ವಿರಾಟ್ ಕೊಹ್ಲಿ, ಮೀರಾಬಾಯಿಗೆ ‘ಖೇಲ್ ರತ್ನ’, ನೀರಜ್ ಚೋಪ್ರಾ, ಹಿಮಾ ದಾಸ್‍ಗೆ `ಅರ್ಜುನ’ ಪುರಸ್ಕಾರ
ಮೈಸೂರು

ವಿರಾಟ್ ಕೊಹ್ಲಿ, ಮೀರಾಬಾಯಿಗೆ ‘ಖೇಲ್ ರತ್ನ’, ನೀರಜ್ ಚೋಪ್ರಾ, ಹಿಮಾ ದಾಸ್‍ಗೆ `ಅರ್ಜುನ’ ಪುರಸ್ಕಾರ

September 21, 2018

ನವದೆಹಲಿ: ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಭಾರತ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರ ಲಭಿಸಿದೆ. ಇದೇ ಸೆಪ್ಟೆಂಬರ್ 25 ರಂದು ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಖೇಲ್ ರತ್ನ ಪುರಸ್ಕಾರಕ್ಕೆ ಕೊಹ್ಲಿ ಹಾಗೂ ಮೀರಾಬಾಯಿ ಪಾತ್ರವಾಗಿರುವುದನ್ನು ಕ್ರೀಡಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಇನ್ನು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇರಿ 20 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ.

ಇದೇ ವೇಳೆ 8 ಮಂದಿಗೆ ದ್ರೋಣಾಚಾರ್ಯ, ನಾಲ್ವರಿಗೆ ಧ್ಯಾನ್ ಚಂದ್ ಪುರಸ್ಕಾರ ಘೋಷಣೆಯಾಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಖೇಲ್ ರತ್ನ ಪ್ರಶಸ್ತಿಯು7.5 ಲಕ್ಷ ನಗದು, ಪದಕ ಹಾಗೂ ಸ್ಮರಣಿಕೆ ಒಳಗೊಂಡಿದ್ದರೆ ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್ ಪುರಸ್ಕಾರಕ್ಕೆ ತಲಾ ಐದು ಲಕ್ಷ ನಗದು ಸ್ಮರಣಿಕೆ ನೀಡಲಾಗುವುದು.
ಪ್ರಶಸ್ತಿ ಪುರಸ್ಕೃತರು: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ: ವಿರಾಟ್ ಕೊಹ್ಲಿ ಮತ್ತು ಮಿರಾಬಾಯಿ ಚಾನು.

ಅರ್ಜುನ ಪ್ರಶಸ್ತಿ: ನೀರಜ್ ಚೋಪ್ರಾ, ಜಿನ್ಸನ್ ಜಾನ್ಸನ್ ಮತ್ತು ಹಿಮಾ ದಾಸ್ (ಅಥ್ಲೆಟಿಕ್ಸ್); ಎನ್ ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್); ಸತೀಶ್ ಕುಮಾರ್ (ಬಾಕ್ಸಿಂಗ್);ಸ್ಮೃತಿ ಮಂದಾನ (ಕ್ರಿಕೆಟ್); ಶುಭಂಕರ್ ಶರ್ಮಾ (ಗಾಲ್ಫ್); ಮನ್ಪ್ರೀತ್ ಸಿಂಗ್, ಸವಿತಾ (ಹಾಕಿ); ರವಿ ರಾಥೋಡ್ (ಪೆÇಲೊ); ರಾಹಿ ಸರ್ನೊಬಾತ್, ಅಂಕುರ್ ಮಿತ್ತಲ್, ಶ್ರೇಯಾಸಿ ಸಿಂಗ್ (ಶೂಟಿಂಗ್); ಮಣಿಕಾ ಭಾತ್ರ, ಜಿ ಸತೀಯಾನ್ (ಟೇಬಲ್ ಟೆನಿಸ್); ರೋಹನ್ ಬೋಪಣ್ಣ (ಟೆನಿಸ್); ಸುಮಿತ್ (ವ್ರೆಸ್ಲಿಂಗ್); ಪೂಜ ಕಡಿಯನ್ (ವೂಶು); ಅಂಕೂರ್ ಧಮಾ (ಪ್ಯಾರಾ-ಅಥ್ಲೆಟಿಕ್ಸ್); ಮನೋಜ್ ಸರ್ಕಾರ್ (ಪ್ಯಾರಾ-ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ: ಸಿ ಎ ಕೂಟ್ಟಪ್ಪ (ಬಾಕ್ಸಿಂಗ್); ವಿಜಯ್ ಶರ್ಮಾ (ವೆಟ್ಲಿಫ್ಟಿಂಗ್); ಶ್ರೀನಿವಾಸರಾವ್ (ಟೇಬಲ್ ಟೆನಿಸ್); ಸುಖದೇವ್ ಸಿಂಗ್ ಪನ್ನು (ಅಥ್ಲೆಟಿಕ್ಸ್); ಕ್ಲಾರೆನ್ಸ್ ಲೋಬೋ (ಹಾಕಿ, ಜೀವಮಾನ); ತಾರಕ್ ಸಿನ್ಹಾ (ಕ್ರಿಕೆಟ್, ಜೀವಮಾನ); ಜೀವಾನ್ ಕುಮಾರ್ ಶರ್ಮಾ (ಜೂಡೋ, ಜೀವಮಾನ); ವಿ ಆರ್ ಬೀದು (ಅಥ್ಲೆಟಿಕ್ಸ್, ಜೀವಮಾನ).
ಧ್ಯಾನ್ ಚಂದ್ ಪ್ರಶಸ್ತಿ: ಸತ್ಯದೇವ್ ಪ್ರಸಾದ್ (ಬಿಲ್ಲುಗಾರಿಕೆ); ಭರತ್ ಕುಮಾರ್ ಚೆಟ್ರಿ (ಹಾಕಿ); ಬಾಬಿ ಅಲೋಶಿಯಸ್ (ಅಥ್ಲೆಟಿಕ್ಸ್); ಚೌಗಲೆ ದಾಡು ದತ್ತಾತ್ರೇ (ವ್ರೆಸ್ಲಿಂಗ್).

Translate »