ಮಂಡ್ಯ,ಮಾ.13(ನಾಗಯ್ಯ)-ಮೈಷು ಗರ್ ಖಾಸಗೀಕರಣವನ್ನು ವಿರೋಧಿಸಿ ಡಾ.ರವೀಂದ್ರ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಗೆ ಇಂದು ಸಾತನೂರು ಗ್ರಾಮಸ್ತರು ತಡೆಯೊಡ್ಡಿ ತರಾಟೆಗೆ ತೆಗೆದು ಕೊಂಡ ಘಟನೆ ಜರುಗಿತು.
ಪಾದಯಾತ್ರೆ ಆರಂಭಗೊಂಡ ನಾಲ್ಕನೇ ದಿನವಾದ ಇಂದು ಕೆರಗೋಡು ಮಾರ್ಗ ವಾಗಿ ಚಿಕ್ಕಮಂಡ್ಯಕ್ಕೆ ಆಗಮಿಸಿತು.ಅಲ್ಲಿ ಪ್ರತಿ ರೈತರು ಹಾಗೂ ಸಾರ್ವಜನಿಕರಿಂದ ತಲಾ 1 ರು ನಂತೆ ವಂತಿಗೆ ಸಂಗ್ರಹಿಸಿ ಬಳಿಕ ಸಾತನೂರಿಗೆ ಯಾತ್ರೆ ಬರುತ್ತಿದ್ದಂತೆ ಗ್ರಾಮಸ್ಥರು ತಡೆಯೊಡ್ಡಿದರು.
ಈ ಸಂದರ್ಭದಲ್ಲಿ ಡಾ.ರವೀಂದ್ರ ಮತ್ತು ಇತರೆ ಸಂಘಟನೆಗಳ ಪದಾಧಿ ಕಾರಿಗಳು ಖಾಸಗೀಕರಣದ ಬಗ್ಗೆ ಮನವ ರಿಕೆ ಮಾಡಿಕೊಡಲು ಮುಂದಾದರೂ ಸಹ ಅದನ್ನು ಒಪ್ಪದ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇದೇ ವೇಳೆ ಮಾತನಾಡಿದ ಗ್ರಾಮದ ಮುಖಂಡ ದೇವರಾಜು,ಸರ್ಕಾರ ಮೈಷು ಗರ್ ಕಾರ್ಖಾನೆಯನ್ನು ಖಾಸಗೀ ಕರಣ ಮಾಡಲು ಹೊರಟಿರುವ ನಿರ್ಧಾರ ಸೂಕ್ತವಾದುದು,ಆದರೆ ಡಾ.ರವೀಂದ್ರ ರವರು ಸಾರ್ವಜನಿಕರಿಂದ ತಲಾ ಒಂದು ರೂ ವಂತಿಗೆ ಸಂಗ್ರಹಿಸಿ ಕಾರ್ಖಾನೆ ಉಳಿಸುತ್ತೇನೆಂದು ಹೊರಟಿರುವ ಕ್ರಮ ಹಾಸ್ಯಾಸ್ಪದ ಎಂದು ಟೀಕಿಸಿದರು.
ಮೈಷುಗರ್ ವ್ಯಾಪ್ತಿಗೆ ಬರುವ ಗ್ರಾಮ ಗಳಲ್ಲಿರುವ ಜನ ಸಂಖ್ಯೆ 20 ಲಕ್ಷವಿದೆ,ಈ 20 ಲಕ್ಷದಿಂದ ಕಾರ್ಖಾನೆ ಆರಂಭಿಸಲು ಸಾಧ್ಯವೇ,ಈ ಹಿಂದೆ, ಮುಖ್ಯ ಮಂತ್ರಿ ಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ 100 ಕೋಟಿ ಅನುದಾನ ನೀಡಲು ಮುಂದಾ ಗಿದ್ದರು, ಆದರೂ ಅದು ಯಶಸ್ವಿ ಯಾಗಲಿಲ್ಲ, ಆದರೆ ರವೀಂದ್ರರವರ ಪಾದಯಾತ್ರೆ ರೈತರನ್ನು ದಿಕ್ಕುತಪ್ಪಿಸುವ ಯತ್ನ ಹಾಗೂ ಇದೊಂದು ರಾಜಕೀಯ ನಾಟಕವೆಂದು ಆರೋಪಿಸಿದರು.
ಜಿಲ್ಲೆಯಲ್ಲಿ ಖಾಸಗಿ ಕಾರ್ಖಾನೆಗಳಿಲ್ಲ ದಿದ್ದರೆ, ರೈತರು ಯಾವಾಗಲೋ ಮುಳುಗಿ ಹೋಗುತ್ತಿದ್ದರು, ಖಾಸಗಿ ಯವರು ರೈತರಿಗೆ ಕಾಲ ಕಾಲಕ್ಕೆ ಹಣ ಬಟವಾಡೆ ಮಾಡುತ್ತಾ ರೈತರನ್ನು ಉಳಿಸಿ ದ್ದಾರೆ.ಸರ್ಕಾರ ಹಣ ಬಟವಾಡೆ, ಕಬ್ಬಿನ ದರ ನಿಗಧಿ ಸೇರಿದಂತೆ ಕೆಲವು ಅಂಶ ಗಳನ್ನು ತನ್ನ ಅಧಿನದಲ್ಲಿಯೇ ಇಟ್ಟು ಕೊಂಡು ಶರತ್ತುಬದ್ದವಾಗಿ 20 ವರ್ಷಗಳ ಕಾಲ ಮಾತ್ರ ಖಾಸಗಿಯವರಿಗೆ ನೀಡ ಬೇಕೆಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಾತನೂರಿನ ಶಂಕರೇ ಗೌಡ, ವಿಶ್ವ,ರಾಜು,ನಾರಾಯಣ್ ಅವರ ನ್ನೊಳಗೊಂಡಂತೆ ಹೊನಗಾನಹಳ್ಳಿ, ಕೊಮ್ಮೇರಹಳ್ಳಿ ಗ್ರಾಮಸ್ತರು ಹಾಜರಿದ್ದರು.
ಒಟ್ಟಾರೆ ಡಾ.ರವೀಂದ್ರ ರವರ ನೇತೃ ತ್ವದ ಪಾದಯಾತ್ರೆಗೆ ಬಾರಿ ಅಡ್ಡಿ ಯಾದ್ದರಿಂದ ಸಾತನೂರು ಗ್ರಾಮವನ್ನು ಪ್ರವೇಶಿಸಲಾಗದೆ ಮುಂದಿನ ಗ್ರಾಮದತ್ತ ತೆರಳಿತು. ಈ ವೇಳೆ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ,ಎಂ.ಬಿ. ನಾಗಣ್ಣಗೌಡ ಮತ್ತಿತರರು ಇದ್ದರು.
ಮೈಷುಗರ್ ಕಾರ್ಖಾನೆ ಖಾಸಗಿ ಸಹಭಾಗಿತ್ವದಲ್ಲಿಯೇ ನಡೆಯಲಿ
ಮಂಡ್ಯ,ಮಾ.13(ನಾಗಯ್ಯ): ಮೈಷು ಗರ್ ಕಾರ್ಖಾನೆಯನ್ನು ಖಾಸಗಿಗೆ ವಹಿಸುವ ಕುರಿತು ಸರ್ಕಾರ ತೆಗೆದು ಕೊಂಡಿರುವ ನಿರ್ಧಾರವನ್ನು ವಿವಿಧ ಗ್ರಾಮ ಗಳ ಮುಖಂಡರು ಬೆಂಬಲಿಸಿದರು.
ನಗರದಲ್ಲಿಂದು ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ, ಚನ್ನಪ್ಪನದೊಡ್ಡಿ, ತಾಪಂ ಮಾಜಿ ಸದಸ್ಯ ಗುರುಸಿದ್ದಯ್ಯ, ಹನಕೆರೆ ಹೆಚ್.ಸಿ.ಜಯರಾಮ್ ಮತ್ತಿ ತರರು, ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಮೂಲಕ ರೈತರ ಕಬ್ಬು ಅರೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ 5 ವರ್ಷಗಳಿಂದ ಕಾರ್ಖಾನೆ ಆರಂಭವಾಗದೆ ರೈತರು ಸಂಕಷ್ಟ ಸಿಲುಕಿ ದ್ದಾರೆ, ಇದುವರೆಗೂ ಸರ್ಕಾರದ ವತಿ ಯಿಂದ ನಡೆದ ಕಾರ್ಖಾನೆಯ ಕಾರ್ಯವೈಖರಿ ನೋಡಿ ಸಾಕಾಗಿದೆ, ಇದುವರೆಗಿನ ಆಡಳಿತ ಮಂಡಳಿಯ ನಡೆಯಿಂದಾಗಿ ಮೈಷುಗರ್ ಮುಚ್ಚುವ ಸ್ಥಿತಿಗೆ ಬಂದು ನಿಂತಿದೆ,ಮುಂದಿನ ದಿನ ಗಳಲ್ಲಾದರೂ ರೈತರು, ಷೇರುದಾರರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಖಾಸಗಿಯವರಿಗೆ ವಹಿಸುವಾಗ ರೈತರಿಗೆ ಹಾಗೂ ಕಾರ್ಮಿಕರಿಗೆ ಸಕಾಲ ದಲ್ಲಿ ಹಣ ಪಾವತಿಯಾಗಬೇಕು. ಗುತ್ತಿಗೆ ಆಧಾರದ ಮೇರೆಗೆ ಕಾರ್ಖಾನೆಯನ್ನು ಪಡೆದವರು ಸಕ್ಕರೆ ಘಟಕದ ಜೊತೆಗೆ ಉಪ ಉತ್ಪನ್ನಗಳಾದ ಡಿಸ್ಟಿಲರಿ ಘಟಕ, ಸಹ ವಿದ್ಯುತ್ ಘಟಕಗಳನ್ನು ಚಾಲನೆ ನೀಡಬೇಕು. ಗುತ್ತಿಗೆ ಅವಧಿಯ ನಂತರ ಕಾರ್ಖಾನೆಗೆ ಬಿಟ್ಟುಕೊಡುವ ಷರತ್ತನ್ನು ವಿಧಿಸಬೇಕು ಎಂದು ಹೇಳಿದರು.
ಕಾರ್ಖಾನೆಯ ಚರ-ಸ್ಥಿರ ಆಸ್ತಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ವ್ಯವಸ್ಥೆ ಮಾಡಬೇಕು. ಜೂನ್ ಮಾಹೆಯಲ್ಲಿ ಕಬ್ಬು ಅರೆಯಲು ಪ್ರಾರಂಭಿಸಬೇಕು. ಕಾರ್ಖಾ ನೆಯ ಆಸ್ತಿಯನ್ನು ಉಳಿಸಿಕೊಂಡು ಕಾರ್ಖಾ ನೆಯ ಸ್ಥಳವನ್ನು ಮಾತ್ರ ಗುತ್ತಿಗೆ ನೀಡ ಬೇಕು ಎಂದು ಅವರು ಒತ್ತಾಯಿಸಿದರು.
428 ಕೋಟಿ ಎಲ್ಲಿಗೋಯ್ತು?; ಇಲ್ಲಿಯವರೆಗೆ ಕಾರ್ಖಾನೆಗೆ ಸುಮಾರು 428 ಕೋಟಿ ರೂ. ಬಿಡುಗಡೆ ಮಾಡ ಲಾಗಿದೆ. ಈ ಹಣ ಎಲ್ಲಿಗೆ ಹೋಗಿದೆ ಎಂಬುದು ನಿಗೂಢವಾಗಿದೆ. ಇದರ ಖರ್ಚು ಹಾಗೂ ವೆಚ್ಚದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಡಾ.ರವೀಂದ್ರ ಸೇರಿದಂತೆ ಇತರರು ಕೆಲವು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಜಾಥಾ ಅಂತಾ ನಡೆಸುತ್ತಿದ್ದಾರೆ, ಸರ್ಕಾರವೇ ಕಾರ್ಖಾನೆಯನ್ನು ನಡೆಸುವಂತೆ ಒತ್ತಾ ಯಿಸುತ್ತಿದ್ದಾರೆ, ಇದಕ್ಕೆ ನಮ್ಮದೇನೂ ತಕರಾರಿಲ್ಲ,ಆದರೆ ಸರ್ಕಾರವು ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ನಿರ್ಧಾರ ವನ್ನು ಬೆಂಬಲಿಸು ವುದು ತಮ್ಮ ಅಭಿಪ್ರಾಯವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹುಚ್ಚಲಗೆರೆಯ ತಾಲೂಕು ಪಂಚಾಯಿತಿ ಸದಸ್ಯ ಶಿವಬೋರಯ್ಯ, ಮಾಜಿ ಸದಸ್ಯ ಪೂಜಾರಿ ಪಾಪಣ್ಣ, ಬಿ.ಗೌಡ ಗೆರೆಯ ವಿ.ತಮ್ಮಣ್ಣ, ಸಾತನೂರು ಶಿವಣ್ಣ, ಕೃಷ್ಣೇಗೌಡ ಇದ್ದರು.