ಮೈಸೂರು: ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಬಿಗ್ ಬಜಾರ್ ಮಾಲ್‍ನಲ್ಲಿ ಡಿ.21ರಿಂದ 2019ರ ಜನವರಿ 2ರವರೆಗೆ ಬಿಗ್ ಹಾಲಿಡೇ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಬಿಗ್‍ಬಜಾರ್‍ನಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಟಿಯನ್ನು ದ್ದೇಶಿಸಿ ಮಾತನಾಡಿದ ಮಾಲ್‍ನ ಸ್ಟೋರ್ ಮ್ಯಾನೇಜರ್ ಸಿ.ಎಂ.ರವಿಚಂದ್ರನ್, ಬಿಗ್ ಹಾಲಿಡೇ ವೇಳೆ ಬಿಗ್ ಬಜಾರ್‍ನಲ್ಲಿ 4000 ರೂ. ವರೆಗೆ ವಸ್ತುಗಳನ್ನು ಖರೀದಿಸಿದ ಗ್ರಾಹಕರು 1000 ರೂ.ಗಳ ವೋಚರ್ ಪಡೆಯುವ ಅವಕಾಶ ನೀಡಲಾಗಿದೆ ಎಂದರು.
ಈವರೆಗೆ ವಿಶೇಷ ರಿಯಾಯಿತಿ ಮೂಲಕ ಮೆಗಾ ಮಾರಾಟ ಉತ್ಸವಗಳನ್ನು ಆಚರಿಸುತ್ತಿದ್ದ ಮಾಲ್‍ನಲ್ಲಿ ಇದೀಗ 4000 ರೂ. ಖರೀದಿಸಿದ ಗ್ರಾಹಕರಿಗೆ 600 ರೂ.ಗಳ ವೋಚರ್‍ಗಳ ಹಾಗೂ 400 ರೂ.ಗಳ ಫ್ಯೂಚರ್ ಪೇ ಮೂಲಕ ಮರಳಿಸಲಾಗುವುದು ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಮೊಬೈಲ್ ಸಂಖ್ಯೆ 9591264964 ಮೂಲಕ ಕರೆ ಮಾಡಿ ಆರ್ಡರ್ ಮಾಡಿದರೆ ಉಚಿತ ಹೋಂ ಡೆಲಿವರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 2,499 ರೂ.ನ 2 ಡಬಲ್ ಬೆಡ್‍ಶೀಟ್ ಖರೀದಿಸಿದರೆ 1998 ರೂ.ಗಳ 4 ಪಿಲ್ಲೋಗಳನ್ನು ಉಚಿತವಾಗಿ ನೀಡಲಾಗುವುದು. ಉಡುಪು, ಪಾದರಕ್ಷೆ ಹಾಗೂ ಆಯ್ದ ವಸ್ತುಗಳ ಮೇಲೆ ಶೇ.50ರಷ್ಟು ವಿಶೇಷ ರಿಯಾಯಿತಿ ಇದೆ ಎಂದು ರವಿಚಂದ್ರನ್ ತಿಳಿಸಿದರು.
ಎಲೆಕ್ಟ್ರಾನಿಕ್, ದಿನಸಿ, ಹೋಂ ಕೇರ್ ಪದಾರ್ಥಗಳು, ಪರ್ಸನಲ್ ಕೇರ್ ವಸ್ತುಗಳು, ಆಹಾರ ಪದಾರ್ಥಗಳ ಮೇಲೂ ವಿಶೇಷ ರಿಯಾಯಿತಿಯನ್ನು ಜನವರಿ 2ರವರೆಗಿನ ಬಿಗ್ ಹಾಲಿಡೇ ಮಾರಾಟ ಸಂದರ್ಭ ನೀಡಲಾಗಿದೆ. ಗುಣಮಟ್ಟದ ಪದಾರ್ಥಗಳನ್ನು ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಬಿಗ್‍ಬಜಾರ್ ತನ್ನ ಗ್ರಾಹಕರನ್ನು ತೃಪ್ತಿ ಪಡಿಸುತ್ತಿದೆ ಎಂದು ಅವರು ತಿಳಿಸಿದರು.