ಕಾಗಿನೆಲೆ ಶಾಖಾ ಮಠದಲ್ಲಿ ಕನಕದಾಸ ಜಯಂತಿ ಆಚರಣೆ
ಮೈಸೂರು

ಕಾಗಿನೆಲೆ ಶಾಖಾ ಮಠದಲ್ಲಿ ಕನಕದಾಸ ಜಯಂತಿ ಆಚರಣೆ

November 23, 2021

ಮೈಸೂರು,ನ.22(ಎಂಟಿವೈ)- ಮೈಸೂ ರಿನ ಸಿದ್ಧಾರ್ಥನಗರದಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದಲ್ಲಿ ಸೋಮ ವಾರ ಭಕ್ತ ಕನಕದಾಸರ ಜಯಂತ್ಯುತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕನಕದಾಸರ ಪ್ರತಿಮೆಗೆ ಕಾಗಿನೆಲೆ ಗುರು ಪೀಠದ ಶಾಖಾ ಮಠದ ಸ್ವಾಮೀಜಿ ಶ್ರೀ ಶಿವಾ ನಂದಪುರಿ ಸ್ವಾಮೀಜಿ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಇನ್ನಿ ತರ ಗಣ್ಯರು ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಿಸಿದರು.
ಇದೇ ವೇಳೆ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿವರ್ಷವೂ ಮೆರವಣಿಗೆ ಮೂಲಕ ಸಾವಿರಾರು ಜನ ಕನಕದಾಸರ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ವೈಭವದ ಮೆರ ವಣಿಗೆಯಲ್ಲಿ ಕನಕದಾಸರ ಪುತ್ಥಳಿಯನ್ನು ಅರಮನೆ ಮುಂಭಾಗದಿಂದ ವಿವಿಧ ರಸ್ತೆ ಯಲ್ಲಿ ಸಾಗಿ, ಕಲಾಮಂದಿರಕ್ಕೆ ಕೊಂಡೊ ಯ್ಯಲಾಗುತ್ತಿತ್ತು. ಈ ಬಾರಿ ಚುನಾವಣಾ ನೀತಿ ಸಂಹಿತೆ ಹಾಗೂ ಕೊರೊನಾ ಆತಂಕ ದಿಂದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಅಜ್ಞಾನದ ಕತ್ತಲೆ ಹೋಗಲಾಡಿಸಿದರು. ಸಮಾಜದ ಮೌಢ್ಯ -ಕಂದಾಚಾರಗಳನ್ನು ಪ್ರಶ್ನಿಸಿದರು. ದಾಸಶ್ರೇಷ್ಠ ರಾಗಿರುವ ಕನಕದಾಸರ ತತ್ವ-ಸಂದೇಶ ವನ್ನು ಎಲ್ಲರೂ ಪಾಲನೆ ಮಾಡಬೇಕು. ಶೀಘ್ರದಲ್ಲಿ ಕೊರೊನಾ ನಿವಾರಣೆಯಾಗಿ ಎಲ್ಲರೂ ನೆಮ್ಮದಿಯಿಂದ ಬದುಕು ವಂತಾಗಲಿ ಎಂದು ಆಶಿಸಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕನಕದಾಸರ ಜಯಂತಿ ಯನ್ನು ಪ್ರತಿವರ್ಷ ಉತ್ಸವದಂತೆ ಆಚರಿಸ ಲಾಗುತ್ತಿತ್ತು. ಸಭಾ ಕಾರ್ಯಕ್ರಮ ಮಾತ್ರ ವಲ್ಲದೆ, ಜಗನ್ಮೋಹನ ಅರಮನೆಯಲ್ಲಿ 3 ದಿನಗಳ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮ ನಡೆಯುತ್ತಿತ್ತು. ಸಮುದಾಯದ ಪ್ರತಿ ಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕ ರಿಗೆ ಸನ್ಮಾನ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸರಳವಾಗಿ ಕಾರ್ಯಕ್ರಮ ಆಚರಿಸುತ್ತಿದ್ದರೂ ಕನಕದಾಸರ ಆದರ್ಶ, ತತ್ವ ಪಾಲನೆಯನ್ನು ಸದಾ ನಾವು ಮಾಡಬೇಕಾಗಿದೆ ಎಂದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದುವುದರೊಂದಿಗೆ ಜಾತೀಯತೆ ತೊಡೆದು ಹಾಕಲು ಕನಕದಾಸರು ಮಾಡಿದ ಪ್ರಯತ್ನ ಅಮೋಘ. ಕೀರ್ತನೆಗಳ ಮೂಲಕ ಸಮಾಜ ವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿ ದರು ಎಂದು ಶ್ಲಾಘಿಸಿದರಲ್ಲದೆ, ನಂಜು ಮಳಿಗೆಯಲ್ಲಿ ಪಾಲಿಕೆ ಕನಕದಾಸ ಪ್ರತಿಮೆ ತೆರವುಗೊಳಿಸಿರುವುದು ಸರಿಯಲ್ಲ. ಒಕ್ಕೊ ರಲಿನಿಂದ ಖಂಡಿಸಬೇಕು. ಹೋರಾಟಕ್ಕೆ ಸ್ವಾಮೀಜಿಯವರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕನಕದಾಸರ ಕೀರ್ತನೆ ಗಾಯನ: ಇದೇ ವೇಳೆ ಕನಕದಾಸರ ಕೀರ್ತನೆಗಳ ಗಾಯನವೂ ನಡೆಯಿತು. ಆನಂದ ಕುಮಾರ್ ಕಂಬಳಿ ಅವರ ಗಾಯನಕ್ಕೆ ಮೃತ್ಯುಂಜಯ ಹಿರೇ ಮಠ-ಹಾರ್ಮೋನಿಯಂ, ರಾಜೇಶ್-ತಾಳವಾದ್ಯ, ಭೀಮಶಂಕರ ಬಿದನೂರು- ತಬಲ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಪಾಲಿಕೆ ಸದಸ್ಯರಾದ ಜೆ. ಗೋಪಿ, ರಮೇಶ್, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಪಾಲಿಕೆ ಮಾಜಿ ಸದಸ್ಯರಾದ ಎಂ.ಕೆ.ಶಂಕರ್, ರಮೇಶ್, ಸಂತ ಶ್ರೀ ಕನಕ ದಾಸರ ಜಯಂತ್ಯುತ್ಸವ ಸಮಿತಿ ಪ್ರಧಾನ ಕಾರ್ಯ ದರ್ಶಿ ಬ್ಯಾಂಕ್ ಎಂ.ಪುಟ್ಟಸ್ವಾಮಿ, ಜಯಂತ್ಯುತ್ಸವ ಸಮಿತಿ ಸಂಚಾಲಕ ಎಂ.ಶಿವಣ್ಣ, ಪದಾಧಿ ಕಾರಿಗಳಾದ ಚೌಹಳ್ಳಿ ಪುಟ್ಟಸ್ವಾಮಿ, ಮಹ ದೇವಪ್ಪ, ಮಾದೇಗೌಡ, ಜೆ.ಮಹದೇವಪ್ಪ, ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವಿ, ನಾಡನಹಳ್ಳಿ ರವಿ, ಕಾಂಗ್ರೆಸ್ ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ, ಎಂ.ಎ.ಕಮಲಾ ಅನಂತರಾಮ್, ವರಕೋಡು ದೊಡ್ಡೇಗೌಡ, ಮೈಸೂರು ಬಸವಣ್ಣ ಇನ್ನಿತರರು ಪಾಲ್ಗೊಂಡಿದ್ದರು.

Translate »