ರಾಘವೇಂದ್ರ ರಾಜ್‍ಕುಮಾರ್ ಪುತ್ರ ವಿನಯ್ ರಾಜ್‍ಕುಮಾರ್ ಗ್ರಾಮಾಯಣ, ಟೆನ್ ಚಿತ್ರಗಳÀ ನಂತರ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿz್ದÁರೆ. ‘ಪೆಪೆ’ ಎಂಬ ಚಿತ್ರದಲ್ಲಿ ಅವರು ಸಖತ್ ರಗಡ್‍ಲುಕ್‍ನಲ್ಲಿ ಕಾಣಿಸಿಕೊಂಡಿz್ದÁರೆ. ಈ ಮೂಲಕ ಮೊದಲ ಬಾರಿಗೆ ಆP್ಷÀನ್ ಸಿನಿಮಾದಲ್ಲಿ ಕಾಣಿಸಿಕೊಂಡಿz್ದÁರೆ. ಈಗಾಗಲೇ ಈ ಚಿತ್ರದ ನಾಯಕಿಯ ಆಯ್ಕೆಯೂ ನಡೆದಿದೆ. ಕರಾವಳಿ ಬೆಡಗಿ ಕಾಜಲ್ ಕುಂದರ್ ಮೊದಲ ಬಾರಿಗೆ ವಿನಯ್ ಜೋಡಿಯಾಗಿ ನಟಿಸುತ್ತಿದ್ದಾರೆ. ಕಾಜಲ್ ಎಂದರೆ ತೆಲುಗಿನ ಹೆಸರಾಂತ ನಟಿ ಕಾಜಲ್ ಅಗರವಾಲ್ ಅಂತ ಭಾವಿಸಬೇಡಿ. ಈಕೆ ಈಗಾಗಲೇ ಕೆಲ ತುಳು ಮತ್ತು ಮರಾಠಿ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮಿಂಚಿರುವ ಕಾಜಲ್ ಕುಂದರ್, ಪ್ರಭು ಮಂದ್ಕೂರ್ ಅಭಿನಯದ ಮಾಯಾ ಕನ್ನಡಿ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಕಾಲಿಟ್ಟಿದ್ದರು. ಸದ್ಯ ವಿನಯ್ ರಾಜ್‍ಕುಮಾರ್ ಜೊತೆಗೆ ಪೆಪೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪೆಪೆ ಚಿತ್ರಕ್ಕೆ ಶ್ರೀಲೇಶ್ ಎಸ್.ನಾಯರ್ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್‍ಕಟ್ ಹೇಳುತ್ತಿದ್ದು, ಚಿತ್ರವನ್ನು ಉದಯ್‍ಶಂಕರ್ ಎಸ್. ಹಾಗೂ ನಿಜಗುಣ ಗುರುಸ್ವಾಮಿ ಅವರು ನಿರ್ಮಾಣ ಮಾಡುತ್ತಿz್ದÁರೆ. ಈ ಸಿನಿಮಾದಲ್ಲಿ ತನ್ನ ಹಿಂದಿನ ಎ¯್ಲÁ ಚಿತ್ರಗಳಿಗಿಂತ ಕೊಂಚ ವಿಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಿರುವ ನಟ ವಿನಯ್ ರಾಜ್‍ಕುಮಾರ್ ಅವರ ಪಾತ್ರ ಪೆಪೆ ಸಿನಿಮಾದಲ್ಲಿ ಹೇಗಿರಲಿದೆ ಎನ್ನುವುದು ಅವರ ಅಭಿಮಾನಿಗಳಲ್ಲಿರುವ ಕುತೂಹಲವಾಗಿದೆ. ಸದ್ಯ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ವಿನಯ್ ರಾಜ್‍ಕುಮಾರ್ ಮೊದಲು ಯಾವ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರ್ತಿz್ದÁರೆ ಎಂದು ಕಾದುನೋಡಬೇಕಿದೆ.