ಜಟ್ಟ, ಮೈತ್ರಿಯಂಥ ವಿಭಿನ್ನ ಶೈಲಿಯ ಚಲನಚಿತ್ರ ಗಳನ್ನು ಡೈರೆಕ್ಟ್ ಮಾಡಿದ್ದ ನಿರ್ದೇಶಕ ಬಿ.ಎಂ. ಗಿರಿರಾಜ್ ಈಗ ಮತ್ತೊಬ್ಬ ಬಿಗ್‍ಸ್ಟಾರ್ ಜೊತೆ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ. ಅವರೀಗ ಕನ್ನಡದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಸಿನಿಮಾ ಮಾಡಲು ಮುಂದಾಗಿz್ದÁರೆ. ಮೊನ್ನೆಯಷ್ಟೆ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ತಾವು ರವಿಚಂದ್ರನ್ ಅವರ ಜೊತೆಗಿದ್ದ ಫೋಟೋವನ್ನು ಅಪೆÇ್ಲೀಡ್ ಮಾಡಿದ್ದ ಗಿರಿರಾಜ್, ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಜಟ್ಟ, ಅದ್ವೈತ, ಮೈತ್ರಿ, ಅಮರಾವತಿಯಂಥಾ ಸೂP್ಷÀ್ಮ ವಿಷಯ ಇರುವ ಸಿನಿಮಾಗಳನ್ನು ನಿರ್ದೇಶಿಸಿರುವ ಬಿ.ಎಂ. ಗಿರಿರಾಜ್ ಅವರು ಕ್ರೇಜಿಸ್ಟಾರ್ ಜೊತೆ ಗೂಡಿ ರುವುದೇ ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೆ ಬಿ.ಎಂ. ಗಿರಿರಾಜ್, ರವಿಚಂದ್ರನ್ ಅವರನ್ನು ಭೇಟಿಯಾಗಿದ್ದು, ಅವರಿಗೆ ಕತೆಯ ಪ್ರಮುಖ ಅಂಶಗಳನ್ನು ಹೇಳಿz್ದÁರೆ. ಸದ್ಯ ಮುಂದಿನ ಹಂತದ ಮಾತುಕತೆ ನಡೆಸಬೇ ಕಿದೆ. ನಾನು ಹೇಳಿದ ಕತೆ ರವಿಚಂದ್ರನ್ ಅವರಿಗೆ ಇಷ್ಟವಾಗಿದೆ ಎಂದು ಹೇಳಿರುವ ಬಿ.ಎಂ. ಗಿರಿರಾಜ್ ಅವರು, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕತೆ ಇದಾಗಿದ್ದು, ಈ ಸಿನಿಮಾಕ್ಕಾಗಿಯೇ ಸಾಕಷ್ಟು ಸಂಶೊಧನೆಯನ್ನು ಮಾಡಿz್ದÉೀನೆ ಎಂದು ಹೇಳಿ z್ದÁರೆ. ಆ ಚಿತ್ರದಲ್ಲಿ ನಟಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಓಕೆ ಎಂದರೆ, ಇದೇ ಮೊದಲ ಬಾರಿಗೆ ಐತಿಹಾಸಿಕ ಹಿನ್ನೆಲೆಯ ಕಥಾನಕ ಹೊಂದಿರೋ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದಂತಾಗುತ್ತದೆ.