ಮೈಸೂರು ಜಿಲ್ಲಾಧ್ಯಕ್ಷರಾಗಿ ಮಡ್ಡೀಕೆರೆ ಗೋಪಾಲ್ ಆಯ್ಕೆ
ಮೈಸೂರು

ಮೈಸೂರು ಜಿಲ್ಲಾಧ್ಯಕ್ಷರಾಗಿ ಮಡ್ಡೀಕೆರೆ ಗೋಪಾಲ್ ಆಯ್ಕೆ

November 22, 2021

ಮೈಸೂರು, ನ.21(ಎಸ್‍ಬಿಡಿ)- ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಡ್ಡೀಕೆರೆ ಗೋಪಾಲ್, ಮಂಡ್ಯ ಜಿಲ್ಲಾ ಘಟಕ ರವಿ ಚಾಮಲಾಪುರ, ಕೊಡಗು ಜಿಲ್ಲಾ ಘಟಕ ಕೇಶವ ಕಾಮತ್, ಚಾಮರಾಜನಗರ ಜಿಲ್ಲಾ ಘಟಕ ಶೈಲ ಕುಮಾರ್ ಹಾಗೂ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ರಾಗಿ ಪ್ರೊ.ಹೆಚ್.ಎಲ್.ಮಲ್ಲೇಶಗೌಡ ಆಯ್ಕೆಯಾಗಿದ್ದಾರೆ.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಮಹಾ ರಾಣಿ ಮಹಿಳಾ ಕಲಾ ಕಾಲೇಜು ಸೇರಿದಂತೆ ಜಿಲ್ಲೆಯ 10 ಕೇಂದ್ರಗಳಲ್ಲಿ ಭಾನುವಾರ ನಡೆದ ಚುನಾವಣೆ ಯಲ್ಲಿ ಒಟ್ಟು 5,722 ಮಂದಿ ಮತ ಚಲಾಯಿಸಿದ್ದು, ಇದರಲ್ಲಿ 2,565 ಮತಗಳೊಂದಿಗೆ ಮಡ್ಡೀಕೆರೆ ಗೋಪಾಲ್ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿ ಸ್ಪರ್ಧಿಗಳಾಗಿದ್ದ ಬನ್ನೂರು ಕೆ.ರಾಜು ಅವರು 1,601 ಹಾಗೂ ಕೆ.ಎಸ್.ನಾಗರಾಜು 1,485 ಮತ ಪಡೆದು ಪರಾಭವಗೊಂಡರು. 71 ಮತಗಳು ತಿರಸ್ಕøತ ಗೊಂಡಿವೆ ಎಂದು ಚುನಾವಣಾಧಿಕಾರಿ ತಹಸೀ ಲ್ದಾರ್ ರಕ್ಷಿತ್ ತಿಳಿಸಿದ್ದಾರೆ. 2008-11ರ ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಡ್ಡೀಕೆರೆ ಗೋಪಾಲ್ 964 ಮತ ಅಂತರದ ಗೆಲುವಿನೊಂದಿಗೆ ಎರಡನೇ ಬಾರಿ ಅಧ್ಯಕ್ಷ ಸ್ಥಾನ ದಕ್ಕಿಸಿಕೊಂಡಿದ್ದಾರೆ.

ಮಂಡ್ಯ ವರದಿ: ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಿ.ಕೆ.ರವಿ ಕುಮಾರ ಚಾಮಲಾಪುರ ಅವರು ಪುನರಾಯ್ಕೆಯಾಗಿದ್ದಾರೆ. ಇವರು 6,456 ಮತಗಳನ್ನು ಗಳಿಸಿದ್ದು, 2,072 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ ಗಳಾದ ಎಸ್.ಕೃಷ್ಣಸ್ವರ್ಣಸಂದ್ರ 4,384 ಹಾಗೂ ಕೆ.ಎಂ.ಕೃಷ್ಣೇಗೌಡ ಕೀಲಾರ 3,681 ಮತ ಪಡೆದುಕೊಂಡಿದ್ದಾರೆ. ಒಟ್ಟು 24,204 ಮತದಾರರಲ್ಲಿ 14,906 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಬರೋಬ್ಬರಿ 385 ಮತಗಳು ತಿರಸ್ಕøತಗೊಂಡಿವೆ.

ಕೊಡಗು: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಅಧ್ಯಕ್ಷರಾಗಿ ಎಂ.ಪಿ.ಕೇಶವ ಕಾಮತ್ ಆಯ್ಕೆಯಾಗಿದ್ದಾರೆ. ಇವರು ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಅವರನ್ನು 136 ಮತಗಳ ಅಂತರದಲ್ಲಿ ಮಣಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಒಟ್ಟು 2,469 ಮತದಾರರ ಪೈಕಿ 1,723 ಮಂದಿ ಮತ ಚಲಾಯಿಸಿದ್ದರು. ಇದರಲ್ಲಿ ಕೇಶವ ಕಾಮತ್‍ಗೆ 922 ಹಾಗೂ ಲೋಕೇಶ್ ಸಾಗರ್‍ಗೆ 791 ಮತ ಲಭಿಸಿವೆ. 10 ಮತಗಳು ತಿರಸ್ಕತಗೊಂಡಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಚಿತ್ರ ಕಲಾವಿದ ಎಂ.ಶೈಲಕುಮಾರ್ 1,316 ಮತಗಳಿಸಿ, ಪ್ರತಿಸ್ಪರ್ಧಿ ಯಿಂದ 643 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿಗಳಾದ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ 673, ನಾಗೇಶ್ ಸೋಸ್ಲೆ 150 ಮತ ಹಾಗೂ ಸ್ನೇಹಾ 22 ಮತ ಗಳಿಸಿದ್ದಾರೆ.
ಹಾಸನ: ಹಾಸನ ಜಿಲ್ಲಾ ಕಸಾಪ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಹೆಚ್.ಎಲ್.ಮಲ್ಲೇಶ್‍ಗೌಡ ಆಯ್ಕೆಯಾಗಿದ್ದಾರೆ. ಇವರು 4,854 ಮತಗಳೊಂದಿಗೆ ಜಯಭೇರಿ ಬಾರಿಸಿದ್ದು, ಪ್ರತಿಸ್ಪರ್ಧಿಗಳಾಗಿ ಕಣದಲ್ಲಿದ್ದ ಪತ್ರಕರ್ತ ರವಿ ನಾಕಲಗೋಡು ಅವರಿಗೆ 2,773 ಮತ, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲಗೌಡ 487, ಶಿಕ್ಷಕಿ ಬಿ.ಎ.ಮಮತಾ 29, ಬಿ.ಎಸ್.ರಾಮಕುಮಾರ್ ಆರ್.ಕೆ.ಶರ್ಮಾ ಅವರಿಗೆ 28 ಮಂದಿ ಮತ ನೀಡಿದ್ದಾರೆ.

Translate »