ಮೈಸೂರು, ನ. 22- ಕೆ.ಆರ್. ಕ್ಷೇತ್ರದ ಬಿಜೆಪಿ ವತಿಯಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಶಾಸಕ ಎಸ್.ಎ.ರಾಮದಾಸ್ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಮಹಾತ್ಮರ ಜಯಂತಿಯನ್ನು ಒಂದೊಂದು ಜಾತಿಗೆ ಸೀಮಿತ ಮಾಡಬಾರದು. ಅವರು ಇಡೀ ಸಮಾಜದ ಆಸ್ತಿ. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾ ರದ ವತಿಯಿಂದ ಕನಕ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಯಿತು. ಆಗ ನನಗೂ ಸಹ ಜಿಲ್ಲಾ ಮಂತ್ರಿಯಾಗಿ ಆಚರಣೆ ಮಾಡುವ ಸದವಕಾಶ ದೊರೆ ತಿದ್ದು ನನ್ನ ಪುಣ್ಯ. ಪರಮಾತ್ಮ ಕೃಷ್ಣ ಒಲಿಸಿ ಕೊಂಡ ಕನಕರು ದೈವಿ ಪ್ರೇರಣೆಯಂತೆ ಅವರು ಕಾವ್ಯಗಳ ಮೂಲಕ ನಮಗೆ ಸಂದೇಶ ನೀಡಿದರು. ಕನಕದಾಸರ ಒಂದೊಂದು ಕಾವ್ಯವನ್ನು ಓದಿ ತಿಳಿದುಕೊಂಡಾಗ ನಮಗೆ ಜೀವನ ಏನು ಎಂದು ಅರ್ಥ ವಾಗುತ್ತದೆ. ಕನಕದಾಸರ ಜಯಂತಿಯನ್ನು ಒಂದು ದಿನ ಆಚರಣೆ ಮಾಡಿದರೆ ಉದ್ದೇಶ ಸಾರ್ಥಕವಾಗದು. ದಿನಂಪ್ರತಿ ನಾವು ಅವರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಕೆಆರ್ ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಉಪಾಧ್ಯಕ್ಷ ಬಾಲಕೃಷ್ಣ, ಸಂತೋಷ್ ಶಂಭು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಒಬಿಸಿ ಮೋರ್ಚಾದ ಅಧ್ಯಕ್ಷ ಶಿವಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸೋಮ ಶೇಖರ್, ಪ್ರಸಾದ್‍ಬಾಬು, ರಾಜೇಶ್, ಹೇಮಂತ್‍ಕುಮಾರ್, ಸಂತೋಷ್, ಅನ್ನಪೂರ್ಣ ಇನ್ನಿತರರು ಉಪಸ್ಥಿತರಿದ್ದರು.