ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು: ಸಚಿವ ಸೋಮಣ್ಣ
ಕೊಡಗು

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು: ಸಚಿವ ಸೋಮಣ್ಣ

November 3, 2020

ಮಡಿಕೇರಿ,ನ.2-ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧ್ವಜಾ ರೋಹಣ ನೆರವೇರಿಸಿದರು. ಈ ವೇಳೆ ಕೊಡಗು ಜಿಲ್ಲಾ ಸಶಸ್ತ್ರ ಪೊಲೀಸ್, ಸಿವಿಲ್ ಪೊಲೀಸ್, ಗೃಹ ರಕ್ಷಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಥ ಸಂಚಲನದ ಮೂಲಕ ಸಚಿವರಿಗೆ ಗೌರವ ವಂದನೆ ಸಲ್ಲಿಸಿದರು.

ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಕನ್ನಡ ರಾಜ್ಯೋತ್ಸವ ನವೆಂಬರ್‍ಗೆ ಮಾತ್ರ ಸೀಮಿತವಾಗದೆ ಕವಿ ಮನದ ಆಶಯದಂತೆ ನಿತ್ಯೋತ್ಸವವಾಗಬೇಕು ಎಂದು ಆಶಿಸಿದರು.

ಯುವ ಸಮುದಾಯ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. 8 ಜ್ಞಾನ ಪೀಠ ಪ್ರಶಸ್ತಿಗಳು ದೊರಕಿರುವ ಕನ್ನಡ ನಾಡಿನ ಶ್ರೀಮಂತ ಸಂಸ್ಕøತಿಯನ್ನು ಜಗತ್ತಿಗೆ ಪರಿಚಯಿ ಸಬೇಕು. ಅಖಂಡ ಕರ್ನಾಟಕ ನಿರ್ಮಿ ಸಲು ಹೋರಾಡಿದ ಪ್ರತಿಯೊಬ್ಬರನ್ನು ಈ ವೇಳೆ ನಾವು ಸ್ಮರಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಸತತ 3 ವರ್ಷಗಳ ಪ್ರಾಕೃತಿಕ ವಿಕೋಪವನ್ನು ಕೊಡಗು ಜಿಲ್ಲೆ ಎದುರಿ ಸಿದ್ದು, ಜನರು ತತ್ತರಿಸಿದ್ದಾರೆ. ವಿಕೋಪ ದಿಂದ ಸಂತ್ರಸ್ತರಾದವರಿಗೆ ಮನೆಗಳ ನಿರ್ಮಾಣ ಮತ್ತು ಸಹಾಯ ಧನ, ಮನೆ ಹಾಗೂ ಬೆಳೆಹಾನಿಗೆ ಪರಿಹಾರ, ರಸ್ತೆ, ಸೇತುವೆ, ತಡೆಗೋಡೆ, ಮೂಲ ಸೌಕರ್ಯ ಸೇರಿದಂತೆ ಸಂತ್ರಸ್ತರ ಬದುಕನ್ನು ಕಟ್ಟಿಕೊಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ಪ್ರತಿಯೊಬ್ಬರೂ ಶುಚಿತ್ವಕ್ಕೆ ಒತ್ತು ನೀಡಿ, ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೊನಾ ಮಹಾಮಾರಿ ಯನ್ನು ರಾಜ್ಯದಿಂದ ಓಡಿಸಬೇಕೆಂದು ಕರೆ ನೀಡಿದ ಸಚಿವರು ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು.

ಇದೇ ಸಂದರ್ಭ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಯ ವಿದ್ಯಾರ್ಥಿ ನಿಯರಿಗೆ ಸಚಿವ ವಿ.ಸೋಮಣ್ಣ, ಸರ್ಕಾರದ ಲ್ಯಾಪ್‍ಟಾಪ್ ವಿತರಿಸಿದರು.

ಈ ಸಂದರ್ಭ ಶಾಸಕರಾದ ಕೆ.ಜಿ. ಬೋಪಯ್ಯ, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿ ಕಾರಿ ಕ್ಷಮಾ ಮಿಶ್ರ, ಸಚಿವರ ಪತ್ನಿ ಶೈಲಜಾ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಪಂ ಸಿಇಓ ಭಂವರ್‍ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾ ಧಿಕಾರಿ ಈಶ್ವರ್‍ಕುಮಾರ್ ಖಂಡು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

 

Translate »