ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ?; ಎಂಎಲ್‍ಸಿ ವಿಶ್ವನಾಥ್
ಮೈಸೂರು

ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ?; ಎಂಎಲ್‍ಸಿ ವಿಶ್ವನಾಥ್

December 28, 2020

ಮೈಸೂರು, ಡಿ.27(ಪಿಎಂ)- ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆ ಮಾಡಬೇಕೆಂಬ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವಿಲ್ಲ ಎಂದು ತಿಳಿಸಿದ ವಿಧಾನ ಪರಿಷತ್ ಸದಸ್ಯರೂ ಆದ ಸಮುದಾಯದ ಮುಖಂಡ ಎ.ಹೆಚ್.ವಿಶ್ವನಾಥ್, ನಮ್ಮ ಈ ಹೋರಾಟಕ್ಕೆ ಎಲ್ಲಾ ಸಮುದಾಯ, ಸಂಘಟನೆ ಹಾಗೂ ಪಕ್ಷಗಳ ಬೆಂಬಲವೂ ಬೇಕು. ಹೀಗಾಗಿ ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ? ಎಂದು ಪ್ರಶ್ನಿಸಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಕುರುಬ ಎಸ್‍ಟಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸದರಿ ಹೋರಾಟದಲ್ಲಿ ಆರ್‍ಎಸ್‍ಎಸ್ ಪಾತ್ರವಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಅವರು ಪ್ರತಿಕ್ರಿಯಿಸಿದರು.

ದೇಶದಲ್ಲಿ ನೂರಾರು ರಾಜಕೀಯ ಪಕ್ಷ ಗಳು, ಸಂಘಟನೆಗಳು ಇವೆ. ನಾವು ಈ ಎಲ್ಲವುಗಳ ಸಹಕಾರ ಕೇಳುತ್ತಿದ್ದೇವೆ. ಇವು ಗಳಲ್ಲಿ ಆರ್‍ಎಸ್‍ಎಸ್ ಕೂಡ ಒಂದು, ಅದರಲ್ಲೇನಿದೆ? ಆರ್‍ಎಸ್‍ಎಸ್ ಅನ್ನು ದೇಶ ದಲ್ಲಿ ಬ್ಯಾನ್ ಮಾಡಿದ್ದಾರಾ? ಆರ್‍ಎಸ್‍ಎಸ್, ಯೂತ್ ಕಾಂಗ್ರೆಸ್, ಯುವ ಜನತಾ ದಳವೂ ಇದೆ. ಆರ್‍ಎಸ್‍ಎಸ್ ಅಂದ್ರೆ ಮಾತ್ರ ಏಕೆ ಮೈಲಿಗೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರಿಗೇ ಹೋರಾಟದ ನಾಯಕತ್ವ ವಹಿಸಲು ಆಹ್ವಾನ ನೀಡಲಾ ಗಿತ್ತು. ಜೊತೆಗೆ ಅವರು ಈ ಹೋರಾಟ ದಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ಈ ಸಂಬಂಧ ನಡೆದ ಸಭೆಗೆ ಅವರು ಆಗಮಿಸಿದ್ದರು. ಅವರು ಇದಕ್ಕೆ ವಿರೋಧವಾಗಿಲ್ಲ. ಇದು ಸಿದ್ದರಾಮಯ್ಯ, ವಿಶ್ವನಾಥ್, ಈಶ್ವರಪ್ಪ ಸೇರಿದಂತೆ ಕೆಲವು ನಾಯಕರಿಗೆ ಸಂಬಂ ಧಿಸಿದ ಪ್ರಶ್ನೆಯಲ್ಲ. ಬದಲಿಗೆ ಇದು ಸಮು ದಾಯದ ಪ್ರಶ್ನೆಯಾಗಿದೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಬಿಜೆಪಿ ಸರ್ಕಾರ ಇರುವಾಗ ಆಡಳಿತ ಪಕ್ಷದಲ್ಲಿ ರುವ ಸಮುದಾಯದ ನಾಯಕರು ಬೀದಿ ಗಿಳಿದು ಹೋರಾಟ ನಡೆಸಬೇಕೆ? ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಶ್ವನಾಥ್, ಈ ಹೇಳಿಕೆ ಸ್ವಾಗ ತಿಸುತ್ತೇನೆ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಪಡೆದ ಸರ್ಕಾರದ ಮೇಲೆ ಜನತೆಯ ಒತ್ತಾಯ ಇರಲೇಬೇಕು ಎಂದ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಕುರುಬ ಸಮುದಾಯವನ್ನು ಬುಡಕಟ್ಟು ಎಂದೇ ಗುರುತಿಸಲಾಗಿದೆ. ಹೀಗಾಗಿ ಎಸ್‍ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಜೊತೆಗೆ ಸಮು ದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ತೆಲಂಗಾಣದಲ್ಲಿ ಕುರುಬ ಸಮಾಜದ ಶ್ರೇಯೋ ಭಿವೃದ್ಧಿಗೆ ಹಲವು ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗಿದೆ ಎಂದು ವಿವರಿಸಿದರು.

ಕುರುಬ ಸಮುದಾಯವನ್ನು ಎಸ್‍ಟಿ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿ ರುವ ದೇಶ. ಇದರಲ್ಲಿ ಕುರುಬ ಸಮುದಾಯ ತನ್ನದೇ ಆಚಾರ-ವಿಚಾರ ಹಾಗೂ ವೈಶಿಷ್ಟ್ಯ ಹೊಂದಿದೆ. ನಮ್ಮ ಈ ಹೋರಾಟಕ್ಕೆ ಎಲ್ಲಾ ಸಮುದಾಯಗಳ ಬೆಂಬಲ-ಸಹಕಾರ ಕೋರು ತ್ತಿದ್ದೇವೆ. ಅದರಲ್ಲೂ ಮೇಲ್ವರ್ಗದ ಸಹಕಾರ ಕೇಳುತ್ತಿದ್ದೇವೆ. ಜೊತೆಗೆ ನಮ್ಮ ಸಮುದಾಯ ದಂತೆ ಎಸ್‍ಟಿಗೆ ಸೇರ್ಪಡೆಯಾಗುವ ಎಲ್ಲಾ ಅರ್ಹತೆ ಇರುವ ಬೇರೆ ಸಮುದಾಯಗಳೂ ಇವೆ. ಅವುಗಳನ್ನೂ ಎಸ್‍ಟಿ ಸೇರ್ಪಡೆ ಮಾಡ ಬೇಕೆಂಬುದು ನಮ್ಮ ಆಶಯ ಎಂದರು.

ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಹಿರಿಯ ಶ್ರೀಗಳು ಸೇರಿದಂತೆ ಇನ್ನಿ ತರ ಶ್ರೀಗಳು ಹಾಗೂ ಮುಖಂಡರು ಸೇರಿ ಈಗಾಗಲೇ ಸರ್ಕಾರಕ್ಕೆ ಈ ಸಂಬಂಧ ಸುದೀರ್ಘ ಅಂಶಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದ್ದೇವೆ. ಮನವಿಯಲ್ಲಿ ಉಲ್ಲೇ ಖಿಸಿರುವ ಅಂಶಗಳನ್ನು ಕುಲಶಾಸ್ತ್ರಜ್ಞರು, ಇತಿಹಾಸಕಾರರು ಸೇರಿದಂತೆ ತಜ್ಞರ ಅಧ್ಯ ಯನಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಬಳಿಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರ ಚಳವಳಿ: ಇಡೀ ದೇಶದಲ್ಲಿ 12 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಕುರುಬ ಸಮುದಾಯವಿದೆ. ಆದರೆ ಇದರಲ್ಲಿ ಕೇವಲ 25ರಿಂದ 50 ಸಾವಿರ ಮಂದಿ ಮಾತ್ರ ಉನ್ನತ ಸ್ಥಾನಮಾನದಲ್ಲಿ ಇದ್ದಾರೆ. ಉಳಿ ದವರ ಮುಖ್ಯವಾಹಿನಿಗೆ ತರಬೇಕಿದೆ. ನಮ್ಮ ಈ ಹೋರಾಟ ಪಕ್ಷಾತೀತ. ಹೋರಾಟದ ಅಂಗವಾಗಿ `ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್’ ಸಂಘಟನೆ ಮೂಲಕ ರಾಜ್ಯಾ ದ್ಯಂತ ಪತ್ರ ಚಳವಳಿ ನಡೆಸಲು ಉದ್ದೇಶಿಸ ಲಾಗಿದೆ. ಯುವ ಜನರು, ಉಪನ್ಯಾಸಕರು, ಪ್ರಾಧ್ಯಾಪಕರು ಸೇರಿದಂತೆ ಸಮುದಾಯದ ಬಹುಪಾಲು ಮಂದಿ ಸರ್ಕಾರಕ್ಕೆ ಪತ್ರ ಬರೆ ಯುವ ಚಳವಳಿ ನಡೆಸಿ, ಸರ್ಕಾರದ ಗಮನ ಸೆಳೆಯಲಿದ್ದಾರೆ ಎಂದು ತಿಳಿಸಿದರು. ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಹೋರಾಟ ಸಮಿತಿ ಪದಾಧಿಕಾರಿಗಳಾದ ಅಣ್ಣೇಗೌಡ, ಶ್ರೀನಿವಾಸ್, ಬಾಲರಾಜ್, ಶಿವಕುಮಾರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

 

 

Translate »