ಸೂರು ವಿವಿ ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ವಿರುದ್ಧ ದಸಂಸ ಅನಿರ್ದಿಷ್ಟಾವಧಿ ಪ್ರತಿಭಟನೆ
ಮೈಸೂರು

ಸೂರು ವಿವಿ ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ವಿರುದ್ಧ ದಸಂಸ ಅನಿರ್ದಿಷ್ಟಾವಧಿ ಪ್ರತಿಭಟನೆ

October 5, 2018

ಮೈಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 124 ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಕ್ಕೆ ಸಂಬಂಧಿಸಿ ದಂತೆ ರಾಜ್ಯಪಾಲರ ಆದೇಶದನ್ವಯ ತಪ್ಪಿತ ಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಬೇಕು, ವಿವಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಗುರುವಾರ ಅನಿರ್ದಿಷ್ಟಾ ವಧಿ ಪ್ರತಿಭಟನೆ ಆರಂಭಿಸಿದವು.

ಮೈಸೂರು ವಿವಿಯ ಕ್ರಾಫರ್ಡ್ ಹಾಲ್ ದ್ವಾರದ ಬಳಿ ಪ್ರತಿಭಟನೆ ಆರಂಭಿಸಿರುವ ಪ್ರತಿಭಟನಾಕಾರರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಹಾಗೂ ರಾಷ್ಟ್ರ ಕವಿ ಕುವೆಂಪು ಅವರ ಮಾನವತಾವಾದದ ಸಮ್ಮಿಲನದಲ್ಲಿ ಪ್ರತಿಷ್ಠಿತ ಮೈಸೂರು ವಿವಿ ಇಂದು ಜಾತಿವಾದಿ ಮನಸ್ಸಿನ ಭ್ರಷ್ಟ ಅಧಿಕಾರಿ ಗಳ ಅಕ್ರಮ ಕೂಟವಾಗಿ ಪರಿವರ್ತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿವಿಗೆ 124 ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ಸಂಬಂಧ ರಾಜ್ಯ ಪಾಲರ ನಿರ್ದೇಶನದ ಮೇರೆಗೆ ಡಾ.ಎಂ. ಆರ್.ನಿಂಬಾಳ್ಕರ್ ನೇತೃತ್ವದ ತನಿಖಾ ತಂಡವು ವಿಚಾರಣೆ ನಡೆಸಿತ್ತು. ಹಿಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ ಪ್ರೊ. ಆರ್.ರಾಜಣ್ಣ ಹಾಗೂ ಉಪಕುಲಸಚಿವ ವಿಷಕಂಠ ಸೇರಿ ಕರ್ನಾಟಕ ವಿಶ್ವವಿದ್ಯಾ ನಿಲಯಗಳ ಕಾಯ್ದೆ, ಸರ್ಕಾರದ ಮಾರ್ಗ ದರ್ಶಿ ಸೂತ್ರಗಳು ಹಾಗೂ ವಿವಿಯ ಸಿಂಡಿ ಕೇಟ್ ಸಭೆಯ ನಡಾವಳಿಗಳನ್ನು ಉಲ್ಲಂ ಘಿಸಿ ಅಕ್ರಮ ನೇಮಕಾತಿ ಮಾಡಿರುವುದಾಗಿ ತನಿಖಾ ತಂಡವು ವರದಿ ಮಾಡಿತ್ತು. ಈ ವರದಿಗೆ ಅನುಗುಣವಾಗಿ ಅಕ್ರಮವಾಗಿ ನೇಮಕ ಗೊಂಡವರನ್ನು ವಜಾಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲರು ಆದೇಶ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ವಿವಿಯ ವಿದ್ಯಾರ್ಥಿನಿಲಯಗಳಿಗೆ ಸಮ ರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿವಿಯ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಿದ್ದರು. ಇದರಿಂದ ಮುಜುಗರಕ್ಕೀ ಡಾದ ವಿವಿಯ ಆಡಳಿತ ವರ್ಗವು ವಿದ್ಯಾರ್ಥಿ ಮುಖಂಡರಾದ ಸೋಸಲೆ ಮಹೇಶ್, ಗೋಪಾಲ್ ಹಾಗೂ ರಾಜೇಶ್ ಎಂಬುವರ ವಿರುದ್ಧ ವಿವಿಯ ನಿಯಮ ಉಲ್ಲಂಘಿಸಿ ಏಕಾ ಏಕಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಜೊತೆಗೆ ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಳಿಗೆ ನಾನಾ ರೀತಿಯಲ್ಲಿ ಬೆದರಿಕೆ ಹಾಕುವ ಮೂಲಕ ವಿದ್ಯಾರ್ಥಿಗಳ ಧ್ವನಿ ಅಡಗಿಸಲು ಹೊರಟಿದೆ ಎಂದು ಆಪಾದಿಸಿದರು.
ಹಿಂದಿನ ವರ್ಷಗಳಿಂದಲೂ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದವರನ್ನೇ ಪ್ರಸಕ್ತ ಸಾಲಿನಲ್ಲಿಯೂ ಮುಂದು ವರೆಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಹೀಗಿದ್ದರೂ ಅಂತಹ ಅತಿಥಿ ಉಪನ್ಯಾಸಕ ರಿಗೆ ನೇಮಕಾತಿ ಆದೇಶ ನೀಡಿಲ್ಲ.

ಕೆಲವ ರಿಗೆ ನೇಮಕಾತಿ ಆದೇಶ ನೀಡಿ, ಹಣ ನೀಡಲಿಲ್ಲ ಎಂಬ ಕಾರಣಕ್ಕೆ ನೇಮಕಾತಿ ಆದೇಶವನ್ನು ಹಿಂಪಡೆಯಲಾಗಿದೆ. ರಾಜ್ಯ ಸರ್ಕಾರದ ನಿರ್ದೇಶನ ಹಾಗೂ ಸಿಂಡಿ ಕೇಟ್ ತೀರ್ಮಾನದಂತೆ ಹಾಗೂ ಉಚ್ಛ ನ್ಯಾಯಾಲಯದ ಆದೇಶದಂತೆ ಅತಿಥಿ ಉಪ ನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ ಪ್ರಸಕ್ತ ಸಾಲಿನಲ್ಲಿ ಮರುನೇಮಕ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ 15ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ವಿದ್ಯಾರ್ಥಿನಿಲಯಗಳು ಮೈಸೂರು ವಿವಿ ವ್ಯಾಪ್ತಿಗೆ ಬರಲಿದ್ದು, ಇತ್ತೀಚೆಗೆ

ವಿದ್ಯಾರ್ಥಿ ಗಳ ಒತ್ತಾಯದ ಮೇರೆಗೆ ವಿದ್ಯಾರ್ಥಿನಿಲಯ ಗಳ ಊಟದ ವ್ಯವಸ್ಥೆ ಹಾಗೂ ನಿರ್ವಹಣಾ ವ್ಯವಸ್ಥೆಗೆ ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟಿದೆ. ಇದು ಸ್ವಾಗತಾರ್ಹವಾದರೂ ಅರ್ಹತೆ ಹಾಗೂ ಸಾಮಥ್ರ್ಯ ಇಲ್ಲದ ಶಿಕ್ಷಣ ಅಧ್ಯಯನ ವಿಭಾ ಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಬಿ. ಪ್ರವೀಣ್ ಅವರನ್ನು ವಿವಿ ನಿಯಮಗಳ ವಿರುದ್ಧ ವಾಗಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇ ಶಕರನ್ನಾಗಿ ನೇಮಕ ಮಾಡಲಾಗಿದೆ. ಇವರು ಗುಣಮಟ್ಟದ ಊಟ, ಮೂಲಸೌಲಭ್ಯ ಕಲ್ಪಿ ಸಲು ಮುಂದಾಗಿಲ್ಲ. ಹಣ ಪಡೆದು ಅನಧಿ ಕೃತವಾಗಿ ಕೊಠಡಿಗಳನ್ನು ಹಂಚಿಕೆ ಮಾಡಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿ ದ್ದಾರೆ ಎಂದು ಆರೋಪಿಸಿದರು. ದಲಿತ ಸಂಘರ್ಷ ಸಮಿತಿ ಮುಖಂಡ ಚೋರನ ಹಳ್ಳಿ ಶಿವಣ್ಣ, ಮಾಜಿ ಮೇಯರ್ ಪುರು ಷೋತ್ತಮ್, ಪ್ರಗತಿಪರ ಚಿಂತಕ ಡಾ. ಕೃಷ್ಣಮೂರ್ತಿ ಚಮರಂ, ರೈತ ಸಂಘದ ಮುಖಂಡ ಮರಂಕಯ್ಯ, ರಾಜ್ಯ ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಮುಖಂಡರಾದ ದಿಲೀಪ್ ನರಸಯ್ಯ, ಡಾ.ಬಿ.ಬಸವರಾಜು ಸೇರಿದಂತೆ ಮತ್ತಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Translate »