ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು
ಹಾಸನ

ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು

December 23, 2018

ಹಾಸನ:  ನಗರದ ಎಂ.ಜಿ.ರಸ್ತೆ ಬಳಿ ಇರುವ ಶ್ರೀ ಗುರುರಾಘವೇಂದ್ರ ಮಠ ದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಶನಿ ವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ದತ್ತಪೀಠಕ್ಕೆ ಸುಮಾರು 200ಕ್ಕೂ ಹೆಚ್ಚು ಜನ ದತ್ತಮಾಲೆ ಧರಿಸಿ ಪ್ರಯಾಣ ಬೆಳೆಸಿದರು.

ವಿಶ್ವ ಹಿಂದೂ ಪರಿಷತ್ ಮತ್ತು ಭಜ ರಂಗದಳ ಹಾಸನ ನಗರ ಹಾಗೂ ತಾಲೂಕು ಘಟಕದಿಂದ ದತ್ತಮಾಲಾ ಅಭಿಯಾನದ ಡಿ.12 ರಿಂದ 22ರವರೆಗೂ ಶ್ರೀ ದತ್ತ ಜಯಂತಿ ಉತ್ಸವ ಅಂಗವಾಗಿ ಭಕ್ತಾದಿಗಳು ದತ್ತ ಮಾಲೆ ಧರಿಸಿ ಶ್ರೀ ದತ್ತಾತ್ರೇಯ ಸ್ಥಳಕ್ಕೆ ವಾಹನದ ಮೂಲಕ ಪ್ರಯಾಣ ಬೆಳೆಸಿದರು.

ಹಿಂದಿನ ಬೇಡಿಕೆಗಳಾದ ದತ್ತಾತ್ರೇಯ ಪೀಠದ ಆವರಣದಲ್ಲಿ ಗೋರಿಯ ಮೇಲಿದ್ದ ಹಸಿರು ಬಟ್ಟೆಗಳನ್ನು ಸರ್ಕಾರ ತೆಗೆಸಿದೆ. ಶಾಖಾದ್ರಿ ಕುಟುಂಬಸ್ಥರ ಆಡಳಿತವನ್ನು ಕೊನೆಗೊಳಿಸಿ ಸರ್ಕಾರ ಆಡಳಿತ ನಡೆಸು ತ್ತಿದೆ. 1992ರಿಂದ ಭಜರಂಗ ದಳದ ವತಿ ಯಿಂದ ಜನಜಾಗೃತಿ ರಥಯಾತ್ರೆ ಜೀಪ್ ಜಾಥಾಗಳನ್ನು ನಡೆಸಿ, ಶ್ರೀ ದತ್ತ ಜಯಂತಿ ಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಪ್ರತಿ ವರ್ಷ ರಾಜ್ಯದಿಂದ ದತ್ತಪೀಠಕ್ಕೆ ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವರ್ಷವಿಡೀ ಹಿಂದೂ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ದತ್ತ ಪೀಠಕ್ಕೆ ಬರಲು ಮುಕ್ತ ಅವಕಾಶ ದೊರಕಿಸಿಕೊಟ್ಟಿದೆ. ಮಾಂಸ ಹಾರ ಹಾಗೂ ಪ್ರಾಣಿವಧೆಯನ್ನು ಸರ್ಕಾರ ನಿಷೇಧ ಮಾಡಿರುವುದು ದತ್ತಪೀಠದ ಸಂಘಟನೆಯ ಹೋರಾಟಕ್ಕೆ ಸಂದ ಜಯ ಎಂದರು.

ಪೀಠದ ಗುಹಾಂತರ ದೇವಾಲಯದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ತ್ರಿಕಾಲ ಪೂಜೆ ನಡೆಯಬೇಕು. ಪೀಠಕ್ಕೆ ಓರ್ವ ಶಾಶ್ವತ ಹಿಂದೂ ಕಾರ್ಯನಿರ್ವಹಣಾ ಧಿಕಾರಿಗಳನ್ನು ನೇಮಕ ಮಾಡಬೇಕು. ದತ್ತಪೀಠದಲ್ಲಿ ಇಸ್ಲಾಂನ ಯಾವುದೇ ಚಟು ವಟಿಕೆಗಳಿಗೆ ಅವಕಾಶ ನೀಡಬಾರದು. ಇಸ್ಲಾಂ ವಿಧಾನಗಳು ಮತ್ತು ಗೋರಿ ಗಳನ್ನು ನಾಗೇನಹಳ್ಳಿಯಲ್ಲಿರುವ ಮೂಲ ಬಾಬಾಬುಡನ್ ದರ್ಗಾಕ್ಕೆ ವರ್ಗಾಯಿಸ ಬೇಕು ಎಂದು ಒತ್ತಾಯಿಸಿದರು. ಶ್ರೀಗುರು ದತ್ತಾತ್ರೇಯ ಪೀಠ ಮತ್ತು ಪರಿಸರವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸ ಬೇಕು. ಪೀಠದಲ್ಲಿದ್ದ ಅಮೂಲ್ಯ ವಿಗ್ರಹ ಗಳು, ಭಕ್ತಾದಿಗಳು ನೀಡಿರುವ ಕಾಣಿಕೆ ವಸ್ತುಗಳು ಹಾಗೂ ಇನಾಂ ಭೂಮಿ ಅಕ್ರಮ ಹಸ್ತಾಂತರ ಮಾರಾಟವಾಗಿದ್ದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡು ಅವುಗಳನ್ನು ಮರಳಿ ಪಡೆಯಬೇಕು ಎಂದು ಹೇಳಿದರು. ಪೀಠಕ್ಕೆ ಬರುವ ಹಿಂದೂ ಭಕ್ತಾದಿಗಳಿಗೆ ಮತ್ತು ಸ್ವಾಮೀಜಿಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಡು ವಂತೆ ಇದೇ ವೇಳೆ ತಮ್ಮ ಕರಪತ್ರದ ಮೂಲಕ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಪ್ರಮುಖರು ಕೆ.ನವೀನ್ ಕುಮಾರ್, ರವಿ ಸೋಮು, ಚೇತನ್, ಪವನ್, ಮುರುಳಿ, ಶಿವಪ್ಪ ಹಾಗೂ ಕಟ್ಟಾಯ ಶಿವ ಕುಮಾರ್, ಐನೇಟ್ ವಿಜಿಕುಮಾರ್, ಪತಂಜಲಿ ಮಹಿಳಾ ವಿಭಾಗದ ಮಾಧ್ಯಮ ಪ್ರಭಾರಿ ರಾಧಾ ತ್ರಿವಾರಿ ಇತರರು ಉಪಸ್ಥಿತರಿದ್ದರು. ಮುನ್ನೆಚ್ಚರಿಕಾ ಕ್ರಮ ವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

Translate »