ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರ ನಂಜನಗೂಡು ತಾಲೂಕು ಪ್ರವಾಸ
ಮೈಸೂರು

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರ ನಂಜನಗೂಡು ತಾಲೂಕು ಪ್ರವಾಸ

February 26, 2021

ಮೈಸೂರು, ಫೆ.25- ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಫೆ.26ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮೇದರ ಕುಶಲ ಕೈಗಾರಿಕ ಸಹಕಾರ ಸಂಘಕ್ಕೆ ಭೇಟಿ ನೀಡಲಿದ್ದಾರೆ. ಮೇದರ ಕುಶಲ ಕೈಗಾರಿಕ ಸಹಕಾರ ಸಂಘದಲ್ಲಿ 70-100 ಜನ ಕಸುಬುದಾರರು ವಿವಿಧ ಮಾದರಿಯ ಬಿದುರು ಉತ್ಪನ್ನಗಳನ್ನು ಮಾಡುತ್ತಿದ್ದು, ಈ ಹಿಂದೆ ಖಾದಿ ಮಂಡಳಿಯಿಂದ ಆರ್ಥಿಕ ನೆರವು ನೀಡಲಾಗಿದೆ. ಸಂಘದ ಪುನಃಶ್ಚೇತನ ಕಾರ್ಯ ಕೈಗೊಳ್ಳಲು ಹಾಗೂ ಸ್ಥಳ ಪರಿಶೀಲನೆಗಾಗಿ ಮತ್ತು ಸರ್ಕಾರದ ವಿಶೇಷ ಅಭಿವೃದ್ಧಿ ಯೋಜನೆಯಡಿ ಬದನವಾಳು ಸಮಗ್ರ ಕೇಂದ್ರದಲ್ಲಿ ಹಳೆಯ ಕಟ್ಟಡಗಳ ನವೀಕರಣ ಕಾರ್ಯ ಹಾಗೂ ಸಬರಮತಿ ಆಶ್ರಮದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಪ್ರಗತಿ ಪರಿಶೀಲನೆಗಾಗಿ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿ ದ್ದಾರೆ ಎಂದು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Translate »