ಬ್ರಾಹ್ಮಣ ಸಮಾವೇಶ ಯಶಸ್ವಿ ಹಿನ್ನೆಲೆ: ಗಣಪತಿ ಸಚ್ಚಿದಾನಂದ ಶ್ರೀಗಳಿಗೆ ಅಭಿನಂದನೆ
ಚಾಮರಾಜನಗರ

ಬ್ರಾಹ್ಮಣ ಸಮಾವೇಶ ಯಶಸ್ವಿ ಹಿನ್ನೆಲೆ: ಗಣಪತಿ ಸಚ್ಚಿದಾನಂದ ಶ್ರೀಗಳಿಗೆ ಅಭಿನಂದನೆ

December 23, 2018

ಮೈಸೂರು: ಬೃಹತ್ ಬ್ರಾಹ್ಮಣ ಸಮಾವೇಶದ ಯಶಸ್ಸಿಗೆ ಕಾರಣರಾದ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳವರಿಗೆ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.

ಇಂದು ದತ್ತ ಜಯಂತಿಯ ಪ್ರಯುಕ್ತ ನಡೆದ ಪೂಜಾ ಕೈಂಕರ್ಯದ ನಂತರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ನೂರಾರು ಬ್ರಾಹ್ಮಣ ಸಂಘದ ಸದಸ್ಯರು ಶ್ರೀಗಳಿಗೆ ವಂದನೆ ಸಲ್ಲಿಸಿ, ಸಮಾವೇಶದ ಯಶಸ್ಸಿಗೆ ಶ್ರೀಗಳು ಮತ್ತು ಆಶ್ರಮದ ಎಲ್ಲ ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿಕೊಂಡರು. ನಂತರ ಸಂಘದ ಪದಾಧಿಕಾರಿ ಗಳಿಗೆ ಆಶೀರ್ವಚನ ನೀಡಿದ ಶ್ರೀಗಳು ಈ ಆಶ್ರಮ ಮೈಸೂರಿನ ಎಲ್ಲರಿಗೂ ಸೇರಿದ್ದು. ಇದರ ಬಾಗಿಲು ಎಲ್ಲರಿಗೂ ಮುಕ್ತವಾಗಿದ್ದು ನೀವು ಯಾವುದೇ ಉತ್ತಮವಾದ ಸತ್ಕಾರ್ಯ ಕ್ರಮಗಳನ್ನು ನಡೆಸಿದರೆ ನಮ್ಮ ಆಶ್ರಮದಲ್ಲಿ ಸ್ಥಳ ನೀಡುವುದಾಗಿ ಹೇಳಿದರು.

ನಂತರ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಮುಖಂಡರಾದ ಅಪೂರ್ವ ಸುರೇಶ್, ಕಡಕೊಳ ಜಗದೀಶ್, ವಿಕ್ರಮ್ ಅಯ್ಯಂಗಾರ್, ಗಣೇಶ್ ಪ್ರಸಾದ್, ಪ್ರಶಾಂತ್ ಭಾರದ್ವಾಜ್, ಹರೀಶ್, ಜಯಸಿಂಹ, ರಂಗನಾಥ್, ಅಜಯ್ ಶಾಸ್ತ್ರಿ, ಸುಚೀಂದ್ರನ್, ಲತಾ, ಜ್ಯೋತಿ, ಪ್ರಭಾ ಮುಂತಾದವರು ಭಾಗವಹಿಸಿದ್ದರು.

Translate »