ಜಮೀನು ವಿವಾದ; ಯುವಕನಿಗೆ ಚಾಕುವಿನಿಂದ ಇರಿತ
ಮಂಡ್ಯ

ಜಮೀನು ವಿವಾದ; ಯುವಕನಿಗೆ ಚಾಕುವಿನಿಂದ ಇರಿತ

March 14, 2020

ಮಂಡ್ಯ,ಮಾ.13(ನಾಗಯ್ಯ): ಜಮೀನು ವಿವಾದ ಸಂಬಂಧ ಉಂಟಾದ ಜಗಳದ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕೂಡಲಕುಪ್ಪೆ ಗ್ರಾಮದಲ್ಲಿ ಜರುಗಿದೆ.

ಘಟನೆಯಲ್ಲಿ ಗ್ರಾಮದ ನಾಗೇಗೌಡರ ಪುತ್ರ ಗುರುಪ್ರಸಾದ್(28) ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೀಗೌಡರ ಮಗ ಮಾಕೇಗೌಡ(45) ಆರೋಪಿ ಯಾಗಿದ್ದು, ಆತನನ್ನು ಪೆÇಲೀಸರು ಬಂಧಿಸಿದ್ದಾರೆ. ಪತ್ನಿ ಕುಮಾರಿ ಹಾಗೂ ಪುತ್ರ ಶಿವಕುಮಾರ್ ನಾಪತ್ತೆಯಾಗಿದ್ದಾರೆ.

ಜಗಳದ ವೇಳೆ ಮಾಕೇಗೌಡ ಗುರುಪ್ರಸಾದ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಗ್ರಾಮಸ್ಥರು ತಡೆದು ಕೃಷ್ಣರಾಜಪೇಟೆ ಗ್ರಾಮಾಂತರ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಬಂದು ಪೆÇಲೀಸರು ಮಾಹಿತಿ ಪಡೆಯುವಾಗ ಮಾಕೇಗೌಡನ ಪತ್ನಿ ಹಾಗೂ ಪುತ್ರ ಶಿವಕುಮಾರ್ ಮನೆಗೆ ಹೋಗಿ ಬರುವುದಾಗಿ ಹಿಂಬಾಗಿಲಿನಿಂದ ತಪ್ಪಿಸಿಕೊಂಡಿದ್ದಾರೆ.
ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‍ಪೆಕ್ಟರ್ ಟಿ.ಲಕ್ಷ್ಮಣ್ ತನಿಖೆ ಕೈಗೊಂಡಿದ್ದಾರೆ.

Translate »