ಬೆಂಗಳೂರು,ಫೆ.20-ಭೂ ಕಬಳಿಕೆ ಆರೋಪದಡಿ ನ್ಯಾಯಾ ಲಯದ ಆದೇಶದ ಮೇರೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹಾಗೂ ಸಹೋದರರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಜಮೀರ್ ಹಾಗೂ ಸಹೋದರರ ವಿರುದ್ಧ ಸಂಪಿಗೆಹಳ್ಳಿ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ವರ್ಷ ಶಾಹೀತಾ ನಾಸೀನ್, ತಸ್ನೀಮ್ ಫಾತಿಮಾ ರಿಂದ ಕೋರ್ಟ್‍ಗೆ ಖಾಸಗಿ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಕೋರ್ಟ್ ಆದೇಶದಂತೆ ಎಫ್‍ಐಆರ್ ದಾಖಲಾಗಿದೆ. ಜಮೀರ್ ಕುಟುಂಬದ ವಿರುದ್ಧ ಆರೋಪಿಸಿ ಸೈಟ್ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಚೊಕ್ಕನಹಳ್ಳಿ ಬಡಾ ವಣೆಯ ಸೈಟ್ ನಂ.5, 6ರ ವ್ಯಾಜ್ಯ ಸಂಬಂಧ ಜಮೀರ್ ಕುಟುಂಬಸ್ಥರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, 2015ರಲ್ಲಿ ಶಾಹಿತಾ ನಾಸೀನ್, ತಸೀಮಾ ಫಾತೀಮಾ ಅವರು ಜಮೀರ್ ಕುಟುಂಬಸ್ಥರಿಂದ ಸೈಟ್ ಖರೀದಿಸಿದ್ದರಂತೆ. ಶಾಸಕ ಜಮೀರ್ ಸಹೋದರ ಹಾಗೂ ಕುಟುಂ ಬಸ್ಥರೇ ಮಾರಾಟ ಮಾಡಿದ್ದರು. 2018 ರಲ್ಲಿ ಜಮೀರ್ ಕುಟುಂಬ ಸ್ಥರಿಂದ ಮತ್ತೊಂದು ಸೈಟ್ ಖರೀದಿಸಿದ್ದಾಗಿ ಶಾಹೀತಾ ನಾಸೀನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಜೆಸಿನಗರ ನಿವಾಸಿ ಗಳಾಗಿದ್ದ ಶಾಹೀತಾ ನಾಸೀನ್ ಸೈಟ್‍ಗಳ ಕಡೆ ಗಮನ ಹರಿಸಿರಲಿಲ್ಲ. ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್ ಕುಟುಂಬದವರೇ ಸೈಟ್‍ಗಳ ಕಬಳಿಕೆಗೆ ಯತ್ನಿಸಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಹೀತಾ ನಾಸೀನ್ ಗಂಭೀರ ಆರೋಪ ಮಾಡಿದ್ದರು.
ಖಾಸಗಿ ದೂರು ವಿಚಾರಣೆ ನಡೆಸಿದ ಕೋರ್ಟ್, ಈ ಸಂಬಂಧ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ. ಕಬಳಿಕೆ ಮಾಡಿರುವ ಸೈಟ್ ಸಂಬಂಧ ಯಥಾಸ್ಥಿತಿ ಕಾಪಾಡಲು ಕೋರ್ಟ್ ಆದೇಶಿಸಿದೆ. ಆದರೆ ಕೋರ್ಟ್‍ನಿಂದ ತಡೆಯಾಜ್ಞೆ ಬಂದರೂ ಜಮೀರ್ ಕುಟುಂ ಬಸ್ಥರು ಸೈಟ್ ಬಿಟ್ಟುಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆಹಾಕುತ್ತಿದ್ದಾರೆ.