ತಂದೆ-ತಾಯಿಗಳ ಸೇವೆಯಲ್ಲಿ ಕಾಶಿ ರಾಮೇಶ್ವರ ಕಾಣಬೇಕು
ಮೈಸೂರು

ತಂದೆ-ತಾಯಿಗಳ ಸೇವೆಯಲ್ಲಿ ಕಾಶಿ ರಾಮೇಶ್ವರ ಕಾಣಬೇಕು

March 2, 2021

ಸುತ್ತೂರು: ತಂದೆ ತಾಯಿಯ ಸೇವೆ ಯಲ್ಲಿ ಕಾಶಿ ರಾಮೇಶ್ವರರ ಕಾಣಬೇಕು. ಅವರೇ ನಿಜವಾದ ದೇವರು ಎಂದು ಇಚಲ ಕರಂಜಿಯ ಭಕ್ತಿಯೋಗಾಶ್ರಮದ ಶ್ರೀ ಮಹೇಶಾನಂದ ಸ್ವಾಮಿಗಳವರು ಸುತ್ತೂರಲ್ಲಿ ಏರ್ಪಡಿಸಿದ್ದ ಪ್ರವಚನದಲ್ಲಿ ತಿಳಿಸಿದರು.

ಜನ್ಮ ನೀಡಿ, ಪ್ರೀತಿಯಿಂದ ಕೈ ಹಿಡಿದು ಬದುಕನ್ನು ಕಲಿಸಿ ಜಗತ್ತನ್ನು ತೋರಿಸಿದ ತಾಯಿಯೇ ನಿಜವಾದ ದೇವರು. ಮಂದಿರ ದಲ್ಲಿರುವ ದೇವರು ಬೇಡಿದ ವರ ಕೊಡ ಬಹುದು. ಆದರೆ ತಾಯಿ ನಮ್ಮ ಬದುಕಿಗೆ ಬದುಕಾಗಿ ನೀಡಿ ತನ್ನ ಮಕ್ಕಳಿಗೆ ಸದಾ ಒಳಿತನ್ನು ಬಯಸುವ ಕಣ್ಣಿಗೆ ಕಾಣುವ ದೇವರು ಎಂದರು. ‘ದೂರ ದುರ್ಜನರ ಸಂಗÀ ಅದು ಭಂಗವಯ್ಯ, ಸಾರ ಸಜ್ಜನರ ಸಂಗ ಲೇಸಯ್ಯ’ ಎನ್ನುವಂತೆ ದುಶ್ಚಟರ ಮೂರ್ಖರಿಂದ ಕೂಡಿದ ಸ್ನೇಹ ತರವಲ್ಲ, ಒಳ್ಳೆಯವರ ಸಂಗ ಮಾಡಬೇಕು. ಹೃದಯ ವಂತರಾಗಬೇಕು, ತಂದೆ-ತಾಯಿ, ಗುರು ಹಿರಿಯರ ಮಾತಿನಲ್ಲಿ ಶ್ರದ್ಧೆ ಇರಬೇಕು, ಉಪಕಾರ ಸ್ಮರಣೆ ಇರಬೇಕೆಂದು ಹೇಳಿದರು

ತಂದೆ ತಾಯಿಯ ಸೇವೆಯಲ್ಲಿ ಭಗವಂತ ನನ್ನು ಕಾಣುವ ರೂಹಿದಾಸರು ತನ್ನ ಕೂದಲಿಗೆ ಹಗ್ಗ ಕಟ್ಟಿ ತಂದೆ ತಾಯಿಯನ್ನು ಕೂರಿಸಿದ ತೊಟ್ಟಿಲನ್ನು ತೂಗುತ್ತಾ ಪಾದರಕ್ಷೆಗಳನ್ನು ಮಾಡುವ ಕಾಯಕದಲ್ಲಿ ನಿರತರಾಗಿರುವ ಪ್ರಸಂಗವನ್ನು ತಿಳಿಸುತ್ತಾ ತಂದೆ ತಾಯಿಯ ಮೇಲೆ ಅವರಿಗಿದ್ದ ಅದಮ್ಯ ಪ್ರೀತಿಯನ್ನು ನೆನೆದು ವಿವರಿಸಿದರು. ಮಕ್ಕಳಿಗೆ ತಂದೆ ಯಾಗಿ, ತಾಯಿಯಾಗಿ, ಗುರುವಾಗಿ, ದೇವ ರಾಗಿ ನಿಂತಿರುವ ಸಂಸ್ಥೆ ಎಂದರೆ ಅದು ಜೆಎಸ್‍ಎಸ್ ಸಂಸ್ಥೆ, ಸುತ್ತೂರು ಶ್ರೀಮಠದ ಜಗದ್ಗುರುಗಳು ಕೋಟಿ ಕೋಟಿ ಭಕ್ತರ ಹೃದಯ ಸಿಂಹಾಸನದಲ್ಲಿ ಅಲಂಕರಿಸಿದ್ದಾರೆ ಎಂದರು. ನಂತರ ಶ್ರೀ ಜಯ ರಾಜೇಂ ದ್ರರು ಹಿತವಚನಗಳನ್ನು ನುಡಿದರು. ಪ್ರವ ಚನದಲ್ಲಿ ಪೂಜ್ಯಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳು, ತುಮಕೂರು ಲಕ್ಷ್ಮಿಪೀಠದ ಶ್ರೀ ಜ್ಞಾನಾನಂದಪುರಿ ಸ್ವಾಮಿಗಳು, ಚುಂಚನಹಳ್ಳಿ ಶ್ರೀ, ಆಲಮಟ್ಟಿ ಶ್ರೀ, ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗೂ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Translate »