ಹಾಸನ: ಸಿನಿಮಾಗಳದ್ದೇ ಅಬ್ಬರ ವಿರುವ ಈ ಕಾಲದಲ್ಲಿ ಪೌರಾಣಿಕ ನಾಟಕ ಗಳನ್ನು ಮಾಡುವುದಿರಲಿ, ನೋಡುವುದಕ್ಕೂ ಜನರು ಮೂಗು ಮುರಿಯುತ್ತಿದ್ದಾರೆ. ಅದರಲ್ಲೂ ಈಗಿನ ಮಕ್ಕಳಿಗೆ ಇವುಗಳ ಸ್ಪಷ್ಟ ಪರಿಚಯವೂ ಇಲ್ಲ. ಆದರೆ ಇಲ್ಲಿನ ಮಕ್ಕಳು ಪೌರಾಣಿ ಕರ ಪಾತ್ರಗಳಿಗೆ ಜೀವ ತುಂಬುವ ಮೂಲಕ ನಾಟಕ ಕಲೆಯನ್ನು ಉಳಿಸಿ-ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ.
ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ಕಲಾ ಆರಾಧಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಕ್ಕಳಿಗೆ ಪಾಠ, ಪ್ರವ ಚನದ ಜೊತೆಗೆ ನಾಟಕವನ್ನೂ ಕಲಿಸು ತ್ತಿರುವ ಶಿಕ್ಷಕರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಶಾಲೆಯ ಸುಮಾರು 24 ಮಕ್ಕಳು ಪ್ರದರ್ಶಿ ಸಿದ ಕುರುಕ್ಷೇತ್ರ ನಾಟಕವು ಜನರಿಂದ ಸೈ ಎನಿಸಿಕೊಂಡಿತು. ಇದಕ್ಕಾಗಿ ಕಳೆದ 6 ತಿಂಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳನ್ನು ಶಾಲೆಯಲ್ಲಿ ಹಿಡಿ ದಿಟ್ಟುಕೊಂಡು ಕಠಿಣ ಎನಿಸುವ ಪೌರಾ ಣಿಕ ನಾಟಕವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ, ಜನರು ಶಿಳ್ಳೆ-ಚಪ್ಪಾಳೆಯ ಹೊಡೆಯುವ ಮಟ್ಟಿಗೆ ಪ್ರದರ್ಶಿಸಿದ ಕೀರ್ತಿ ಇಲ್ಲಿನ ಶಿಕ್ಷಕರದು.
ಶಾಲೆಯ ಶಿಕ್ಷಕರಾದ ಪುಟ್ಟಸ್ವಾಮಿ ಸೇರಿ ನಾಲ್ಕು ಶಿಕ್ಷಕರು ಮಕ್ಕಳಿಗೆ ನಾಟಕವನ್ನು ಹೇಳಿಕೊಟ್ಟು, ರಾತ್ರಿಪೂರ ಸುಮಾರು 7 ಗಂಟೆಗಳ ಕಾಲ ನಿರಂತರವಾಗಿ ನಡೆದ ನಾಟಕ ಪ್ರದರ್ಶಕ್ಕೆ ಬೆನ್ನೆಲುಬಾಗಿ ನಿಂತಿ ದ್ದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಕ್ಕಳು ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿದ್ದಕ್ಕೆ ಭರಪೂರ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸತತ ಆರು ತಿಂಗಳಿಂದ ಕಲಿತ ನಾಟಕ ವನ್ನು ಡಿಸೆಂಬರ್ ಮತ್ತು ಜನವರಿಯಲ್ಲಿ 3 ದಿನಗಳ ಕಾಲ ಪೂರ್ವಭಾವಿಯಾಗಿ ಪ್ರದರ್ಶನ ಮಾಡಲಾಗಿತ್ತು. ಮಕ್ಕಳ ಪ್ರತಿ ಭೆಗೆ ಶ್ರೀ ಕ್ಷೇತ್ರ ಜೈನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಬೃಹತ್ ವೇದಿಕೆ ನಿರ್ಮಿಸಿ ಕೊಟ್ಟು ಸಾರ್ಥಕ ಕೆಲಸ ಮಾಡಿವೆ.
ಮುಂದಿನ ದಿನದಲ್ಲಿ ಶಾಲಾ ಮಕ್ಕ ಳಿಂದ ರಾಮಾಯಣದ ನಾಟಕವನ್ನೂ ಮಾಡಿಸಲು ಈ ಶಿಕ್ಷಕರ ತಂಡ ನಿರ್ಧ ರಿಸಿದೆ. ಮಕ್ಕಳ ಮೂಲಕ ಕಲಾರಾಧನೆ ಮಾಡುತ್ತಿರುವ ಶಿಕ್ಷಕರಿಗೆ ಜನರು ಬೆಂಬಲವಾಗಿ ನಿಂತಿದ್ದಾರೆ.