ವಿಜಯನಗರ ಪೊಲೀಸರಿಂದ ಮೂವರು ಖದೀಮರ ಸೆರೆ
ಮೈಸೂರು

ವಿಜಯನಗರ ಪೊಲೀಸರಿಂದ ಮೂವರು ಖದೀಮರ ಸೆರೆ

March 2, 2021

ಮೈಸೂರು, ಮಾ. 1(ಆರ್‍ಕೆ)- ಮೂವರು ಖದೀಮರನ್ನು ಬಂಧಿಸಿರುವ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, 7,50,000 ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ತಾಲೂಕು, ಮೈದನಹಳ್ಳಿ ಗ್ರಾಮದ ಲೇಟ್ ನಾರಾಯಣಗೌಡರ ಮಗ ಶಿವರಾಜು ಅಲಿ ಯಾಸ್ ಶ್ರೀನಿವಾಸ(34), ಜಯಪುರ ಹೋಬಳಿ ಬೀರಿಹುಂಡಿ ಗ್ರಾಮದ ಕೆಂಪೇಗೌಡರ ಮಗ ಶೇಖರ ಅಲಿಯಾಸ್ ಪಂಗು(20) ಹಾಗೂ ಇಲವಾಲ ಹೋಬಳಿ ಶೆಟ್ಟಿನಾಯಕನಹಳ್ಳಿ ಗ್ರಾಮದ ಗೋಪಯ್ಯ ಅವರ ಮಗ ಚಂದ್ರ ಅಲಿಯಾಸ್ ಚಂದ್ರಕುಮಾರ್(39) ಬಂಧಿತ ಆರೋಪಿಗಳು.

ಫೆಬ್ರವರಿ 27ರಂದು ಸಂಜೆ 7 ಗಂಟೆ ವೇಳೆ ಮೈಸೂ ರಿನ ಹಿನಕಲ್ ಬಳಿ ರಿಂಗ್ ರಸ್ತೆ ಬಳಿ ವಾಹನ ಕಳುವಿಗೆ ಹೊಂಚು ಹಾಕುತ್ತಿದ್ದ ಅವರನ್ನು ಬಂಧಿ ಸಿದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನ ಕಳವು ಮಾಡಿ ಗ್ರಾಮಾಂ ತರ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರೆಂಬುದು ತಿಳಿಯಿತು. ಮೂವರು ಖದೀಮರಿಂದ 7.50,000 ರೂ. ಬೆಲೆಬಾಳುವ 11 ದ್ವಿಚಕ್ರವಾಹನಗಳನ್ನು ಪೊಲೀ ಸರು ವಶಪಡಿಸಿಕೊಂಡರು. 2020ರ ನವೆಂಬರ್ 20ರಂದು ರಾತ್ರಿ ವಿಜಯನಗರ 2ನೇ ಹಂತ, 4ನೇ ಕ್ರಾಸ್‍ನಲ್ಲಿರುವ ಮಲ್ಲೇಶ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್(ಕೆಎ-11, ಇ 4523) ಅನ್ನು ಕಳುವು ಮಾಡಿದ್ದ ಈ ಆರೋಪಿಗಳು ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ 6, ಮೇಟಗಳ್ಳಿ, ಕೆ.ಆರ್., ಇಲವಾಲ, ಜಯಪುರ ಹಾಗೂ ಹೆಬ್ಬಾಳು ಠಾಣಾ ಸರಹದ್ದಿನಲ್ಲಿ ತಲಾ ಒಂದೊಂದು ದ್ವಿಚಕ್ರವಾಹನವನ್ನು ಕಳವು ಮಾಡಿ ದ್ದರೆಂಬುದು ವಿಚಾರಣೆಯಿಂದ ತಿಳಿಯಿತು.

ಭಾನುವಾರ ರಾತ್ರಿ ಆರೋಪಿಗಳನ್ನು ನ್ಯಾಯಾಧೀ ಶರ ಮುಂದೆ ನಿವಾಸದಲ್ಲಿ ಹಾಜರುಪಡಿಸಲಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ವಸತಿ ಬಡಾವಣೆಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ನಕಲಿ ಕೀ ಬಳಸಿ ರಾತ್ರಿ ವೇಳೆ ಕೊಂಡೊಯ್ದು, ಮರು ದಿನವೇ ಹಳ್ಳಿಗಳಿಗೆ ಹೋಗಿ ದಾಖಲಾತಿಗಳನ್ನು 2 ದಿನಗಳಲ್ಲಿ ತಂದು ಕೊಡುತ್ತೇ ವೆಂದು ನಂಬಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು ಎಂಬುದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿದು ಬಂದಿದೆ.

ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್‍ಗೌಡ, ಗೀತಾ ಪ್ರಸನ್ನ ಅವರ ಮಾರ್ಗದರ್ಶನದಂತೆ ಎನ್.ಆರ್.ಉಪವಿಭಾಗದ ಎಸಿಪಿ ಶಿವಶಂಕರ ಅವರ ಮೇಲ್ವಿಚಾರಣೆಯಲ್ಲಿ ಶನಿವಾರ ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಹೆಚ್.ಎನ್. ಬಾಲಕೃಷ್ಣ, ಸಬ್‍ಇನ್ ಸ್ಪೆಕ್ಟರ್‍ಗಳಾದ ರಮೇಶ್ ಮತ್ತು ಇಂದ್ರಮ್ಮ, ಸಿಬ್ಬಂದಿ ಗಳಾದ ಮುರಳೀಧರ, ಶಂಕರ್, ಕೆ.ಎಸ್.ಪ್ರಕಾಶ್, ತಿಲಕಕುಮಾರ್, ಪ್ರದೀಪ್‍ಕುಮಾರ್ ಹಾಗೂ ನಂದೀಶ್ ಅವರು ಪಾಲ್ಗೊಂಡಿದ್ದರು.

Translate »