ಬಿಜೆಪಿ, ಜೆಡಿಎಸ್ ಕಚೇರಿಗಳಲ್ಲಿ ಕನಕದಾಸ ಜಯಂತಿ ಆಚರಣೆ
ಮೈಸೂರು

ಬಿಜೆಪಿ, ಜೆಡಿಎಸ್ ಕಚೇರಿಗಳಲ್ಲಿ ಕನಕದಾಸ ಜಯಂತಿ ಆಚರಣೆ

November 23, 2021

ಮೈಸೂರು,ನ.22(ಎಂಟಿವೈ)-ಮೈಸೂರಿನ ವಿವಿಧ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಭಕ್ತ ಕನಕ ದಾಸರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕನಕದಾಸರ ಭಾವಚಿತ್ರ, ಪ್ರತಿಮೆ ಪೂಜಿಸಿ, ಗೌರವ ಸಮರ್ಪಿಸಲಾಯಿತು.

ಬಿಜೆಪಿ ಕಚೇರಿ: ಮೈಸೂರು ನಗರ ಬಿಜೆಪಿ ಹಿಂದು ಳಿದ ವರ್ಗಗಳ ಮೋರ್ಚಾದ ವತಿಯಿಂದ ಕನಕ ದಾಸರ ಜಯಂತಿಯನ್ನು ಆಚರಿಸಲಾಯಿತು. ಕಚೇ ರಿಯ ಸಭಾಂಗಣದಲ್ಲಿ ವಿಶೇಷವಾಗಿ ಅಲಂಕರಿಸಿದ್ದ ಕನಕದಾಸರ ಭಾವಚಿತ್ರಕ್ಕೆ ಮೇಯರ್ ಸುನಂದಾ ಪಾಲನೇತ್ರ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ವಿಜಯಲಕ್ಷ್ಮೀ, ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾ ಚಾರ್ಯರ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್, ಯೋಗಪಟು ಹರಿ ಅವರನ್ನು ಸನ್ಮಾ ನಿಸಲಾಯಿತು. ಸಾಮಾಜಿಕ ಚಿಂತಕ ಪ್ರದ್ಯುಮ್ನ ಅವರು ಕನಕದಾಸರ ಜೀವನ ಚರಿತ್ರೆ, ನಡೆದುಬಂದ ದಾರಿಯ ಬಗ್ಗೆ ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು, ಕನಕದಾಸರು ದಾಸ ಸಾಹಿತ್ಯದಲ್ಲಿ ವಿಶ್ವದ ಗಮನ ಸೆಳೆದವರು. ಜಾತಿ ಜಾತಿಯ ತಾರತಮ್ಯವನ್ನು ದಾಸರ ಪದಗಳಲ್ಲಿ ಹೋಗಲಾಡಿಸಿದ ಮಹಾನ್ ಪುರುಷರು. ಇಂತಹ ಮಹಾನ್ ಸಾಧಕನ ಪ್ರತಿಮೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಇಲ್ಲದಿರುವುದು ವಿಷಾದಕರ ಸಂಗತಿ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಕನಕ ಜಯಂತಿಯನ್ನು ಸರ್ಕಾರದಿಂದ ಮಾಡುವ ಮೂಲಕ ರಜೆ ಘೋಷಿಸಿದರು. ಕನಕದಾಸರ ಹೆಸರಿನಲ್ಲಿ ಪ್ರಾಧಿಕಾರ ಮಾಡಿ ಸುಮಾರು 1,200ಕೋಟಿ ಅನು ದಾನವನ್ನು ಮೀಸಲಿಟ್ಟರು. ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಕದಾಸರ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ಹಾಗೂ ಕಾಗಿ ನೆಲೆಯ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ತೋರುತಿರುವುದು ಸಂತೋಷದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್, ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ವಿಭಾಗೀಯ ಪ್ರಭಾರಿ ಮೈವಿ.ರವಿಶಂಕರ್, ನಿಗಮ ಮಂಡಳಿ ಅಧ್ಯಕ್ಷ ರಾದ ಹೆಚ್.ವಿ.ರಾಜೀವ್, ಚಿಕ್ಕಮ್ಮ ಬಸವರಾಜ್, ಎ.ಹೇಮಂತ್‍ಕುಮಾರ್‍ಗೌಡ, ಮೇಲ್ಮನೆ ಚುನಾ ವಣೆಯ ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಯ, ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸುರೇಶ್ ಬಾಬು, ಅನಿಲ್ ಥಾಮಸ್, ನರಸಿಂಹ ರಾಜ ಕ್ಷೇತ್ರದ ಅಧ್ಯಕ್ಷ ಭಾನು ಪ್ರಕಾಶ, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು, ನಗರಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ಕೆ.ಜೆ.ರಮೇಶ್, ಜಗದೀಶ್, ಪಾಲಿಕೆ ಮಾಜಿ ಸದಸ್ಯರಾದ ಶಿವಕುಮಾರ್, ಎಂ.ಕೆ.ಗೋಪಾಲ್, ಗೋಪಾಲ್, ಮಣಿರತ್ನಂ, ಸೂರಜ್, ಕೃಷ್ಣ,ಜೀವನ್, ಕೇಬಲ್ ಮಹೇಶ್, ಜಯರಾಮ್, ರವಿತೇಜ, ಸೂರಜ್ ಇನ್ನಿತರರು ಪಾಲ್ಗೊಂಡಿದ್ದರು.

ಜೆಡಿಎಸ್ ಕಚೇರಿಯಲ್ಲಿ: ಮೈಸೂರಿನ ಜೆಡಿಎಸ್ ಕಚೇರಿಯಲ್ಲೂ ಕನಕದಾಸರ ಜಯಂತಿ ಆಚರಿಸ ಲಾಯಿತು. ಕನಕದಾಸರ ಭಾವಚಿತ್ರಕ್ಕೆ ಜೆಡಿಎಸ್ ನಗರಾ ಧ್ಯಕ್ಷ ಕೆ.ಟಿ.ಚೆಲುವೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಮಾಜಿ ಉಪಮೇಯರ್ ವಿ.ಶೈಲೇಂದ್ರ, ಪಾಲಿಕೆ ಸದಸ್ಯರಾದ ರಮೇಶ್, ಎಸ್‍ಬಿಎಂ ಮಂಜು, ಪ್ರೇಮಾಶಂಕರೇಗೌಡ, ಮುಖಂಡ ಪ್ರಕಾಶ್ ಪ್ರಿಯ ದರ್ಶನ್, ಪೈಲ್ವಾನ್ ಚಿಕ್ಕಪುಟ್ಟಿ ಇನ್ನಿತರರು ಇದ್ದರು.
ಕಾಂಗ್ರೆಸ್ ಕಚೇರಿ: ಕಾಂಗ್ರೆಸ್ ಕಚೇರಿಯಲ್ಲೂ ಕನಕ ದಾಸರ ಜಯಂತಿ ಆಚರಿಸಲಾಯಿತು. ಪಕ್ಷದ ಶಾಸಕರು ಬೇರೆ ಬೇರೆ ಸ್ಥಳದಲ್ಲಿ ನಡೆದ ಕನಕದಾಸರ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯ ಕರ್ತರೇ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Translate »