ಸೈದಾಪುರ ದುರಂತ ಪ್ರೇಮ ಕಥೆ
ಸಿನಿಮಾ

ಸೈದಾಪುರ ದುರಂತ ಪ್ರೇಮ ಕಥೆ

April 24, 2021

ಯಾದಗಿರಿ ಜಿಲ್ಲೆಗೆ ಸೇರಿದ ಚಿಕ್ಕಹಳ್ಳಿ ಸೈದಾಪುರ. ಈಗ ಇದೇ ಹೆಸರಲ್ಲಿ ಚಲನಚಿತ್ರವೊಂದು ತಯಾರಾಗಿದೆ. ಹರೆಯದ ಹೃದಯಗಳ ಪ್ರೇಮಕಥೆ ಒಳಗೊಂಡಿರುವ ಈಚಿತ್ರಕ್ಕೆ ಸತ್ಯ ಲವ್‍ಸ್ಟೋರಿ ಎಂಬ ಅಡಿಬರಹವೂ ಇದೆ. ಶ್ರೀರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ರೇಣುಕಾಂಬ ಥಿಯೇಟರ್‍ನಲ್ಲಿ ನೆರವೇರಿತು. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿನುಮನಸು ಸಂಗೀತ ಸಂಯೋಜನೆ ಮಾಡಿz್ದÁರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ವಿನು ಮನಸು ಈ ಚಿತ್ರದ ಎಲ್ಲಾ ಹಾಡುಗಳು ಸುಂದರವಾಗಿ ಮೂಡಿಬಂದಿವೆ ಎಂದರು. ಚಿತ್ರದ ನಾಯಕ ಭಾನುಪ್ರಕಾಶ್ ಮಾತನಾಡುತ್ತ ಈ ಸಿನಿಮಾ ನನ್ನ ಸಹೋದರನ ಕನಸು. ಚಿತ್ರ ತೆರೆಗೆ ಬರುವ ಮುಂಚೆಯೇ ಅವನು ನಮ್ಮನ್ನು ಬಿಟ್ಟುಹೋದ. ಅಣ್ಣನ ನಿಧನದ ನಂತರ ಊರಿನ ಕೆಲವರು ನಮ್ಮನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆ ಆಯಿತು.

ನಗುವವರ ಮುಂದೆ ನಾವು ಎದ್ದು ನಿಲ್ಲಬೇಕು ಎಂದು ಈ ಸಿನಿಮಾದಲ್ಲಿ ನಟಿಸಿz್ದÉೀನೆ. ನನ್ನ ಅಣ್ಣನ ಸ್ನೇಹಿತರಾದ ಬಿ.ಅಶೋಕ್, ಅಬ್ದುಲ್‍ರೋಫ್ ಸಿದ್ವಿಕ್, ನಿಂಗಪ್ಪ, ಮ¯್ಲÉೀಶ್ ಮುಂತಾದವರು ನನ್ನ ಜೊತೆ ನಿಂತು ಈ ಚಿತ್ರವನ್ನು ಬಿಡುಗಡೆಯ ಹಂತದವರೆಗೂ ತಂದಿz್ದÁರೆ ಎಂದು ಹೇಳಿದರು.

ಹೈದರಾಬಾದ್ ಮೂಲದ ಸಂಗೀತ ಚಿತ್ರದ ನಾಯಕಿ. ಕನ್ನಡದಲ್ಲಿ ನನಗೆ ಇದು ಚೊಚ್ಚಲ ಚಿತ್ರ. ಒಬ್ಬ ಹೈಸ್ಕೂಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿ ದ್ದೇನೆ. ಅರಿಯದ ವಯಸ್ಸಿನಲ್ಲಿ ಪ್ರೀತಿ ಮಾಡಿದರೆ ಏನಾಗುತ್ತದೆ ಎನ್ನುವುದೇ ಈ ಚಿತ್ರದ ಕಥೆ. ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ, ನೋಡುಗರ ಮನದಲ್ಲಿ ಉಳಿಯುತ್ತದೆ ಎಂದರು.

ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆ ಯಾಗುತ್ತಿದ್ದು, ಅದರ ಮುಖ್ಯಸ್ಥ ಸುರೇಶ್ ಚಿಕ್ಕಣ್ಣ ಹಾಗೂ ಚಿತ್ರತಂಡದ ಅನೇಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ತಮ್ಮ ಅನುಭವ ಹಂಚಿಕೊಂಡರು. ಕೋವಿಡ್‍ನಿಂದ ಬಳಲುತ್ತಿರುವ ಚಿತ್ರದ ನಿರ್ದೇಶಕ ಶ್ರೀರಾಮ್ ಸಮಾರಂಭದಲ್ಲಿ ಉಪಸ್ಥಿತರಿರಲಿಲ್ಲ. ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪ್ರೀತಿಯ ಬಲೆಗೆ ಬಿz್ದÁಗ ಮುಂದೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥಾಸಾರಾಂಶ.

ಮಾಣಿಕ್ಯ ಪ್ರಭು ಹಾಗೂ ತಮ್ಮುಡುಸಾಯಿ ಅವರ ಛಾಯಾಗ್ರಹಣ, ಬಾಲು ಅವರ ನೃತ್ಯ ನಿರ್ದೇಶನ, ಕವಿತ ಬಂಡಾರಿ ಅವರ ಸಂಕಲನವಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಹಿನ್ನೆಲೆ ಸಂಗೀತ ನೀಡಿz್ದÁರೆ. ಈಗಾಗಲೇ ಚಿತ್ರೀಕರಣ ಹಾಗೂ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಸೈದಾಪುರ ಕೊರೊನಾ ನಂತರ ತೆರೆಗೆ ಬರಲಿದೆ.

Translate »