ನ್ಯಾಯಾಧೀಶರು, ವಕೀಲರು ಪರಿಪಕ್ವವಾದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ
ಹಾಸನ

ನ್ಯಾಯಾಧೀಶರು, ವಕೀಲರು ಪರಿಪಕ್ವವಾದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ

December 23, 2018

ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅಭಿಮತ
ಅರಸೀಕೆರೆ: ನ್ಯಾಯಾಂಗದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು ಪರಿಪಕ್ವವಾದಲ್ಲಿ ಮಾತ್ರ ನಮ್ಮನ್ನು ನಂಬಿ ಬರುವ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಕೀಲರು ಕಾನೂನು ಕಾರ್ಯಾಗಾರ ಗಳಲ್ಲಿ ಭಾಗವಹಿಸಿ ಅನುಭವಿ ತಜ್ಞರಿಂದ ತರಬೇತಿ ಪಡೆದು ಜ್ಞಾನವನ್ನು ವೃದ್ಧಿಸಿ ಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯ ಮೂರ್ತಿ ಹೆಚ್.ಪಿ.ಸಂದೇಶ್ ಹೇಳಿದರು.

ನಗರದ ನ್ಯಾಯಾಲಯ ಸಂಕೀರ್ಣ ದಲ್ಲಿರುವ ವಕೀಲರ ಭವನದಲ್ಲಿ ತಾಲೂಕು ವಕೀಲರ ಸಂಘದಿಂದ ಏರ್ಪಡಿಸಲಾ ಗಿದ್ದ ವಕೀಲರ ದಿನಾಚರಣೆ ಮತ್ತು ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ನ್ಯಾಯ ನಿರ್ಣಯ ಮಾಡ ಬೇಕಾದರೆ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಸಾಕಷ್ಟು ಪರಿಪಕ್ವತೆ ಯನ್ನು ಹೊಂದಿರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ವಕೀಲಿ ವೃತ್ತಿಯನ್ನು ಮಾಡುವವರೇ ಹೆಚ್ಚಿನ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ಕರಡು ರಚಿ ಸುವ ಸಮಿತಿ ಅಧ್ಯಕ್ಷರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರ ಸವಿ ನೆನಪಿಗಾಗಿ ಡಿ.3 ರಂದು ವಕೀಲರ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ. ಅಂದು ವಕೀ ಲರು ಸೇರಿದಂತೆ ಹಿರಿಯರು, ಚಿಂತಕರು ಮತ್ತು ಸ್ವಾತಂತ್ರ್ಯ ಸೇನಾನಿಗಳು ಒಗ್ಗೂಡಿ ನಮ್ಮ ದೇಶದ ಸಂವಿಧಾನದ ಕರಡನ್ನು ಸಿದ್ಧಪಡಿಸಿದರು ಎಂದರು.

ನಮ್ಮ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ವಿಶೇಷ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ಸ್ವಾತಂತ್ರ್ಯವನ್ನು ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರು ಒಗ್ಗೂಡಿ ಸಂರಕ್ಷಣೆ ಮಾಡುವ ಜವಾಬ್ದಾರಿ ಹೆಚ್ಚಿದೆ. ಇವರೆಲ್ಲರೂ ಕೈ ಜೋಡಿಸಿದಾಗ ಮಾತ್ರ ನ್ಯಾಯಾಂಗದ ಪಾವಿತ್ರ್ಯತೆ ಹೆಚ್ಚಾಗುತ್ತದೆ. ನಾವು ಧರಿಸಿರುವ ಕಪ್ಪು ಬಣ್ಣದ ಕೋಟ್ ಕಕ್ಷಿದಾರರ ಹಕ್ಕಿಗೆ ಚ್ಯುತಿ ಬಂದಾಗ ನ್ಯಾಯ ಕೋರಿ ಬರುವ ಕಕ್ಷಿದಾರಿಗೆ ನ್ಯಾಯ ಕೊಡಿ ಸಲು ಸೂಚಿಸುತ್ತದೆ. ಇಂದು ವಕೀಲ ವೃತ್ತಿ ನ್ಯಾಯಾಲಯ ಒಳಗೆ ನಡೆಯುವ ವಿದ್ಯಾಮಾನಗಳಿಗೆ ಮಾತ್ರ ಸೀಮಿತ ವಾಗುತ್ತಿದೆ. ರಾಷ್ಟ್ರಕ್ಕೆ ಬೇಕಾಗಿರುವ ಉತ್ತಮ ನಾಯಕ ಮತ್ತು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಕೀಲನೂ ಮುಂದೆ ಬರಬೇಕು ಎಂದರು.

ಯುವ ವಕೀಲರು ತಮ್ಮ ವೃತ್ತಿ ಜೀವನ ಪ್ರಾರಂಭದಲ್ಲಿ ಸಿಗುವ ಹಿರಿಯ ವಕೀಲರ ಮಾರ್ಗದರ್ಶನ ಪಡೆದುಕೊಳ್ಳುವುದು ಅತ್ಯಮೂಲ್ಯವಾಗಿದೆ. ಪ್ರತಿ ವಕೀಲನೂ ಜ್ಞಾನದ ಹಿಂದೆ ಹೋದಾಗ ಐಶ್ವರ್ಯ ಎಂಬುದು ತಾನಾಗಿಯೇ ಅವರ ಬಳಿ ಬರುತ್ತದೆ. ಹಣದ ಹಿಂದೆ ಹೋಗುವ ವಕೀಲ ಎಂದೂ ತನ್ನ ವೃತ್ತಿಯಲ್ಲಿ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಮೊದಲು ಅರಿಯಬೇಕು. ಸಮೃದ್ಧ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣ ಮಾಡಬೇಕಾದರೆ ಎಲ್ಲಾ ವಕೀಲರೂ ಆತ್ಮಾ ವಲೋಕನ ಮಾಡಿಕೊಳ್ಳುವುದರ ಮೂಲಕ ವಿಶಾಲವಾಗಿ ಯೋಚಿಸಬೇಕು. ಯುವ ವಕೀಲರಿಗೆ ನ್ಯಾಯಾಧೀಶರು ಅವರ ಹಿರಿಯ ವಕೀಲರಿಗಿಂತ ಹೆಚ್ಚಿನ ಅವಕಾಶಗಳನ್ನು ನೀಡುವುದರ ಮೂಲಕ ಹೆಚ್ಚು ಹೆಚ್ಚು ಅನುಭವಗಳನ್ನು ಪಡೆಯಲು ಅವಕಾಶ ಗಳನ್ನು ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಕೆ.ಎಸ್.ತಿಮ್ಮಣ್ಣಾಚಾರ್ ಮಾತನಾಡಿ, ಕಾರ್ಯಾಗಾರಗಳ ಮೂಲಕ ನೀಡಲಾಗುವ ಉಪನ್ಯಾಸಗಳನ್ನು ಪ್ರತಿ ಯೊಬ್ಬ ವಕೀಲರೂ ಆಸಕ್ತಿಯಿಂದ ಆಲಿಸ ಬೇಕು. ವಿದ್ಯಾಬ್ಯಾಸದಲ್ಲಿ ಯಾರೂ ಪರಿ ಪಕ್ವವಾಗಲು ಸಾಧ್ಯವಿಲ್ಲ. ನಾವು ಪಡೆ ಯುವ ಅನುಭವ ಮತ್ತು ಮಾರ್ಗದರ್ಶನ ಗಳು ನಮ್ಮನ್ನು ಉತ್ತಮ ವಕೀಲರನ್ನಾಗಿ ರೂಪಿಸುತ್ತದೆ. ಒಳ್ಳೆಯ ಗುಣಮಟ್ಟದ ಸೇವೆಯನ್ನು ನಾವು ಕಕ್ಷಿದಾರರಿಗೆ ನೀಡಿದಾಗ ಆ ಕಕ್ಷಿದಾರರೇ ಸಾರ್ವಜನಿಕ ವಲಯದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಮಗೆ ಪ್ರಚಾರವನ್ನು ನೀಡಿ ಗೌರವವನ್ನು ತಂದು ಕೊಡುತ್ತಾರೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಲೋಕೇಶ್ ಕುಮಾರ್ ಮಾತನಾಡಿ, ನಮ್ಮ ನ್ಯಾಯಾಲಯ ಸಂಕೀರ್ಣದಲ್ಲಿ ರುವ ಸುಮಾರು 60 ವರ್ಷಗಳಷ್ಟು ಹಳೆಯ ದಾದ ಕಟ್ಟಡವನ್ನು ತೆರವುಗೊಳಿಸಿ ನೂತನ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲು ಸರ್ಕಾರ ಮತ್ತು ನಮ್ಮ ಹೈ ಕೋರ್ಟ್ ನ್ಯಾಯಮೂರ್ತಿಗಳು ಹಸಿರು ನಿಶಾನೆಯನ್ನು ತೋರಿಸಿದ್ದಾರೆ. ಈ ನೂತನ ಸಂಕೀರ್ಣ ನಿರ್ಮಾಣ ಮಾಡಲು 13 ಕೋಟಿ ರೂ. ಅನುದಾನ ಬಿಡುಗಡೆ ಕೂಡ ಆಗಲಿದೆ. ಮಾದರಿ ಹಾಗೂ ಹೈಟೆಕ್ ಸಂಕೀರ್ಣವನ್ನು ನಿರ್ಮಾಣ ಮಾಡಲು ಎಲ್ಲಾ ನ್ಯಾಯಾಧೀಶರು ಮತ್ತು ವಕೀಲ ವೃತ್ತಿ ಮಿತ್ರರು ತಮ್ಮ ಸಹಕಾರ ಮತ್ತು ಮಾರ್ಗದರ್ಶನವನ್ನು ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಸಿವಿಲ್ ನ್ಯಾಯಾಧೀಶರಾದ ನಿರ್ಮಲ.ಕೆ, ಪ್ರಭಾರ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀ ವಾಸ್ತವ್, ಒಂದನೇ ಅಧಿಕ ಸಿವಿಲ್ ನ್ಯಾಯಾ ಧೀಶರಾದ ದೀಪಾ ಉಪಸ್ಥಿತರಿದ್ದರು. ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಗೌರವ ಉಪ ನ್ಯಾಸಕರಾದ ವಿಶ್ವನಾಥ್ ವಿ.ಅಂಗಡಿ ವಕೀಲರಿಗೆ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಗೀತಾ, ಹಿರಿಯ ವಕೀಲ ರಾದ ಬಿ.ಎನ್.ರವಿ, ವಿಜಯಕುಮಾರ್, ಮೂರ್ತಿ, ಯತೀಶ್, ಜಯದೇವ, ಕಲ್ಗುಂಡಿ ಹಿರಿಯಣ್ಣ, ಸಿದ್ದಮಲ್ಲಪ್ಪ, ರವಿಶಂಕರ್, ರವಿ, ಶ್ವೇತಾ, ಎನ್.ಡಿ. ಪ್ರಸಾದ್, ವೆಂಕಟೇಶ್, ಜಗದೀಶ್, ರಾಘವೇಂದ್ರ, ವಿವೇಕ್, ಸರ್ವೇಶ್ ಇನ್ನಿತರರು ಭಾಗವಹಿಸಿದ್ದರು.

Translate »