ಆಯಿಷ್‍ಗೆ ಜಯಚಾಮರಾಜೇಂದ್ರ ಒಡೆಯರ್, ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರಿಡಿ
ಮೈಸೂರು

ಆಯಿಷ್‍ಗೆ ಜಯಚಾಮರಾಜೇಂದ್ರ ಒಡೆಯರ್, ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರಿಡಿ

June 14, 2020

ಮೈಸೂರು, ಜೂ.13(ವೈಡಿಎಸ್)- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಗೆ `ಜಯಚಾಮರಾಜೇಂದ್ರ ಒಡೆಯರ್’ ಹಾಗೂ ಮೈಸೂರು ಮಂಡ ಕಳ್ಳಿ ವಿಮಾನ ನಿಲ್ದಾಣಕ್ಕೆ ರಾಜರ್ಷಿ `ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಮೈಸೂರಿನ ಗೋಕುಲಂನಲ್ಲಿರುವ ಶ್ರೀ ಕೃಷ್ಣ ಗಾನಸಭಾದಲ್ಲಿ ಶನಿವಾರ ಆಯೋ ಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರ 136ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್À ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಜಯಚಾಮರಾಜೇಂದ್ರ ಒಡೆಯರ್ ಹೆಸ ರಿಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳೂ ಕೇಂದ್ರಕ್ಕೆ ಪತ್ರ ಬರೆದಿದ್ದು, ಇದು ವರ್ಷದಲ್ಲಿ ನನಸಾಗುವ ವಿಶ್ವಾಸವಿದೆ ಎಂದರು.

ಮೈಸೂರು ವಿಶ್ವವಿಖ್ಯಾತವಾಗಲು ಮೈಸೂರು ಒಡೆಯರ್ ಕೊಡುಗೆ ಅಪಾರ. ಇಂದು ಜಯಚಾಮರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನ ಅಚರಿಸಲು ಅವಕಾಶ ಸಿಕ್ಕಿರುವುದು ನಮ್ಮೆ ಲ್ಲರ ಅದೃಷ್ಟ. ಭಾರತದ ಇತಿಹಾಸದಲ್ಲಿ ಯದುವಂಶ ಪ್ರಖ್ಯಾತವಾಗಿದ್ದು, ಪ್ರಜೆಗಳ ಪ್ರೀತಿ, ವಿಶ್ವಾಸ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ವಡಿ ಅವರು ದೂರ ದೃಷ್ಟಿವುಳ್ಳವರಾಗಿದ್ದು, ತಮ್ಮ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಜಾರಿಗೊ ಳಿಸಿದರು. ಕೃಷಿ, ಶಿಕ್ಷಣ, ವಿಜ್ಞಾನ, ಸಾಹಿತ್ಯ, ಭಾಷೆ ಅಭಿವೃದ್ಧಿ ಹೀಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ನಾಲ್ವಡಿ ಅವರ ಕೊಡುಗೆ ಅಪಾರವಾಗಿದೆ. ನೀರಾವರಿ, ಕೆಆರ್‍ಎಸ್ ಆಣೆಕಟ್ಟೆ ನಿರ್ಮಾಣ, ಮೈಸೂರು ಬ್ಯಾಂಕ್ ಹೀಗೆ ಒಟ್ಟಾರೆ ಅವರ ಆಡಳಿತವು ದೇಶಕ್ಕೆ, ವಿಶ್ವಕ್ಕೆ ಮಾದರಿಯಾಗಿದೆ. ನಾಲ್ವಡಿ ಅವರು ಸಂಗೀತಗಾರರಾಗಿದ್ದು, ಇಡೀ ವಿಶ್ವದಲ್ಲೇ ಮೈಸೂರು ಅರಮನೆ, ಮೈಸೂರು ಆಡಳಿತ ಸಾವಿರಾರು ಸಂಗೀತಗಾರರಿಗೆ ಆಶ್ರಯ ನೀಡಿದ ಆಸ್ಥಾನ ಎಂದು ಸ್ಮರಿಸಿದರು.

ಇದಕ್ಕೂ ಮುನ್ನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಾರ್ಯ ಕ್ರಮ ಉದ್ಘಾಟಿಸಿದರು. ಶ್ರೀ ಕೃಷ್ಣ ಗಾನ ಸಭಾ ಅಧ್ಯಕ್ಷ ಬಿ.ಎಸ್.ಶ್ರೀಧರ್‍ರಾಜ್ ಅರಸ್, ವಿದ್ವಾನ್ ಆರ್.ಎಸ್.ನಂದಕುಮಾರ್ ಮತ್ತಿತ ರರು ಉಪಸ್ಥಿತರಿದ್ದರು. ನಂತರ ವಿದ್ವಾನ್ ಆರ್.ಎಸ್.ನಂದಕುಮಾರ್ ಅವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Translate »