬಡವಾಗಿದೆ: ದೇಜಗೌ ಸ್ಥಾಪಿಸಿದ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆ ಒಂದು ಮಿನಿ ವಿಶ್ವವಿದ್ಯಾ ನಿಲಯವಿದ್ದಂತೆ. ಆದರೆ ಇಂದು ಹಲವು ಕಾರಣಗಳಿಂದ ಕನ್ನಡ ಅಧ್ಯಯನ ಸಂಸ್ಥೆ ಬಡವಾಗಿದೆ. ದೇಜಗೌ, ಶಶಿಧರ ಪ್ರಸಾದ್ ರಂತಹ ಮಹನೀಯರು ಬಂದರೆ ಮಾತ್ರ ಕನ್ನಡ ಅಧ್ಯಯನ ಸಂಸ್ಥೆಗೆ ಪುನಶ್ಚೇತನ ತರಲು ಸಾಧ್ಯ ಎಂದರು. ಸಾಹಿತಿ ಡಾ.ಸಿ.ನಾಗಣ್ಣ, ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ ಇನ್ನಿ ತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »