ಮೈಸೂರು: ಕ್ರಿಸ್ ಮಸ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಡಿ.25ರಂದು ಬೆಳಿಗ್ಗೆ 7.30ರಿಂದ 4 ಗಂಟೆವರೆಗೆ ಮೈಸೂರಿನ ಜಯನಗರ ದಲ್ಲಿರುವ ಪೈ.ಬಸವಯ್ಯ ಸಮುದಾಯ ಭವನದಲ್ಲಿ `ಆರೋಗ್ಯ ಮೈಸೂರು’ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಹೊರತು ಪಡಿಸಿ, ಜನರ ಹಿತ ಕಾಪಾಡುವುದರೊಂ ದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವ ವಿವಿಧ ಸಂಘ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ನೆರವಿನೊಂದಿಗೆ `ಆರೋಗ್ಯ ಮೈಸೂರು’ ಕಾರ್ಯಕ್ರಮ ಏರ್ಪಡಿಸ ಲಾಗುತ್ತಿದ್ದು, ಈ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಮೂತ್ರಪಿಂಡ, ಕ್ಷಯ ರೋಗ, ಕ್ಯಾನ್ಸರ್, ಮಂಡಿ, ಕೀಲು ನೋವು, ಚರ್ಮ ರೋಗ, ಬಾಲ ರೋಗ, ಸ್ತ್ರೀ ರೋಗ, ದಂತ, ಮೈಗ್ರೇನ್, ಅಸ್ತಮಾ, ಅಲರ್ಜಿ, ಹೃದ್ರೋಗ, ವಾತರೋಗ, ಉಸಿರಾಟದ ತೊಂದರೆ, ಪ್ರಿವೆಂಟಿವ್ ಮೆಡಿಸಿನ್ ಸೇರಿ ದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರು ತಪಾಸಣೆ ಮಾಡಿ, ಚಿಕಿತ್ಸೆ ನೀಡಲಿದ್ದಾರೆ ಎಂದರು.
ಆರೋಗ್ಯ ತಪಾಸಣಾ ಕಾರ್ಯಕ್ರಮ ವನ್ನು ಅಂದು ಬೆಳಿಗ್ಗೆ 10ಗಂಟೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯ ವನ್ನು ಅವಧೂತ ದತ್ತಪೀಠದ ಶ್ರೀ ಗಣ ಪತಿ ಸಚ್ಚಿದಾನಂದ ಸ್ವಾಮೀಜಿ ವಹಿಸಲಿ ದ್ದಾರೆ. ಬೆಂಗಳೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣಕ್ಕೆ 22 ಎಕರೆ ಭೂಮಿ ದಾನ ಮಾಡಿ, ಆರ್ಥಿಕ ನೆರವನ್ನು ನೀಡಿರುವ ಕೊಳದ ಮಠದ ಪೀಠಾಧಿಪತಿ ಡಾ.ಶಾಂತ ವೀರ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಐದು ವರ್ಷದ ಕಾರ್ಯಕ್ರಮ: ಆರೋಗ್ಯ ಮೈಸೂರು ಕಾರ್ಯಕ್ರಮ ಮುಂದಿನ 5 ವರ್ಷಗಳ ಕಾಲ ನಡೆಸಲಾಗುತ್ತದೆ. ಮೈಸೂರು ನಗರದ ಎಲ್ಲಾ ವಾರ್ಡ್‍ಗಳಲ್ಲಿ ವಾರಕ್ಕೆ ಒಂದೊಂದು ವಾರ್ಡ್‍ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅಗತ್ಯಬಿದ್ದವರಿಗೆ ಚಿಕಿತ್ಸೆಯನ್ನು ನೀಡಲಾಗು ತ್ತದೆ. ಈ ಕಾರ್ಯಕ್ಕೆ ಕೆ.ಆರ್.ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಕಿದ್ವಾಯ್ ಆಸ್ಪತ್ರೆ, ನೆಫ್ರೋ-ಯುರಾಲಜಿ ಸಂಸ್ಥೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ನಾರಾಯಣ ಹೃದಯಾ ಲಯ, ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯಾ ಧಿಕಾರಿಗಳ ತಂಡ, ಮಹಾವೀರ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಪಾಲ್ಗೊಳ್ಳ ಲ್ಲಿದ್ದಾರೆ. ಇದರೊಂದಿಗೆ ಆಸರೆ ಫೌಂಡೇ ಷನ್, ಜಿಎಸ್‍ಎಸ್ ಫೌಂಡೇಷನ್, ಸೇಫ್ ವೀಲ್ಸ್, ಡಿಆರ್‍ಎಂ ಆಸ್ಪತ್ರೆ, ವೈಷ್ಣವಿ ಸ್ವೀಟ್ಸ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಶ್ರೀ ರಕ್ಷಾ ಸಂಸ್ಥೆ, ಜೀವ ರಕ್ಷಾ ಜನೌಷಧಿ ಸಂಸ್ಥೆಗಳು ನೆರವು ನೀಡುತ್ತಿವೆ ಎಂದರು.
ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳ: ಪ್ರತಿ 4 ತಿಂಗಳಿಗೊಮ್ಮೆ ಬೆಂಗಳೂ ರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದೇನೆ. ಈ ವೇಳೆ ಚಿಕ್ಕ ಚಿಕ್ಕ ಮಕ್ಕಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಬರುತ್ತಿರು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮ ನಿಸಿದಾಗ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗು ತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ ಶಾಲಾ ಮಕ್ಕಳಲ್ಲಿ ರೋಗ ನಿರೋ ಧಕ ಶಕ್ತಿ ಹೆಚ್ಚಿಸುವ ಮಾರ್ಗೋಪಾಯ ಗಳನ್ನು ಸೂಚಿಸಬೇಕಾಗಿದೆ. ಇದರಿಂ ದಾಗಿ ಶಾಲಾ ಮಕ್ಕಳಿಗೆ ವಿಚಾರ ಸಂಕಿ ರಣಗಳು, ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ದಿ ವಾಕ್: ವಾರ್ ಎಗೆನೆಸ್ಟ್ ಕ್ಯಾನ್ಸರ್ (ಡಬ್ಲೂಎಸಿ) ಕಾರ್ಯಕ್ರಮವನ್ನು ಮುಂದಿನ 5 ವರ್ಷಗಳ ಕಾಲ ನಡೆಸ ಲಾಗುತ್ತದೆ. ಕ್ಯಾನ್ಸರ್‍ಗೆ ತುತ್ತಾಗುತ್ತಿರು ವವರ ಸಂಖ್ಯೆ ತಗ್ಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಕ್ಯಾನ್ಸರ್‍ನಿಂದ ಕಳೆದುಕೊಂಡಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲ ವಾರು ಗಣ್ಯರು ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ. ಇದನ್ನು ಮನಗಂಡು ವಾರ್ ಎಗೆನೆಸ್ಟ್ ಕ್ಯಾನ್ಸರ್ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಎಸ್‍ಎಸ್ ಫೌಂಡೇ ಷನ್ ಸಂಸ್ಥೆಯ ಅಧ್ಯಕ್ಷ ಶ್ರೀಹರಿ ಮಾತ ನಾಡಿ, ಈಗಾಗಲೇ ಎಲ್ಲಾ ಶಾಲೆಗಳನ್ನು ಸಂಪರ್ಕಿಸಲಾಗಿದೆ. ವಾರಕ್ಕೆ ಒಂದು ಗಂಟೆ ಅವಧಿಯಲ್ಲಿ ಕ್ಯಾನ್ಸರ್ ಬಾರದಂತೆ ತಡೆ ಗಟ್ಟುವುದಕ್ಕೆ, ರೋಗ ನಿರೋಧಕ ಶಕ್ತಿ ವೃದ್ಧಿ ಮಾಡುವುದಕ್ಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ಶುಭ್ರವಾದ ಗಾಳಿ ಸೇವನೆ ಮಾಡಬೇಕಾ ದರೆ ಮರಗಳನ್ನು ಕಡಿಯಬಾರದು. ಅಲ್ಲದೆ ಹೆಚ್ಚಾಗಿ ಗಿಡಗಳನ್ನು ನೆಡಬೇಕಾ ಗಿದೆ. ಈ ಹಿನ್ನೆಲೆಯಲ್ಲಿ ಗಿಡ ನೆಡುವುದಕ್ಕೆ ಪ್ರೇರಣೆ ನೀಡಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಸೇಫ್ ವೀಲ್ಸ್ ಸಂಸ್ಥೆಯ ಬಿ.ಎಸ್.ಪ್ರಶಾಂತ್, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಇದ್ದರು.