ಕೇರಳಕ್ಕೆ ಮುಂಗಾರು ಪ್ರವೇಶ ಮಂಗಳೂರು, ಉಡುಪಿಯ ಮಳೆಗೆ ಮೂವರು ಬಲಿ
ಮೈಸೂರು

ಕೇರಳಕ್ಕೆ ಮುಂಗಾರು ಪ್ರವೇಶ ಮಂಗಳೂರು, ಉಡುಪಿಯ ಮಳೆಗೆ ಮೂವರು ಬಲಿ

May 30, 2018

ನವದೆಹಲಿ:  ಭಾರತದ ರೈತಾಪಿ ವರ್ಗ ಪ್ರಧಾನವಾಗಿ ಅವ ಲಂಬಿಸಿರುವ ನೈಋತ್ಯ ಮಾನ್ಸೂನ್ ಮಂಗಳವಾರ ಕೇರಳ ಮೂಲಕ ಭಾರತ ವನ್ನು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಲಿದೆ ಎಂದು ಹೇಳಿತ್ತಾದರೂ, ಮಂಗಳವಾರ ಮುಂಜಾ ನೆಯೇ ಮಾನ್ಸೂನ್ ಕೇರಳ ಮೂಲಕ ಭಾರತ ಪ್ರವೇಶಿಸಿತು. ಮೇ 10ರ ಬಳಿಕ, ಲಭ್ಯ ಇರುವ 14 ಮಳೆ ಮಾಪನ ಕೇಂದ್ರ ಗಳ ಪೈಕಿ ಶೇ.60ರಷ್ಟರಲ್ಲಿ 2.55 ಮಿ.ಮೀ. ಗಿಂತ ಹೆಚ್ಚು ಮಳೆ ದಾಖ ಲಾದರೆ ಮುಂಗಾರು ಆರಂಭವಾಗಿದೆ ಎಂದೇ ಅರ್ಥ ಎಂದು ಸ್ಕೈಮೆಟ್ ಹೇಳಿದೆ. ಕೇರಳಕ್ಕೆ ಮುಂಗಾರು ಪ್ರವೇಶವನ್ನು ನಿರ್ಧರಿಸುವ 14 ಮಾಪನ ಕೇಂದ್ರಗಳಲ್ಲಿ ಮಂಗಳೂರು ಕೂಡ ಒಂದು. ಸ್ಕೈಮೆಟ್ ಮೇ 28 ರಂದು, ಹವಾಮಾನ ಇಲಾಖೆ ಮೇ 29 ರಂದು ಮುಂಗಾರು ಪ್ರವೇಶದ ಭವಿಷ್ಯ ನುಡಿದಿದ್ದವು.

ಮಂಗಳೂರಲ್ಲಿ ಭಾರೀ ಮಳೆ: ಕೇರಳ ಮೂಲಕ ಮುಂಗಾರು ಪ್ರಾರಂಭ ವಾಗು ತ್ತಿದ್ದಂತೆ ರಾಜ್ಯ ಕರಾವಳಿಯಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ಬೆಳಿಗ್ಗೆ 9ಕ್ಕೆ ಪ್ರಾರಂಭವಾದ ಮಳೆ ಸತತ ಸುರಿದ ಕಾರಣ ನಗರದಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳೂರಿನ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು ನೀರಲ್ಲಿ ಮುಳುಗಿದೆ. ತಗ್ಗು ಪ್ರದೇಶದ ಮನೆ, ಕಛೇರಿಗಳಿಗೆ ಸಹ ನೀರು ನುಗ್ಗಿದೆ. ಪೆÇಲೀಸರು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರಲ್ಲದೆ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಕರಾವಳಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ರೈಲು ಸಂಚಾರ, ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು, ನಗರದಲ್ಲಿ ತೋಕೂರು ನಿಲ್ದಾಣದಿಂದ ಮುಂದಕ್ಕೆ ರೈಲು ಸಂಚಾರ ಸ್ಥಗಿತಗೊಂಡಿದೆ. ಜಿಲ್ಲೆಯ ಇತರೆಡೆಗಳಲ್ಲಿ ಸಹ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಪಿಟಿ ಉದಯನಗರ, ಅತ್ತಾವರ ಸೇರಿ ಹಲವು ಕಡೆ ಮೂಲಭೂತ ಸೌಕರ್ಯಗಳಿಗೆ ಧಕ್ಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಂಗಳೂರು ನಗರದಲ್ಲಿ 146 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕಳೆದೆರಡು ವರ್ಷಗಳಲ್ಲಿ ಕರಾವಳಿಯಾದ್ಯಂತ ಉತ್ತಮ ಮಳೆಯಾಗಿದ್ದು 2017 ರಲ್ಲಿ ಶೇ. 20, 2016 ರಲ್ಲಿ ಶೇ.40ರಷ್ಟು ಮಳೆ ದಾಖಲಾಗಿದೆ. ಈ ಮಧ್ಯೆ ಮಂಗಳೂರಿನಲ್ಲಿ ಮಳೆಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆಂದು ವರದಿಯಾಗಿದೆ.

ಉಡುಪಿಯಲ್ಲಿಯೂ ಮಳೆ: ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸಹ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ಮಂಗಳವಾರ ಮುಂಜಾನೆ ಸಿಡಿಲು ಬಡಿದ ಕಾರಣ ಗ್ರಾಮ ಪಂಚಾಯತ್ ಸದಸ್ಯೆ ಶೀಲಾ (34) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Translate »