ಶಿಥಿಲಾವಸ್ಥೆಯಲ್ಲಿರುವ ಕೆಆರ್, ಚೆಲುವಾಂಬ  ಆಸ್ಪತ್ರೆಗಳ ಕಟ್ಟಡ ದುರಸ್ತಿಗೆ ಚಿಂತನೆ
ಮೈಸೂರು

ಶಿಥಿಲಾವಸ್ಥೆಯಲ್ಲಿರುವ ಕೆಆರ್, ಚೆಲುವಾಂಬ ಆಸ್ಪತ್ರೆಗಳ ಕಟ್ಟಡ ದುರಸ್ತಿಗೆ ಚಿಂತನೆ

November 23, 2021

ಮೈಸೂರು, ನ. 22(ಆರ್‍ಕೆ)- ಶಿಥಿಲಾ ವಸ್ಥೆಯಲ್ಲಿರುವ ಮೈಸೂರಿನ ಕೃಷ್ಣ ರಾಜೇಂದ್ರ (ಕೆಆರ್) ಹಾಗೂ ಚೆಲು ವಾಂಬ ಆಸ್ಪತ್ರೆಗಳ ಪಾರಂಪರಿಕ ಕಟ್ಟಡ ಗಳ ದುರಸ್ತಿ ಮಾಡಿ ಸಂರಕ್ಷಿಸಲು ಆಡಳಿತ ಮಂಡಳಿಯು ಮುಂದಾಗಿದೆ.

ಕಳೆದ ಹಲವು ದಿನಗಳಿಂದ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಪಾರಂಪರಿಕ ಕಟ್ಟಡಗಳ ಛಾವಣಿ ಸೋರ ತೊಡಗಿರುವುದಲ್ಲದೆ, ಸೀಲಿಂಗ್‍ನ ಪ್ಲಾಸ್ಟರ್ ಕಳಚಿ ಬೀಳುತ್ತಿದ್ದು, ಒಳಚರಂಡಿ ವ್ಯವ ಸ್ಥೆಯೂ ಹಾಳಾಗಿರುವುದರಿಂದ ಸದಾ ರೋಗಿಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆ ಕಟ್ಟಡಗಳನ್ನು ಪಾರಂಪರಿಕ ವಿನ್ಯಾಸ ಉಳಿಸಿಕೊಂಡು ಪುನರುಜ್ಜೀವನಗೊಳಿ ಸಲು ಪ್ರಕ್ರಿಯೆ ಆರಂಭಿಸಲಾಗಿದೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಮತ್ತು ಆರ್‍ಐ) ಅಧೀನದಲ್ಲಿರುವ ಈ ಎರಡೂ ಬೋಧನಾ ಆಸ್ಪತ್ರೆಗಳ ಎಲ್ಲಾ ವಿಭಾಗಗಳ ಕಟ್ಟಡಗಳನ್ನೂ ಒಂದೇ ಬಾರಿ ರಿಪೇರಿ ಮಾಡಿಸಿ ಸಂರಕ್ಷಿಸಲು ಪಾರಂಪರಿಕ ಇಲಾಖೆ ಯಿಂದ ಅನುಮತಿ ಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಗಳು ದರಪಟ್ಟಿ ಸಿದ್ಧಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಿಭಾ ಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಾಥ್, ಕೆಆರ್ ಮತ್ತು ಚೆಲುವಾಂಬ ಆಸ್ಪತ್ರೆಗಳ ಕಟ್ಟಡಗಳನ್ನು ರಿಪೇರಿ ಮಾಡಿ ಪುನರು ಜ್ಜೀವನಗೊಳಿಸಲು 51 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಅಂದಾಜು ಪಟ್ಟಿ ತಯಾರಿಸಿ ಸರ್ಕಾರದ ಅನುಮೋದನೆ ಗಾಗಿ ವಾರದ ಹಿಂದಷ್ಟೇ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂದರು.

ಕೆಆರ್ ಆಸ್ಪತ್ರೆ ಆವರಣದ ವೈದ್ಯಕೀಯ ಅಧೀಕ್ಷಕರ ಕಚೇರಿ ಕಟ್ಟಡ, ಹೊರರೋಗಿ ವಿಭಾಗ, ತುರ್ತು ವೈದ್ಯಕೀಯ ವಿಭಾಗ, ಕಣ್ಣಿನ ಆಸ್ಪತ್ರೆ ಕಟ್ಟಡ, ನ್ಯೂ ಐಪಿಡಿ-ಓಪಿಡಿ ಕಟ್ಟಡ, ಸರ್ಜಿಕಲ್ ಬ್ಲಾಕ್ (ಕಲ್ಲು ಕಟ್ಟಡ), ರೇಡಿಯಾಲಜಿ ವಿಭಾಗ, ಸುಟ್ಟ ಗಾಯಗಳ ಚಿಕಿತ್ಸಾ ಕಟ್ಟಡಗಳನ್ನು ರಿಪೇರಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಅದೇ ರೀತಿ ಚೆಲುವಾಂಬ ಆಸ್ಪತ್ರೆಯ ಹೆರಿಗೆ ವಿಭಾಗ, ಆಪರೇಷನ್ ಥಿಯೇಟರ್, ಜನ ರಲ್ ವಾರ್ಡ್‍ಗಳು, ಮಕ್ಕಳ ವಿಭಾಗದ ಕಟ್ಟಡಗಳನ್ನೂ ಈ ಯೋಜನೆಯಲ್ಲಿ ಸೇರಿಸಿ ಕೊಳ್ಳಲಾಗಿದೆ. ಪಾರಂಪರಿಕ ಕಟ್ಟಡಗಳಾದ್ದ ರಿಂದ ಮೇಲ್ಛಾವಣಿ, ಸೀಲಿಂಗ್, ಗೋಡೆ ಗಳ ಹಳೇ ಪ್ಲಾಸ್ಟಿಂಗ್ ತೆಗೆದು ಸಿಮೆಂಟ್ ಬಳಸದೆ ಸುಣ್ಣ ಹಾಗೂ ಇನ್ನಿತರ ವಸ್ತು ಗಳನ್ನು ಬಳಸಿ ದುರಸ್ತಿ ಕಾಮಗಾರಿ ನಡೆ ಸಲು ಅಂದಾಜು ಪಟ್ಟಿ ತಯಾರಿಸಿ ಡಿಪಿಆರ್ ನೊಂದಿಗೆ 51 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪಾರಂಪರಿಕ ಇಲಾಖೆ, ಮೈಸೂರು ಮೆಡಿ ಕಲ್ ಕಾಲೇಜು, ಆಸ್ಪತ್ರೆಗಳ ಅಧಿಕಾರಿಗಳೊಂ ದಿಗೆ ಇತ್ತೀಚೆಗಷ್ಟೇ ಸ್ಥಳ ಪರಿಶೀಲಿಸಿ ಶಿಥಿಲ ಗೊಂಡಿರುವ ಕಟ್ಟಡಗಳ ಪಾರಂಪರಿಕ ವಿನ್ಯಾಸ ಉಳಿಸಿಕೊಂಡು ಯಥಾಸ್ಥಿತಿ ರಿಪೇರಿ ಮಾಡಲು ವಿಶೇಷ ಕೌಶಲ್ಯ ಹೊಂದಿರುವ ಕಾರ್ಮಿಕ ರಿಂದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಮೈಸೂರಿನ ಸರ್ಕಾರಿ ಆಯು ರ್ವೇದ ಕಾಲೇಜು ಪುನರುಜ್ಜೀವನಗೊಳಿ ಸುತ್ತಿರುವ ಮಾದರಿಯಲ್ಲೇ ಕೆಆರ್ ಮತ್ತು ಚೆಲುವಾಂಬ ಆಸ್ಪತ್ರೆ ಕಟ್ಟಡಗಳನ್ನೂ ನವೀ ಕರಿಸಲು ಸಿದ್ಧತೆ ನಡೆಸಲಾಗುವುದು ಎಂದರು.

Translate »