ಕೆಎಸ್‍ಆರ್‍ಟಿಸಿ ಭದ್ರತಾ ಸಿಬ್ಬಂದಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ತರಬೇತಿ ಕಾರ್ಯಾಗಾರ
ಹಾಸನ

ಕೆಎಸ್‍ಆರ್‍ಟಿಸಿ ಭದ್ರತಾ ಸಿಬ್ಬಂದಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ತರಬೇತಿ ಕಾರ್ಯಾಗಾರ

November 20, 2018

ಹಾಸನ: ಕೆಎಸ್‍ಆರ್‍ಟಿಸಿ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ನೇಹ ಮಯಿ, ಸೌಹಾರ್ದಯುತ ಹಾಗೂ ಸುಭದ್ರ ವಾದ ಪ್ರಯಾಣದ ಸೇವೆ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಜಿ.ಎನ್. ಲಿಂಗರಾಜು ಕರೆ ನೀಡಿದರು.

ನಗರದ ಪೊಲೀಸ್ ಕವಾಯತ್ ಮೈದಾನ, ಸಭಾಂಗಣದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ, ಭಾರತ್ ಸೇವಾದಳ ಹಾಗೂ ರೋಟರಿ ಕ್ಲಬ್ ಆಫ್ ಹೊಯ್ಸಳ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭದ್ರತಾ ರಕ್ಷಕರು ಗಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ತರ ಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಬ್ಬಂದಿಗಳು ಉತ್ತಮ ಸೇವೆ ಕೊಡುವ ಮೂಲಕ ಸಾರಿಗೆ ಇಲಾಖೆಗೆ ಒಳ್ಳೆ ಹೆಸರನ್ನು ತಂದು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಸಾರಿಗೆ ಸಂಸ್ಥೆ ಉಳಿದು ಬೆಳೆಯಬೇಕಾದರೆ ಸಂಸ್ಥೆಯಲ್ಲಿರುವ 1 ಲಕ್ಷದ 30 ಸಾವಿರ ಸಿಬ್ಬಂದಿಗಳ ಪಾಲು ಬಹಳ ಮುಖ್ಯ ವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಬಸ್ಸಿನ ಮಟ್ಟ ಹೇಗಿದೆ ಎಂದರೆ 1996ರಲ್ಲಿ ಒಂದೇ ಒಂದು ವೋಲ್ವಾ ಬಸ್ ತಂದು ಪ್ರಾಯೋಗಿಕ ವಾಗಿ ಬೆಂಗಳೂರಿನಲ್ಲಿ ತಂದು ಸಿಟಿಯಲ್ಲಿ ಬಿಡಲಾಯಿತು. ಇಂದು ಶಾಂತಿ ನಗರದ ಬಂದರೇ ನಮ್ಮ ಕೇಂದ್ರ ಕಛೇರಿ ಮೇಲೆ ನಿಂತರೇ ಮೂರು ಘಟಕಗಳಲ್ಲಿ ಪರಿ ಪೂರ್ಣವಾದ ಓಲ್ವಾ ಬಸ್‍ಗಳ ಘಟಕ ಗಳೇ ಇದ್ದು, ಆ ಮಟ್ಟದಲ್ಲಿ ಸಾರಿಗೆ ಸಂಸ್ಥೆ ಬೆಳೆದಿದೆ ಎಂದರು.

ಹಾಸನದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣ ಇಡೀ ರಾಜ್ಯದಲ್ಲೇ ಉನ್ನತ ವಾಗಿದೆ. ಎಲ್ಲಾ ಕಾರ್ಮಿಕರಿಗೂ ಆರೋಗ್ಯ ತಪಾಸಣೆ ಆಗಬೇಕು ಎಂಬ ಉದ್ದೇಶ ದಲ್ಲಿ ಅವರ ವಯೋಮಿತಿಗೆ ತಕ್ಕಂತೆ ಬೆಂಗ ಳೂರಿನಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ ಕನಿಷ್ಠ ದರದಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಗಳನ್ನು ಕೊಡಿಸುತ್ತಿರುವುದಾಗಿ ಹೇಳಿದರು. ಸಾರಿಗೆ ಇಲಾಖೆಯಲ್ಲಿರುವ ಭದ್ರತಾ ಸಿಬ್ಬಂದಿಗಳು ಪೊಲೀಸ್ ಅಧಿಕಾರಿ ಗಳೊಂದಿಗೆ ಪೊಲೀಸ್ ತರಬೇತಿ ಶಾಲೆ ಯಲ್ಲಿ ಪರಿಣಾಮಕಾರಿಯಾದ ತರಬೇತಿ ಪಡೆದು ಉತ್ತಮ ಸೇವೆಯನ್ನು ಸಾರ್ವ ಜನಿಕರಿಗೆ ಕೊಡುವ ಕೆಲಸ ಮಾಡ ಲಾಗುತ್ತಿದೆ. ಸಾರಿಗೆ ಸಂಸ್ಥೆ ಇನ್ನು ಹೆಚ್ಚಿನ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ ಎಂದರು.

ಭಾರತ್ ಸೇವಾದಳ ಜಿಲ್ಲಾ ಸಂಘಟಕಿ ವಿ.ಎಸ್.ರಾಣಿ ಮಾತನಾಡಿ, ಪ್ರಜೆ ಎಂದರೆ ಪ್ರತಿಯೊಬ್ಬರೂ ರಾಷ್ಟ್ರಧ್ವಜದ ಮತ್ತು ರಾಷ್ಟ್ರದ ಮಹತ್ವದ ಬಗ್ಗೆ ತಿಳಿದಿರಬೇಕು. ತರಬೇತಿ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ತಮ್ಮ ವೃತ್ತಿ ಬದುಕಿನ ಜೊತೆಗೆ ಅದರ ಅರ್ಥದ ಜ್ಞಾನ ಪಡೆದಿರಬೇಕು ಎಂದು ಕಿವಿಮಾತು ಹೇಳಿದರು. ಜೀವನ ಪೂರ್ತಿ ಒಳ್ಳೆಯ ದನ್ನು ಆರಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿ ಆಗಬೇಕು. ಪ್ರತಿನಿತ್ಯ ಸೇವಾ ಮನೋ ಭಾವದಲ್ಲಿ ವೃತ್ತಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸಮಾಜ ನಮಗೆ ಏನು ಕೊಟ್ಟಿದೆ ಎಂಬು ದನ್ನು ಯೋಚಿಸದೇ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎಂಬುದರ ಬಗ್ಗೆ ಅವ ಲೋಕಿಸಿಕೊಳ್ಳುವುದು ಉತ್ತಮ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಕೆ.ಎನ್. ಲಕ್ಷ್ಮಣ್ ಮಾತನಾಡಿ, ಸಾರಿಗೆ ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ಒಳ್ಳೆಯ ತರಬೇತಿ ಸಿಗಬೇಕು. ತರಬೇತಿ ವೇಳೆ ಸಾಕಷ್ಟು ವಿಷಯಗಳನ್ನು ಗ್ರಹಿಸಿ ನಂತರದಲ್ಲಿ ಮತ್ತೊಬ್ಬರಿಗೆ ಹೇಳುವ ಮೂಲಕ ನೀವು ಮಾದರಿ ವ್ಯಕ್ತಿಯಾಗಿ ಬಾಳಿರಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಬಿ.ಎನ್.ನಂದಿನಿ, ಉಪ ಪೊಲೀಸ್ ಅಧೀಕ್ಷಕ ಜಿ.ಎನ್. ಕುಮಾರಸ್ವಾಮಿ, ರೋಟರಿ ಕ್ಲಬ್ ಆಫ್ ಹೊಯ್ಸಳ ಕಾರ್ಯದರ್ಶಿ ಅಮೃತ ಆರಾಧ್ಯ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಾದೇಶಿಕ ತರಬೇತಿ ಕೇಂದ್ರ ಹಾಸನದ ಪ್ರಾಂಶುಪಾಲ ಮಹಮದ್ ಹಫೀಜ್ ಉಲ್ಲಾ, ಕೃಷ್ಣಮೂರ್ತಿ, ಆರ್.ಟಿ.ಓ ನಿವೃತ್ತ ಅಧಿಕಾರಿ ಪಾಷ ಇತರರು ಉಪಸ್ಥಿತರಿದ್ದರು.

Translate »