ಡಿ.29ರಂದು ಜಿಲ್ಲಾಡಳಿತದಿಂದ ಕುವೆಂಪು ಜಯಂತಿ
ಮೈಸೂರು

ಡಿ.29ರಂದು ಜಿಲ್ಲಾಡಳಿತದಿಂದ ಕುವೆಂಪು ಜಯಂತಿ

December 23, 2018

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 29 ರಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾ ಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ರಾಷ್ಟ್ರಕವಿ ಕುವೆಂಪು ಅವರ ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ಯುವಜನತೆಗೆ ಮನದಟ್ಟು ಮಾಡುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ ತಿಳಿಸಿದರು.

ಸಾಹಿತಿಗಳಾದ ಕೆ. ಭೈರವಮೂರ್ತಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುವರು. ಅಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ರಾಷ್ಟ್ರಕವಿ ಕುವೆಂಪು ಅವರ ರಚನೆಯ ಗೀತಗಾಯನ, ನೃತ್ಯರೂಪಕ ಕಾರ್ಯ ಕ್ರಮಗಳು ನಡೆಯಲಿವೆ.

ಸಭೆಯಲ್ಲಿ ಭಾಗ ವಹಿ ಸಿದ್ದ ಕನ್ನಡಪರ ಸಂಘ ಟನೆಯ ಮುಖಂಡರು ಮಾತನಾಡಿ, ಮಾತೃ ಮಂಡಳಿ ವೃತ್ತದಲ್ಲಿರುವ ಕುವೆಂಪು ಪ್ರತಿಮೆಯನ್ನು ಸ್ವಚ್ಛಗೊಳಿಸಬೇಕು ಹಾಗೂ ಈ ವೃತ್ತಕ್ಕೆ ಕುವೆಂಪು ಅವರ ಹೆಸರಿಡಲಾಗಿದ್ದು, ಅದನ್ನೇ ಬಳಸು ವಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಅಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಂಘ ಸಂಸ್ಥೆ ಗಳು ಹಾಗೂ ಜಿಲ್ಲಾಡಳಿತ ವತಿಯಿಂದ ಗನ್‍ಹೌಸ್ ಬಳಿಯಲ್ಲಿರುವ ಕುವೆಂಪು ಪ್ರತಿಮೆಗೆ ಮಾರ್ಲಾಪಣೆ ಮಾಡಿ ಗೌರವಿಸಲಾಗುವುದು. ನಂತರ ಕಲಾ ಮಂದಿರ ದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುವುದು.

ಪೂರ್ವಭಾವಿ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ಕನ್ನಡ ಪರ ಸಂಘಟನೆಗಳ ಮುಖಂಡರಾದ ತಾಯೂರು ವಿಠಲ ಮೂರ್ತಿ, ಸುರೇಶ್‍ಗೌಡ, ಎಂ.ಬಿ.ವಿಶ್ವನಾಥ್, ಪಾಲ ಹಳ್ಳಿ ರಾಮಕೃಷ್ಣ, ರಾಮೇಗೌಡ, ಬಾಲಕೃಷ್ಣ, ಸತ್ಯಪ್ಪ, ಡಿ.ಎಚ್. ಶಿವಶಂಕರ್, ಮಡ್ಡಿಕೆರೆ ಗೋಪಾಲ್, ಭಾನು ಮೋಹನ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Translate »