ತೆಲುಗು ಭಾಷೆಯಲ್ಲೂ ಬರ್ತಿದೆ ಖರಾಬು ಹಾಡು !
ಸಿನಿಮಾ

ತೆಲುಗು ಭಾಷೆಯಲ್ಲೂ ಬರ್ತಿದೆ ಖರಾಬು ಹಾಡು !

June 12, 2020

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಇದೇ ಮೊದಲಬಾರಿಗೆ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಪೆÇಗರು’. ಅಧ್ಯಕ್ಷ, ರನ್ನ, ಮುಕುಂದ ಮುರಾರಿಯಂಥ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ನಂದಕಿಶೋರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿನ ‘ಖರಾಬು’ ಹಾಡು ಜನಪ್ರಿಯವಾಗಿದ್ದು. ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಲ್ಲದೆ ಈ ಹಾಡು ಬಿಡುಗಡೆಯಾದ ಎರಡೇ ತಿಂಗಳಲ್ಲಿ ಯೂಟ್ಯೂಬ್‍ನಲ್ಲಿ 31 ಮಿಲಿಯನ್‍ಗೂ ಅಧಿಕ ಸಂಖ್ಯೆಯ ವೀP್ಷÀಣೆ ಕಂಡು ನೂತನ ದಾಖಲೆಯನ್ನೇ ಸೃಷ್ಟಿಸಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿರಸಿಕರೂ ಸಹ ಈ ಹಾಡನ್ನು ಮೆಚ್ಚಿ ಕೊಂಡಿರುವುದು ವಿಶೇಷ. ಹಾಡು ಈ ಮಟ್ಟಕ್ಕೆ ಹಿಟ್ ಆಗಿದ್ದು ಕಂಡು ಚಿತ್ರತಂಡ ಹಾಡಿನ ವಿಶೇಷ ಮೇಕಿಂಗ್ ವೀಡಿಯೋವನ್ನು ಕೂಡ ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿದೆ. ಬಿ.ಕೆ.ಗಂಗಾಧರ್ ಅವರು ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಈ ನಡುವೆ `ಪೆÇಗರು’ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಈ ಹಾಡಿಗಿರುವ ಬೇಡಿಕೆಯನ್ನು ಕಂಡು ತೆಲುಗಿನಲ್ಲಿಯೂ ಸಹ ಹಾಡನ್ನು ರೆಡಿಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ತೆಲುಗಿನ ಅನೇಕ ಪ್ರೇP್ಷÀಕರು ಈ ಹಾಡನ್ನು ನೋಡಿ ಇಷ್ಟಪಟ್ಟು ಕಾಮೆಂಟ್ ಹಾಕುತ್ತಿz್ದÁರೆ. ಹಾಗಾಗಿ ಈ ಹಾಡನ್ನು ತೆಲುಗಿನಲ್ಲಿಯೂ ರಿಲೀಸ್ ಮಾಡಿದರೆ ಟಾಲಿವುಡ್‍ನ ಮತ್ತಷ್ಟು ಅಭಿಮಾನಿಗಳನ್ನು ಚಿತ್ರದತ್ತ ಸೆಳೆದುಕೊಳ್ಳಬಹುದು. ಇದರಿಂದ ಚಿತ್ರದ ಪ್ರಮೋಷನ್‍ಗೂ ನೆರವಾಗುತ್ತದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಈಗಾಗಲೇ ‘ಖರಾಬು’ ಚಿತ್ರದ ತೆಲುಗು ಆವೃತ್ತಿಯೂ ಸಿದ್ಧವಾಗುತ್ತಿದೆ. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದಲ್ಲಿ ಮೂಡಿಬಂದಿರುವ ಈ ಹಾಡು, ತೆಲುಗಿನಲ್ಲಿಯೂ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ. ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡುವ ಮೂಲಕ ತನ್ನದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿz್ದÁರೆ. ಹೀಗಾಗಿ ತೆಲುಗಿನ ಪ್ರೇP್ಷÀಕರನ್ನು ಚಿತ್ರದತ್ತ ಆಕರ್ಷಿಸಲು ಇದು ಸಹಾಯವಾಗಲಿದೆ. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿರುವುದಲ್ಲದೆ. ತಾವೇ ಬರೆದು ಹಾಡಿz್ದÁರೆ. ತೆಲುಗು ಆವೃತ್ತಿಯ ಗೀತೆಗೆ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಮುರಮುಲೋ’ ಚಿತ್ರದಲ್ಲಿ ಹಾಡಿದ್ದ ಅನುರಾಗ್ ಸಿಂಗ್ ದನಿಯಾಗಲಿz್ದÁರೆ. ಮುಂದಿನ ಕೆಲವು ದಿನಗಳಲ್ಲಿ ಈ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ.

Translate »