ಕೆ.ಆರ್.ಎಸ್ ಬೃಂದಾವನದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ
ಮಂಡ್ಯ

ಕೆ.ಆರ್.ಎಸ್ ಬೃಂದಾವನದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ

March 14, 2020

ಶ್ರೀರಂಗಪಟ್ಟಣ,ಮಾ.13(ವಿನಯ್ ಕಾರೇಕುರ)-ಕೆ.ಆರ್.ಸಾಗರದ ಬೃಂದಾವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾವೇರಿ ನೀರಾವರಿ ನಿಗಮದ ವತಿ ಯಿಂದ ಪ್ರವಾಸಿಗರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಲಕ್ಷಣಗಳ ಬಗ್ಗೆ ಅರಿವಿರಲಿ, ನೆಗಡಿ, ಸೀನು,ಕೆಮ್ಮು ಇರುವವ ರಿಂದ ಎರಡು ಮೀಟರ್ ದೂರವಿರಿ, ಆಗಾಗ್ಗೆ ಕೈ ತೊಳೆ ಯಿರಿ, ಸ್ವಚ್ಛತೆಗೆ ಗಮನ ಕೊಡಿ , ವಿದೇಶ ಪ್ರವಾಸ ಮುಂದೂಡಿ, ವಿದೇಶ ಪ್ರವಾಸದಿಂದ ಹಿಂದಿರುಗಿರುವ ವರ ಬಗ್ಗೆ ನಿಗಾ ಇಡಿ, ಅನುಮಾನವಿದ್ದಲ್ಲಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಸಂಪರ್ಕಿಸಿ ಮುಂತಾದ ಘೋಷಣೆ ಗಳ ಭಿತ್ತಿ ಪತ್ರ ಪ್ರದರ್ಶಿಸಿ, ಟಿಕೇಟ್ ಕೌಂಟರ್ ಬಳಿ ಯಲ್ಲಿ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ಕರಪತ್ರ ಮುದ್ರಿಸಿ ಪ್ರತಿ ದಿನ ಸಂಜೆ ಪ್ರವಾಸಿಗರಿಗೆ ವಿತರಿಸಲಾಗುವುದು ಹಾಗೂ ಮೈಕ್ ಮೂಲಕ ಕೊರೊನಾಗೆ ಸಂಬಂಧಿಸಿದ ಜಿಂಗಲ್ಸ್, ಜಾಗೃತಿ ಗೀತೆ ಪ್ರಸಾರ ಮಾಡಲು ಕ್ರಮ ವಹಿಸಲಾಗಿದೆ ಎಂದು ನಿಗಮದ ಎಇಇ ಸಿ.ವಾಸುದೇವ ತಿಳಿಸಿದರು.

ಪ್ರವಾಸಿಗರಲ್ಲಿನ ಭಯ ಹೋಗಲಾಡಿಸಲು ನಿಗಮದ ಜೊತೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯ ಕರ್ತರು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಅಲ್ಲಲ್ಲಿ ಕೊರೊನಾ ಜಾಗೃತಿಯ ಭಿತ್ತಿ ಪತ್ರ ಪ್ರದರ್ಶಿಸಲಾಗಿದೆ ಎಂದು ಕೆ.ಆರ್.ಎಸ್ ವೈದ್ಯಾಧಿಕಾರಿ ಡಾ.ಸೌಮ್ಯ ಸಿ.ಎಸ್ ತಿಳಿಸಿದರು.

ನಿಗಮದ ಕಾರ್ಯಪಾಲಕ ಅಭಿಯಂತರರಾದ ರಾಜು ಎಂ.ಬಿ, ಎಇಇ ತಮ್ಮಣ್ಣೇಗೌಡ,ಗ್ರಾಮ ಪಂಚಾಯ್ತಿ ಸದಸ್ಯ ವಿಜಯಕುಮಾರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವಿಭಾಗದ ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ,ಮೇಲ್ವಿಚಾರಕರಾದ ಜಿ.ಮೋಹನ್, ಸಲೀಂಪಾಷ, ಸರ್ಕಾರಿ ನೌಕರರ ಯೋಜನಾ ಶಾಖೆಯ ಅಧ್ಯಕ್ಷ ಶಿವಪ್ಪ, ಶುಶ್ರೂಶಕಿ ಮಂಜಮ್ಮ, ಆರೋಗ್ಯ ಸಹಾ ಯಕಿಯರಾದ ಗೀತ,ಜಯಶೀಲ,ಸೌಮ್ಯ ಮತ್ತು ಆಶಾ ಕಾರ್ಯಕರ್ತರು ಹಾಗೂ ಪೆÇೀಲೀಸ್ ಅಧಿಕಾರಿಗಳು, ನಿಗಮದ ಸಿಬ್ಬಂದಿ ಹಾಜರಿದ್ದರು.

Translate »