ಪಡುವಾರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಮೈಸೂರು

ಪಡುವಾರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

November 28, 2021

ಮೈಸೂರು,ನ.26-ಮೈಸೂರಿನ ಪಡು ವಾರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಇಲ್ಲಿನ ನವಜ್ಯೋತಿ ಕನ್ನಡ ಯುವಕರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಮಾತನಾಡಿ, ಕನ್ನಡ ಭಾಷೆ, ನೆಲ-ಜಲ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಭಾವಿಸಿ ಸತ್ಕಾರ್ಯಗಳನ್ನು ನಡೆಸಬೇಕು. ಪುನೀತ್ ರಾಜ್‍ಕುಮಾರ್ ಎಲ್ಲಾ ವಯೋಮಾನದ ಪ್ರೇಕ್ಷಕರ ಮನಮುಟ್ಟಿದ್ದರು. ಜೊತೆಗೆ ಹಲವು ಸಾಮಾಜಿಕ ಸೇವೆಗಳ ಮೂಲಕ ಸಾರ್ಥ ಕತೆ ಸಾಧಿಸಿದ್ದರು ಎಂದರು.

ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳಿಗೆ ಪುನೀತ್ ರಾಜ್ ಕುಮಾರ್ ಭಾವಚಿತ್ರವುಳ್ಳ ನೋಟ್ ಪುಸ್ತಕ, ಪೆನ್ಸಿಲ್ ಇನ್ನಿತರ ಕಲಿಕಾ ಸಾಮಗ್ರಿ ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಡಾ.ರವೀಶ್, ದಿ ಮೈಸೂರು ಕೋ ಆಪ ರೇಟಿವ್ ಅಧ್ಯಕ್ಷ ಕೆ.ಉಮಾಶಂಕರ್, ಗ್ರಾಮಾ ಭ್ಯುದಯ ಟ್ರಸ್ಟ್ ಕಾರ್ಯದರ್ಶಿ ಎಂ.ಭೈರಪ್ಪ, ಸಿ.ಜಿ.ಗಂಗಾಧರ್, ಜೆಡಿಎಸ್ ಮುಖಂಡ ಟಿ.ಸೋಮು, ಎನ್.ಚಂದ್ರಶೇಖರ್, ಡಾ. ಎಂ.ಆರ್.ಲೋಕೇಶ್, ಪಾಲಿಕೆ ಮಾಜಿ ಸದಸ್ಯ ಸಿ.ಶ್ರೀರಾಮ್, ಎನ್.ಬೆಟ್ಟೇಗೌಡ, ಪಡುವಾರಹಳ್ಳಿ ಎಂ.ರಾಮಕೃಷ್ಣ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇ ಶಕರಾದ ಈ.ಲೋಕೇಶ್ವರ, ಸಿ.ಡಿ.ಕುಮಾರ್, ಎಂ.ಸೋಮಣ್ಣ, ಬಿ.ಕುಮಾರ್, ರಾಘವ್ ಗೌಡ, ಕಮಲಮ್ಮ, ಮಹಾಲಕ್ಷಿ, ಸಂತೋಷ್, ಪ್ರದೀಪ್ ನಾಯಕ, ಕೆ.ಸುರೇಶ್, ಸಂಘದ ಅದ್ಯಕ್ಷ ಜೆ.ಯೋಗೇಶ್, ಪದಾಧಿಕಾರಿಗಳಾದ ಪೇಪರ್ ಕೃಷ್ಣ, ವಿಜಯ್, ಸಂತೋಷ, ಚೇತನ್, ವರುಣ್, ಯಶ್ವಂತ್ ಇದ್ದರು.

Translate »