ಎಸ್‍ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ ಹೋರಾಟಕ್ಕೆ ಬದಲು ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ
ಮೈಸೂರು

ಎಸ್‍ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ ಹೋರಾಟಕ್ಕೆ ಬದಲು ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ

December 28, 2020

ಮೈಸೂರು, ಡಿ.27(ಪಿಎಂ)- ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆಗೊಳಿಸುವ ಕುಲಶಾಸ್ತ್ರೀಯ ಅಧ್ಯಯನದ ವರದಿ ಪಡೆದು ಸಚಿವ ಸಂಪುಟದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಅವಕಾಶವಿದೆ. ಆದರೂ ಬಿಜೆಪಿಯಲ್ಲಿರುವ ಸಮುದಾಯದ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಏಕೆ? ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪ್ರಶ್ನಿಸಿದರು.

Éುೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆ ಗೊಳಿಸುವ ಸಂಬಂಧ ಈಗಾಗಲೇ ಕುಲ ಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಜೊತೆಗೆ ಇದು ಮುಕ್ತಾಯ ಹಂತದಲ್ಲಿದೆ. ಇದನ್ನು ಪಡೆದು ಸಚಿವ ಸಂಪುಟದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಅವಕಾಶವಿದೆ. ಇದನ್ನು ಮಾಡುವುದು ಬಿಟ್ಟು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ನೋಡಿದರೆ ಅನು ಮಾನ ಮೂಡುತ್ತದೆ ಎಂದು ಹೇಳಿದರು.

ಜನಾಂಗದ ಮುಖಂಡ, ಬಿಜೆಪಿ ನಾಯಕ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನಿಜವಾದ ಕಳಕಳಿ ಇದ್ದರೆ ಕುಲಶಾಸ್ತ್ರೀಯ ಅಧ್ಯಯನದ ವರದಿ ಪಡೆದು ಸಚಿವ ಸಂಪುಟದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುವಲ್ಲಿ ಬದ್ಧತೆ ತೋರಲಿ. ಜೊತೆಗೆ ಕೇಂದ್ರದಲ್ಲೂ ಅನುಮೋ ದನೆ ಕೊಡಿಸಲಿ. ಅದನ್ನು ಬಿಟ್ಟು ಇವರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಯಾರ ವಿರುದ್ಧ ಇವರ ಹೋರಾಟ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರ ಇದ್ದರೂ ಈ ಹೋರಾಟ ಏಕೆ? ಎಂದು ಪ್ರಶ್ನಿಸಿದರು.

ಕೆ.ಎಸ್.ಈಶ್ವರಪ್ಪ ಕುರುಬ ಸಮುದಾಯದ ಪರವಾಗಿ ಯಾವುದೇ ಹೋರಾಟ ಮಾಡಿಲ್ಲ. ತಮ್ಮ ರಾಜಕೀಯ ಅನುಕೂಲಕ್ಕಾಗಿ ರಾಯಣ್ಣ ಬ್ರಿಗೇಡ್ ಮಾಡಿ ಮಧ್ಯದಲ್ಲೇ ಕೈಬಿಟ್ಟರು. ಕನಕ ಗೋಪುರ ಧ್ವಂಸ ಸಂದರ್ಭದಲ್ಲಿ `ನಾನು ಕುರುಬನೇ ಅಲ್ಲ, ನಾನು ಹಿಂದು’ ಎಂದು ಹೇಳಿಕೆ ನೀಡಿದ್ದರು. ನಿಜವಾದ ಕಾಳಜಿ ಇವರಲ್ಲಿ ಇಲ್ಲ. ಸಮುದಾಯದ ನಾಯಕತ್ವ ಒಡೆಯಲು ಆರ್‍ಎಸ್‍ಎಸ್ ನಡೆಸಿರುವ ಹುನ್ನಾ ರವೇ ಈ ಹೋರಾಟ. ಎ.ಹೆಚ್.ವಿಶ್ವನಾಥ್ ಅದೇ ಆಡಳಿತ ಪಕ್ಷದ ಪರಿಷತ್ ಸದಸ್ಯರು. ಅವರದೇ ಸರ್ಕಾರ ಇದೆ. ಅವರೂ ಒತ್ತಾಯ ಮಾಡಬಹುದು ಎಂದರು.
ಅದು ಬಿಜೆಪಿ ಸಭೆ: ಡಿ.29ರಂದು ಮೈಸೂರಿನಲ್ಲಿ ಹೋರಾಟ ಸಂಬಂಧ ಏರ್ಪಡಿಸಿರುವ ಸಭೆಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಿಜವಾದ ಕಳಕಳಿ ಇದ್ದರೆ ಭಾಗವಹಿಸುತ್ತಿ ದ್ದೆವು. ಆದರೆ ಅಲ್ಲಿರುವವರು ಎಲ್ಲಾ ಬಿಜೆಪಿಯವರೇ. ಅದೊಂದು ಬಿಜೆಪಿ ಸಭೆಯೇ ಹೊರತು, ಸಮುದಾಯದ ಸಭೆಯಲ್ಲ ಎಂದು ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಸ್‍ಟಿಗೆ ಶೇ.3ರಷ್ಟು ಮೀಸಲಾತಿ ಇದ್ದು, ಇದೀಗ ಎಸ್‍ಟಿ ಪಟ್ಟಿಯಲ್ಲಿರುವ ಸಮು ದಾಯಗಳು ಶೇ.7ಕ್ಕೆ ಮೀಸಲಾತಿ ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟಿವೆ. ಹೀಗಾಗಿ ಎಸ್‍ಟಿ ಶೇಕಡವಾರು ಮೀಸಲಾತಿ ಹೆಚ್ಚಳ ಮಾಡಬೇಕಿದೆ. ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಜೊತೆಗೆ ಇನ್ನಿತರ ಕೆಲ ಸಮುದಾಯಗಳನ್ನು ಇದೇ ಪಟ್ಟಿಗೆ ಸೇರ್ಪಡೆ ಮಾಡುವ ಅಗತ್ಯವಿರುವುದನ್ನು ಮನಗಾಣಬೇಕು ಎಂದು ಹೇಳಿದರು. ಪಾಲಿಕೆ ಸದಸ್ಯ ಗೋಪಿ, ಮಾಜಿ ಸದಸ್ಯ ಶಿವಣ್ಣ, ಮುಖಂಡ ವಿಶ್ವನಾಥ್ ಗೋಷ್ಠಿಯಲ್ಲಿದ್ದರು.

Translate »