ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿದ್ದಂತೆ  ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಮತ
ಹಾಸನ

ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿದ್ದಂತೆ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಮತ

December 23, 2018

ಶ್ರವಣಬೆಳಗೊಳ: ನನ್ನ ಪ್ರತಿ ಯೊಂದು ಕಾದಂಬರಿಗಳಲ್ಲೂ ಜೀವನ ಮೌಲ್ಯಗಳನ್ನು ಬಿಡಿ ಬಿಡಿಯಾಗಿ ಪರಿ ಶೋಧನೆ ಮಾಡುವ ಕ್ರಮವಾಗಿದ್ದು, ಮೂಲಭೂತವಾದ ಅಹಿಂಸೆ ಹಾಗೂ ಇತರ ಮೌಲ್ಯಗಳ ಶೋಧನೆಗೆ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಜೈನ ಧರ್ಮದ ಸಿದ್ಧಾಂತಗಳು ಸಹಕಾರಿಯಾಗಿದೆ ಎಂದು ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು.

ಶ್ರವಣಬೆಳಗೊಳದ ಕಾನಜಿ ಯಾತ್ರಿ ಕಾಶ್ರಮ ಸಭಾಂಗಣದಲ್ಲಿ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಆಯೋಜಿಸಿದ್ದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿ ದ್ದಂತೆ. ಯಾವುದೇ ಭಾಷೆಯಲ್ಲಿ ಇಲ್ಲದ ಸಾಹಿತ್ಯ ಸಮೃದ್ಧಿ ಪ್ರಾಕೃತ ಹಾಗೂ ಹಳಗನ್ನಡ ಜೈನ ಸಾಹಿತ್ಯದಲ್ಲಿದ್ದು, ಆಧುನಿಕ ಸಾಹಿತ್ಯ ಬೆಳವಣಿಗೆಗೂ ಸಾಧ್ಯವಾಗಿದೆ ಎಂದರು.

ಭಾರತೀಯ ಸಂಸ್ಕøತಿ ಮತ್ತು ತತ್ವ ದರ್ಶನ ಗಳಿಗೆ ಪ್ರಮುಖ ಕೊಡುಗೆ ನೀಡಿರುವುದು ಜೈನ ಧರ್ಮ. ಇಂದ್ರೀಯ ನಿಗ್ರಹ, ಆಹಾರ ಪದ್ಧತಿ ಹಾಗೂ ಅಹಿಂಸಾ ಮಾರ್ಗದಲ್ಲಿ ಅನುಷ್ಠಾನ ಮಾಡಿಕೊಂಡಿರುವ ಜೈನ ಧರ್ಮ ಶ್ರೇಷ್ಠವಾದ ಧರ್ಮ. ವೈಚಾರಿಕತೆ ಯನ್ನು ಗೌರವಿಸುವುದು ಭಾರತೀಯ ಸಂಸ್ಕøತಿಯ ಮೂಲ ಆಶಯ. ಈ ಮೂಲ ವನ್ನು ಅರ್ಥೈಸದೆ ಮನುಷ್ಯ ಇಂದು ತನ್ನ ವಿಚಾರವನ್ನು ಜಿಜ್ಞಾಸೆ ಮೂಲಕ ವ್ಯಕ್ತ ಪಡಿಸುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟರು.

ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿ, ನಮ್ಮ ತಾಲೂಕಿನವರಾದ ಡಾ.ಎಸ್.ಎಲ್. ಭೈರಪ್ಪ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಸರಸ್ವತಿ ಸಮ್ಮಾನ, ನಾಡೋಜ, ಪದ್ಮಶ್ರೀ ಪ್ರಶಸ್ತಿಯಂತಹ ಅತ್ಯುತ್ತಮ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ಈ ಭಾಗದ ಹಿರಿಮೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಭೈರಪ್ಪರಂತಹ ಸಾಹಿತಿಗಳು ವಿರಳವಾ ಗಿದ್ದು, ಇಂತಹ ಸಾಧಕರನ್ನು ಗೌರವಿಸು ವುದು ನಮ್ಮ ಪುಣ್ಯ ಎಂದರು.
ಈ ಭಾಗದಲ್ಲಿ ಪ್ರಾಕೃತ ಭಾಷೆಯ ಛಾಯೆ ಹಾಗೂ ಸಂಸ್ಕøತ ಭಾಷೆಯ ಪ್ರಭಾವ ವಿದ್ದು, ಭೈರಪ್ಪನವರು ಈ ಭಾಷಾ ಸಂಪ ತ್ತನ್ನು ಶಾಶ್ವತೀಕರಿಸಿದ್ದಾರೆ. ಸಮಾಜ ಸುಧಾರಣೆ ಮಾಡುವಂತಹ ಸಾಹಿತ್ಯ ಇವರ ಬರಹಗಳಿಂದ ಮೂಡುತ್ತಿದೆ. ಭಾರ ತೀಯ ಸಂಸ್ಕøತಿ ಉಳಿಯಬೇಕು, ಬೆಳೆಯ ಬೇಕು ಎಂಬ ಹಂಬಲದಿಂದ ಇವರು ಸಾಹಿತ್ಯ ಕೃಷಿ ಮಾಡುತ್ತಿದ್ದು, ಕನ್ನಡದ ಸಾಹಿತ್ಯ ರುಚಿ ಯನ್ನು ದೇಶದ ಇತರೆ ಭಾಷೆಗೂ ತಲುಪಿ ಸಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಡಾ. ಎಸ್.ಎಲ್.ಭೈರಪ್ಪ ನವರಿಗೆ ‘ವಿದ್ಯಾ ವಾಚಸ್ಪತಿ’ ಬಿರುದನ್ನು ನೀಡಿ, ಆಭಿನಂದನಾ ಪತ್ರ ಹಾಗೂ ಸರಸ್ವತಿ ವಿಗ್ರಹವಿರುವ ಸ್ಮರಣಿಕೆ ನೀಡಿ ಚಾರುಕೀರ್ತಿ ಶ್ರೀಗಳು ಗೌರವಿಸಿದರು. ಇದಕ್ಕೂ ಮುನ್ನ ಕ್ಷೇತ್ರದ ವತಿಯಿಂದ ಪೂರ್ಣಕುಂಭ, ಮಂಗಲ ಕಲಶ, ಧರ್ಮ ಧ್ವಜ ಹಿಡಿದ ಶ್ರಾವಕ-ಶ್ರಾವಕಿಯರು ಮಂಗಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕುವೆಂಪು ಅಧ್ಯ ಯನ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಸಾಹಿತಿ ಡಾ.ಪ್ರಧಾನ ಗುರುದತ್, ಪ್ರಾಕೃತ ಸಂಶೋಧಕ ಪ್ರೊ.ಸಣ್ಣಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಜೈನ್, ಹೋಬಳಿ ಘಟ ಕದ ಅಧ್ಯಕ್ಷ ಗಂಗಾಧರ್, ಮಾಜಿ ಅಧ್ಯಕ್ಷ ಡಾ.ಬಿ.ಆರ್.ಯುವರಾಜ್ ಮುಂತಾ ದವರು ಉಪಸ್ಥಿತರಿದ್ದರು.

Translate »