ಸರ್ಕಾರಿ ಕಚೇರಿ ದಾಖಲೆಗಳ ನಿರ್ವಹಣೆ ಬಹುಮುಖ್ಯ
ಮೈಸೂರು

ಸರ್ಕಾರಿ ಕಚೇರಿ ದಾಖಲೆಗಳ ನಿರ್ವಹಣೆ ಬಹುಮುಖ್ಯ

March 2, 2021

ಮೈಸೂರು,ಮಾ.1(ಪಿಎಂ)- ಮಾಹಿತಿ ಹಕ್ಕು ಕಾಯ್ದೆ (ಆರ್‍ಟಿಐ) ಹಾಗೂ ಸಕಾಲ ಅಧಿನಿಯಮ ಜಾರಿಯಲ್ಲಿರುವ ಹಿನ್ನೆಲೆ ಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ದಾಖಲೆ ಗಳ ನಿರ್ವಹಣೆ ಬಹುಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ.ಗವಿಸಿದ್ದಯ್ಯ ಹೇಳಿದರು.

ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ವತಿಯಿಂದ ಸಾರ್ವಜನಿಕ ದಾಖಲೆಗಳ ಅಧಿನಿಯಮ ಮತ್ತು ದಾಖಲೆಗಳ ನಿರ್ವ ಹಣೆ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ದಾಖಲೆಗಳ ಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ `ಸಾರ್ವಜನಿಕ ದಾಖಲೆಗಳ ಅಧಿನಿಯಮ’ ಇಂದಿಗೆ ಪ್ರಸ್ತುತ. ಇಲ್ಲವಾದರೆ ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಅಪೇಕ್ಷಿಸಿದ ದಾಖಲೆಗಳನ್ನು ನೀಡಲು ಸಾಧ್ಯ ವಾಗುವುದಿಲ್ಲ. ಆರ್‍ಟಿಐ ಮತ್ತು ಸಕಾಲ ಅಧಿನಿಯಮ ಜಾರಿಯಲ್ಲಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕರು ಕೇಳುವ ದಾಖಲೆ ಒದಗಿಸಬೇಕಾಗುತ್ತದೆ. ಒಂದು ವೇಳೆ ನಿಗ ದಿತ ಅವಧಿಯಲ್ಲಿ ಸಾರ್ವಜನಿಕರು ಬಯ ಸಿದ ದಾಖಲೆ ನೀಡದಿದ್ದರೆ ಸಂಬಂಧಿಸಿದ ನೌಕರನ ವೇತನದಲ್ಲಿ 20 ರೂ. ಕಡಿತ ಮಾಡುವ ನಿಯಮ ಜಾರಿಯಲ್ಲಿದೆ ಎಂದರು.

ಸಾರ್ವಜನಿಕ ದಾಖಲೆಗಳ ಅಧಿನಿಯ ಮದ ಪ್ರಕಾರ ಕೆಲ ದಾಖಲೆಗಳನ್ನು ನಿರ್ದಿಷ್ಟ ಕಾಲದವರೆಗೆ ಸಂರಕ್ಷಣೆ ಮಾಡಿ, ಬಳಿಕ ನಾಶಪಡಿಸಬೇಕಾಗುತ್ತದೆ. ಇಲ್ಲವಾದರೆ ಅವುಗಳ ನಿರ್ವಹಣೆಯೇ ದೊಡ್ಡ ಸವಾ ಲಾಗಿ ಪರಿಣಮಿಸಲಿದೆ. ಆದರೆ ಯಾವುದೇ ಸಾರ್ವಜನಿಕ ದಾಖಲೆಗಳನ್ನು ದಾಖಲು ಮಾಡದೇ, ಪುನರ್ ಅವಲೋಕನ ಮಾಡದೇ ನಾಶಪಡಿಸಲು ಅವಕಾಶವಿಲ್ಲ ಎಂದರು.

ದಾಖಲೆಗಳನ್ನು ಎ, ಬಿ, ಸಿ ಮತ್ತು ಡಿ ಎಂದು ವರ್ಗೀಕರಣ ಮಾಡಬೇಕು. `ಎ’ ವರ್ಗದ ವ್ಯಾಪ್ತಿಗೆ ಬರುವ ದಾಖಲೆಗಳನ್ನು ಅನಿರ್ದಿಷ್ಟ ಕಾಲದವರೆಗೆ ಸಂರಕ್ಷಣೆ ಮಾಡ ಬೇಕು. `ಬಿ’ ವರ್ಗದ ವ್ಯಾಪ್ತಿಯ ದಾಖಲೆ ಗಳನ್ನು 30 ವರ್ಷಗಳವರೆಗೆ ಹಾಗೂ `ಸಿ’ ವರ್ಗದ ದಾಖಲೆಗಳನ್ನು 10 ವರ್ಷಗಳವ ರೆಗೆ ಸಂರಕ್ಷಣೆ ಮಾಡಬೇಕು. ಜೊತೆಗೆ `ಡಿ’ ವರ್ಗದ ದಾಖಲೆಗಳನ್ನು ಕಡತ ಮುಕ್ತಾಯ ವಾದಂತಹ ವರ್ಷದ ಕೊನೆಯಲ್ಲಿ ನಾಶಪಡಿಸ ಬೇಕಾಗುತ್ತದೆ ಎಂದು ವಿವರಿಸಿದರು.

ಸೇವಾ ಸಿಂಧೂ ಪೋರ್ಟಲ್ ಮೂಲಕ ದಾಖಲೆಗಳನ್ನು ಸಾರ್ವಜನಿಕರು ಪಡೆ ಯಲು ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಸಾರ್ವಜನಿಕರು ಆನ್‍ಲೈನ್ ಮೂಲಕ ದಾಖಲೆಗಳನ್ನು ಪಡೆಯಲು ಮನವಿ ಸಲ್ಲಿಸಬಹುದು. ಸಾರ್ವಜನಿಕರ ಮನೆ ಬಾಗಿ ಲಿಗೆ ಸೇವೆ ಒದಗಿಸಲು ಈ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಾಗಾರ ಇಲಾಖೆಯ ವಿಭಾಗೀಯ ಪತ್ರಾಗಾರ ಕಚೇರಿ ಹಿರಿಯ ಸಹಾಯಕ ನಿರ್ದೇಶಕ ಹೆಚ್.ಎಲ್. ಮಂಜುನಾಥ್ ಮಾತನಾಡಿ, ದಾಖಲೆಗಳ ಸೂಕ್ತ ನಿರ್ವಹಣೆಗೆ ಅನುಕೂಲವಾಗಲೆಂದು 4 ವರ್ಗಗಳಾಗಿ ವಿಂಗಡಿಸಲಾಗಿದೆ. ಕರ್ನಾ ಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿ ನಿಯಮ 2010 ಅಡಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಸೂಕ್ತ ನಿರ್ವ ಹಣೆ ಮಾಡುವಂತೆ 2011ರ ಫೆ.4ರಂದು ಸರ್ಕಾರ ಆದೇಶ ಹೊರಡಿಸಿದೆ ಎಂದರು.

ಹಾಸನ ಜಿಲ್ಲೆಯ ವಿವಿಧ ಇಲಾಖೆಗಳ ಉಪತಹಸೀಲ್ದಾರ್, ಕಚೇರಿ ವ್ಯವಸ್ಥಾಪ ಕರು, ಪ್ರಥಮ ದರ್ಜೆ ಸಹಾಯಕರು ಸೇರಿ ದಂತೆ 25 ಮಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಪತ್ರಾಗಾರ ಇಲಾಖೆ ನಿವೃತ್ತ ಉಪನಿರ್ದೇಶಕಿ ಡಾ.ಜೆ.ವಿ.ಗಾಯತ್ರಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್.ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »