ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಜಿಲ್ಲೆಯೊಳಗೆ ಸಂಚರಿಸಲು ಅವಕಾಶ
ಮಡಿಕೇರಿ,ಮೇ4-ಲಾಕ್ಡೌನ್ ಹಿನ್ನೆಲೆ ಕಳೆದ 1 ತಿಂಗ ಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮೇ 6ರಿಂದ ಆರಂಭಿಸಲು ಡಿಸಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದು, ವಾರದ ಎಲ್ಲಾ ದಿನಗಳು ಅಂಗಡಿಗಳು ತೆರೆ ಯಲು ಅವಕಾಶ ನೀಡಿದ್ದಾರೆ. ಮೇ 6ರಿಂದ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಖಾಸಗಿ ಹಾಗೂ ಸರ್ಕಾರಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಖಾಸಗಿ, ಸಾರಿಗೆ ಬಸ್ಗಳು ಜಿಲ್ಲೆಯೊಳಗೆ ಮಾತ್ರ ಸಂಚರಿಸಬೇ ಕಿದ್ದು, ಅಂತರ ಜಿಲ್ಲಾ ಸಂಚಾರ ನಿರ್ಬಂಧಿಸಲಾಗಿದೆ. ಬಸ್ಗಳಲ್ಲಿ ಶೇ.50ರಷ್ಟು ಪ್ರಯಾಣಿಕರು ಸಂಚರಿಸ ಬಹುದಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೈಸೂರು