ಕರ್ನಾಟಕ ಸಿಎಂ ಕೆಲವರ `ಪಂಚಿಂಗ್ ಬ್ಯಾಗ್’ ಆಗಿದ್ದಾರೆ
ಮೈಸೂರು

ಕರ್ನಾಟಕ ಸಿಎಂ ಕೆಲವರ `ಪಂಚಿಂಗ್ ಬ್ಯಾಗ್’ ಆಗಿದ್ದಾರೆ

February 11, 2019

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಯಲ್ಲಿ ಇಂದು ಲೋಕಸಭಾ ಚುನಾವಣೆ ಪಾಂಚಜನ್ಯ ಮೊಳಗಿದ್ದು, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು `ಪಂಚಿಂಗ್ ಬ್ಯಾಗ್’ ಎಂದು ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯ ಕೆಎಲ್‍ಇ ಮೆಡಿಕಲ್ ಕಾಲೇಜು ಮೈದಾನದಲ್ಲಿ ಇಂದು ಸಂಜೆ ನಡೆದ ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತ ನಾಡಿದ ಅವರು, ತಮ್ಮ 25 ನಿಮಿಷಗಳ ಭಾಷಣ ದಲ್ಲಿ ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಹರಿಯಾ ಯ್ದರು. ಕರ್ನಾಟಕ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಾರ್ಯಾರದೋ ಪಂಚಿಂಗ್ ಬ್ಯಾಗ್ ಆಗಿದ್ದಾರೆ. ಅವರಿಗೆ ಪ್ರತೀ ದಿನ ಧಮ್ಕಿಗಳು ಬರುತ್ತಿವೆ. ಮುಖ್ಯಮಂತ್ರಿಗಳಿಗೆ ಯಾರ್ಯಾರೋ ಸವಾಲು ಹಾಕುತ್ತಿದ್ದಾರೆ. ಅವರು ದೆಹಲಿಗೆ ಬಂದು ಕೆಲವರ ಮುಂದೆ ಅಸಹಾಯಕತೆಯ ಕಣ್ಣೀರು ಹಾಕುತ್ತಿದ್ದಾರೆ. ಅವರು ಸರ್ಕಾರ ನಡೆಸುವುದಕ್ಕಿಂತ ಉಳಿಸಿಕೊಳ್ಳುವ ಒತ್ತಡದಲ್ಲಿ ಮಜಬೂರಿ (ಅನಿವಾರ್ಯ) ಮುಖ್ಯಮಂತ್ರಿಯಾಗಿದ್ದಾರೆ ಎಂದು ಲೇವಡಿ ಮಾಡಿದರು. ಕರ್ನಾಟಕ ಕಾಂಗ್ರೆಸ್ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಕಾಂಗ್ರೆಸ್ ಶಾಸಕರು ರೆಸಾರ್ಟ್‍ನಲ್ಲಿ ಹೊಡೆದಾಡಿ ಕೊಳ್ಳುತ್ತಿದ್ದಾರೆ. ತಲೆ ಒಡೆದು ಹಾಕುತ್ತಿದ್ದಾರೆ. ಕರ್ನಾಟಕ ಸರ್ಕಾರದ ಉಸ್ತುವಾರಿ ಯಾರು ಎಂಬುದೇ ಗೊಂದಲದಲ್ಲಿದೆ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವುದು ಅನಿವಾರ್ಯ ಸರ್ಕಾರವಾಗಿದೆ. ಕೇಂದ್ರದಲ್ಲೂ ಇದೇ ತರಹದ ಅನಿವಾರ್ಯ ಸರ್ಕಾರವನ್ನು ರಚಿಸಬೇಕೆಂಬ ಪ್ರಯತ್ನಗಳು ನಡೆಯು ತ್ತಿವೆ. ಅದನ್ನು ಜನರು ವಿರೋಧಿಸಬೇಕು ಎಂದು ಕರೆ ನೀಡಿದರು.

ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿದ ಅವರು, 43 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದ ಕರ್ನಾಟಕ ಮೈತ್ರಿ ಸರ್ಕಾರ ಈಗ ಕೇವಲ 100ಕ್ಕೆ 25-30ರಷ್ಟು ಮಾತ್ರ ಸಾಲ ಮನ್ನಾ ಮಾಡಿದೆ. ಇವರ ಸಾಲ ಮನ್ನಾ ಯೋಜನೆ 10 ವರ್ಷಗಳಷ್ಟು ಸುದೀರ್ಘದ್ದಾಗಿದೆ. ಆದರೆ ನಮ್ಮ ಸರ್ಕಾರ ರೈತರಿಗೆ 100ಕ್ಕೆ 90ರಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಅವರು ಹೇಳಿದರು.

ಕಳೆದ 40ರಿಂದ 50 ವರ್ಷಗಳಲ್ಲಿ ಸರ್ಕಾರಗಳು ಮಾಡದ ಕೆಲಸಗಳನ್ನು ನಮ್ಮ ಸರ್ಕಾರ ಕೇವಲ 55 ತಿಂಗಳಲ್ಲಿ ಮಾಡಿ ಮುಗಿಸಿದೆ. ಬಡವರು ಮಾತ್ರವಲ್ಲ, ಎಲ್ಲಾ ವರ್ಗದವರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಹಲವಾರು ಭರವಸೆ ಗಳನ್ನು ಈಡೇರಿಸಿರುವ ನವಭಾರತದ ಕನಸುಗಳನ್ನು ಸಾಕಾರಗೊಳಿಸಲು ಹೊರಟಿ ರುವ ನಮ್ಮ ಸರ್ಕಾರವನ್ನು ಮತದಾರರು ಮತ್ತೊಮ್ಮೆ ಬೆಂಬಲಿಸಬೇಕು. ಪ್ರಾಮಾಣಿಕತೆ, ಪಾರದರ್ಶಕತೆ, ಭ್ರಷ್ಟಾಚಾರ ಮುಕ್ತ ಸರ್ಕಾರ ಬೇಕಿದ್ದರೆ ನಮ್ಮನ್ನು ಮತ್ತೆ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, ಇಂದು ವಸಂತ ಪಂಚಮಿ. ಹವಾಮಾನದ ಬದಲಾವಣೆ ಆಗಲಿದೆ. ಕರ್ನಾಟಕದಲ್ಲೂ ರಾಜಕೀಯ ಹವಾಮಾನ ಬದಲಾಗಬೇಕು. ಇಲ್ಲಿ ನಡೆದಿರುವ ಲಕ್ಷಾಂತರ ಅಭಿಮಾನಿಗಳನ್ನು ನೋಡಿದರೆ ರಾಜ್ಯದಲ್ಲೂ ಕೂಡ ರಾಜಕೀಯ ಹವಾಮಾನ ಬದಲಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಅವರು ಹೇಳಿದರು.

ಇಂದು ಸಂಜೆ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಹುಬ್ಬಳ್ಳಿ-ಧಾರವಾಡ ಮೇಯರ್ ಸೇರಿದಂತೆ ಅನೇಕ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು. ಸರ್ಕಾರಿ ಕಾರ್ಯಕ್ರಮ ಮುಗಿದ ನಂತರ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ ಮೋದಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರು ಸನ್ಮಾನಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ಪೊಲೀಸ್ ವಶಕ್ಕೆ: ಧಾರವಾಡದಲ್ಲಿ ಆರಂಭ ವಾಗುತ್ತಿರುವ ಪ್ರತಿಷ್ಠಿತ ಐಐಟಿ ಮತ್ತು ಐಐಐಟಿ ಉನ್ನತ ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರ ಹೆಸರನ್ನೇ ಮುದ್ರಿಸಿಲ್ಲ ಎಂದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಶಂಕುಸ್ಥಾಪನೆ ಸಮಾರಂಭ ಸ್ಥಳದತ್ತ ಧಾವಿಸುತ್ತಿದ್ದ, ಕಪ್ಪು ಬಾವುಟ ಹಿಡಿದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ರಸ್ತೆ ಮಧ್ಯದಲ್ಲಿಯೇ ತಡೆದ ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಎಲ್ಲರನ್ನೂ 3 ಬಸ್‍ಗಳಲ್ಲಿ ಬೇರೆ ಕಡೆಗೆ ಕರೆದೊಯ್ದರು. ಇನ್ನೊಂದೆಡೆ ಭಾರತ ಕಿಸಾನ್ ಕಾಂಗ್ರೆಸ್ ರೈತ ಕಾರ್ಯಕರ್ತರೂ ಕೇಂದ್ರ ಬಜೆಟ್‍ನಲ್ಲಿ ರೈತರಿಗೆ ಮೋಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಇವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನರೇಂದ್ರ ಮೋದಿ

ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ಹಲವು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ತಮಿಳುನಾಡಿನ ತಿರ್ಪುರ್ ನ ಸಮಾ ವೇಶ ಮುಗಿಸಿಕೊಂಡು ಮೋದಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ನೇರವಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ರಿಮೋರ್ಟ್ ಬಟನ್ ಒತ್ತುವ ಮೂಲಕ ಐಐಟಿ ಕಟ್ಟಡದ ಶಂಕುಸ್ಥಾಪನೆ, ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕಕ್ಕೆ ಚಾಲನೆ, ನ್ಯಾಚುರಲ್ ಗ್ಯಾಸ್ ಔಟ್ಲೆಟ್, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ಲೋಕಾ ರ್ಪಣೆ ಹಾಗೂ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕಿಮ್ಸ್ ಕಟ್ಟಡ ಉದ್ಘಾಟಿಸಿ ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಮಾಜಿ ಸಿಎಂ ಸದಾನಂದ ಗೌಡ, ಇನ್ಫೋಸಿಸ್ ಫೌಂಡೇ ಶನ್ ಅಧ್ಯಕ್ಷೆ ಸುಧಾಮೂರ್ತಿ, ಸಚಿವರಾದ ಆರ್.ವಿ.ದೇಶಪಾಂಡೆ, ಸಂಸದ ಪ್ರಹ್ಲಾದ್ ಜೋಶಿ ಪ್ರಧಾನಿಗಳಿಗೆ ಸಾಥ್ ನೀಡಿದರು. ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದ್ದಾರೆ. ಇದೇ ತಿಂಗಳಲ್ಲಿ ಇನ್ನೆರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಫೆಬ್ರವರಿ 19ಕ್ಕೆ ಕಲಬುರಗಿಯಲ್ಲಿ ಸಮಾವೇಶ ನಡೆಸಲಿದ್ದಾರೆ.

ಸರ್ದಾರ್ ಪಟೇಲ್‍ರ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ

ಸರ್ದಾರ್ ಪಟೇಲ್‍ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಪ್ರಧಾನಿ ಮೋದಿ ಇಂದು ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಕೆ.ಎಲ್.ಇ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಯಡಿಯೂರಪ್ಪ ಮೋದಿ ಅವರಿಗೆ ಸರಿಸಾಟಿ ಇರುವ ನಾಯಕ ದೇಶದಲ್ಲಿ ಇನ್ನೊಬ್ಬರಿಲ್ಲ ಎಂದರು.

ರೈತರ ಖಾತೆಗೆ ಹಣ ಸೇರಿ ಕೇಂದ್ರ ಬಜೆಟ್‍ನಲ್ಲಿ ಘೋಷಿಸಿದ ಹಲವು ಯೋಜನೆಗಳನ್ನು ಯಡಿಯೂರಪ್ಪ ಪ್ರಸ್ತಾಪಿಸಿ ಮೋದಿಯನ್ನು ಹೊಗಳಿದ್ದಾರೆ. ಇದೇ ವೇಳೆ ಕುಮಾರಸ್ವಮಿ ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದ ಯಡಿಯೂರಪ್ಪ “ರಾಜ್ಯದ ಪ್ರತಿ ನಾಗರಿಕರ ಮೇಲೆ ಈ ಸರ್ಕಾರ 50 ಸಾವಿರ ರೂ. ಸಾಲ ಹೇರಿಕೆ ಮಾಡಿದೆ. ರೈತರ ಸಾಲ ಮನ್ನಾ ಮಾಡುವೆನೆಂದು ಹೇಳುತ್ತಲೇ ಅವರು ಆರು ತಿಂಗಳಿಗೆ ಹೆಚ್ಚು ಕಾಲ ತಳ್ಳುತ್ತಾ ಬಂದಿದ್ದಾರೆ” ಎಂದರು.

ಸಿದ್ಧಗಂಗಾ ಶ್ರೀ, ಅನಂತಕುಮಾರ್ ಸ್ಮರಣೆ

ಇಲ್ಲಿನ ಕೆಎಲ್‍ವಿ ಮೆಡಿಕಲ್ ಕಾಲೇಜು ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕನ್ನಡದಲ್ಲಿ ಭಾಷಣ ಆರಂಭಿಸಿದರು. ಲಿಂಗೈಕ್ಯರಾದ ಸಿದ್ಧಗಂಗಾ ಶ್ರೀಗಳು ಮತ್ತು ಅಗಲಿದ ಅನಂತ ಕುಮಾರ್ ಅವರನ್ನು ಸ್ಮರಿಸಿದರು. ಈ ಭೂಮಿ ತ್ಯಾಗ, ಸಾಹಸ, ಶೌರ್ಯ, ಇತಿಹಾಸ, ಸಂಸ್ಕøತಿಗೆ ಹೆಸರು. ಈ ಪುಣ್ಯಭೂಮಿ, ಪವಿತ್ರ ಭೂಮಿಗೆ ಬಂದಿದ್ದಕ್ಕೆ ನನಗೆ ರೋಮಾಂ ಚನವಾಗಿದೆ ಎಂದು ಪ್ರಧಾನ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ನಂತರ ಹಿಂದಿಯಲ್ಲಿ ಮಾತನಾಡಿದ ಅವರು, ಈ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ, ಭಕ್ತ ಕವಿ ಕನಕದಾಸ, ಸಂಗೊಳ್ಳಿ ರಾಯಣ್ಣ, ದಾ.ರಾ.ಬೇಂದ್ರೆ, ಗಂಗೂಬಾಯಿ ಹಾನಗಲ್, ಪಂಡಿತ್ ಭೀಮಸೇನ ಜೋಷಿ ಅವರಂತಹ ಮಹಾನ್ ವ್ಯಕ್ತಿಗಳನ್ನು ನೀಡಿದ ಹುಬ್ಬಳ್ಳಿ- ಧಾರವಾಡ ನಿಜಕ್ಕೂ ಪುಣ್ಯಭೂಮಿಯಾಗಿದೆ ಎಂದರು.

ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದ ಮೋದಿ, ಈ ಮಹಾನ್ ಸಮಾವೇಶದಲ್ಲಿ ಒಂದೇ ಒಂದು ಕೊರತೆ ಕಾಣುತ್ತಿದೆ. ಮಹಾನ್ ಸಂಘಟಕ, ಕರ್ನಾಟಕ ಅಭಿವೃದ್ಧಿ ಬಗ್ಗೆ ಸದಾ ಹಾತೊರೆಯುತ್ತಿದ್ದ ಅನಂತಕುಮಾರ್ ಈಗ ನಮ್ಮ ಜೊತೆಯಲ್ಲಿಲ್ಲ. ಆದರೆ ಅವರ ಆಶಯಗಳು ಹಾಗೂ ಅನಂತ್ ಕುಮಾರ್ ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ ಎಂದರು.

Translate »