ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು
ಮೈಸೂರು

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು

December 1, 2021

ಮೈಸೂರು, ನ.30(ಪಿಎಂ)- ಕನ್ನಡ ಭಾಷೆ ಉಳಿಸಿ-ಬೆಳೆಸುವ ಬಗ್ಗೆ ಕೇವಲ ಮಾತನಾಡುವುದೇ ಹೆಚ್ಚಾಗುತ್ತಿದೆಯೇ ಹೊರತು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗುವಲ್ಲಿ ಹಿಂದುಳಿದಿದ್ದೇವೆ ಎಂದು ಹಿರಿಯ ಲೇಖಕ ಶಿವಕುಮಾರ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಡಿ.ದೇವರಾಜ ಅರಸು ರಸ್ತೆ ಯಲ್ಲಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಸಂಸ್ಥೆ ಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋ ತ್ಸವದಲ್ಲಿ ಅವರು ಮಾತನಾಡಿದರು.

ಕನ್ನಡದ ನಂತರ ಹುಟ್ಟಿದ ನೆರೆಯ ಭಾಷೆ ಗಳು ಬೆಳವಣಿಗೆ ಕಾಣುತ್ತಿವೆ. ಆದರೆ ಈ ಭಾಷೆ ಗಳಿಗೂ ಹೆಚ್ಚಿನ ಪ್ರಾಚೀನತೆ ಹೊಂದಿರುವ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸರಿಯಾದ ಕಾರ್ಯ ಯೋಜನೆಗಳು ರೂಪುಗೊಳ್ಳುತ್ತಿಲ್ಲ ಎಂದು ವಿಷಾದಿಸಿದ ಅವರು, ನಮ್ಮ ಭಾಷೆ ಬೆಳೆಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳು ನಡೆಯ ಬೇಕಿದೆ. ಕನ್ನಡ ಭಾಷೆ ಬೆಳವಣಿಗೆಗೆ ಇರುವ ಅಡೆತಡೆ ನಿವಾರಿಸುವ ನಿಟ್ಟಿನಲ್ಲಿ ಕನ್ನಡ ಸೇವೆಗೆ ಅಣಿಯಾಗಬೇಕು ಎಂದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತ ನಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾನು ಅರ್ಜಿ ಹಾಕಿರಲಿಲ್ಲ. ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ನನಗೆ ಹೆಚ್ಚಿನ ಜವಾಬ್ದಾರಿ ನೀಡ ಲಾಗಿದೆ ಎಂದೇ ಭಾವಿಸಿದ್ದೇನೆ. ಪ್ರಾಮಾ ಣಿಕವಾಗಿ ಸೇವೆ ಸಲ್ಲಿಸುವವರಿಗೆ ಪ್ರಶಸ್ತಿಗಳು ಅವಶ್ಯಕವೇನಲ್ಲ. ನನ್ನ ಸೇವೆಯನ್ನು ಪರಿ ಗಣಿಸಿ ಪ್ರಶಸ್ತಿ ನೀಡಿದ್ದು, ಹೆಮ್ಮೆ ಅನಿಸಿತು. ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಇದಕ್ಕೂ ಮುನ್ನ ತಾಯಿ ಭುವನೇ ಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿ ಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಹಿರಿಯ ಲೇಖಕ ಶಿವಕುಮಾರಸ್ವಾಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪತ್ರಕರ್ತ ಅನಂತ ಪದ್ಮನಾಭ್ ಮತ್ತು ಜಿಲ್ಲಾ ಮಟ್ಟದ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕøತ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್, ಕಾರ್ಯ ದರ್ಶಿ ಶ್ರೀಶೈಲರಮಣ್ಣನವರ್, ಖಜಾಂಚಿ ಬನ್ಸಾಲಿ, ಸದಸ್ಯರಾದ ಪ್ರತಾಪ್‍ಕುಮಾರ್, ಕೆ.ಬಿ.ಲಿಂಗರಾಜು, ಶಿವಾಜಿರಾವ್, ಸುಬ್ರಹ್ಮಣ್ಯಂ, ಅಶೋಕ್, ಗಣೇಶ್, ಎಪಿಎಂಸಿ ರಮೇಶ್, ಬಿ.ಟಿ.ವೆಂಕಟೇಶ್, ಆರ್.ಎನ್.ಶ್ರೀನಿವಾಸ್, ವ್ಯವಸ್ಥಾಪಕಿ ಭಾರತಿ ಮತ್ತಿತರರಿದ್ದರು.

Translate »