ಮೈಸೂರು, ಅ.22(ಆರ್‍ಕೆಬಿ)- ಕವಿ ಗಳನ್ನು ಜಗತ್ತಿನ ಅನಭಿಷಕ್ತ ಶಾಸಕರು ಎನ್ನ ಲಾಗುತ್ತದೆ. ಹಾಗಾಗಿ ಕವಿಗಳು ತಮ್ಮ ಕವಿತೆ ಗಳ ಮೂಲಕ ಹೇಳಿದ್ದನ್ನು ಸರ್ಕಾರ ಕಿವಿ ಗೊಟ್ಟು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸು ವಂತಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕವಿ ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು.
ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಕಸಾಪ ಜಿಲ್ಲಾ ಭವನದಲ್ಲಿ ಪರಿ ಷತ್ ಜಿಲ್ಲಾ ಘಟಕ ಆಯೋಜಿಸಿದ್ದ 2 ದಿನಗಳ ಮೈಸೂರು ದಸರಾ ಕವಿಗೋಷ್ಠಿಗೆ ಗುರುವಾರ ಚಾಲನೆ ನೀಡಿದ ಅವರು, ಪಂಪನಿಂದ ಕುವೆಂಪುವರೆಗೆ ಅತಿ ಹೆಚ್ಚು ಕಾವ್ಯವೇ ತುಂಬಿದೆ. ಕನ್ನಡದಲ್ಲಿ ಕಾವ್ಯ ಪರಂಪರೆ ಬಹು ದೊಡ್ಡದು. ಕವಿ ಮತ್ತು ಕವಿತೆಯ ಕುಟುಂಬಕ್ಕೆ ಸೇರಿದವರಿಗೆ ತಮ್ಮದೇ ಆದ ಸಮಸ್ಯೆಗಳಿರುತ್ತವೆ. ಸರ್ಕಾರಿ ವ್ಯವಸ್ಥೆಯಡಿ ಸರ್ಕಾರ ಜನರಿಗೆ ಏನನ್ನಾ ದರೂ ಕೊಡಬಹುದು. ಆದರೆ ಜನರಿಗೆ ಮಾನಸಿಕ ಸ್ಥೈರ್ಯ, ಸ್ಥಿರತೆ ಕೊಡುವುದು ಬರಹಗಾರರು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಅಧ್ಯ ಕ್ಷತೆ ವಹಿಸಿದ್ದರು. ಕೇಂದ್ರ ಉಗ್ರಾಣ ನಿಗಮದ ನಿರ್ದೇಶಕ ಜಿ.ರವಿ, ಕವಿ ಜಯಪ್ಪ ಹೊನ್ನಾಳಿ, ಪಾಲಿಕೆ ಸದಸ್ಯ ಎ.ಯು.ಸುಬ್ಬಯ್ಯ, ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕಸಾಪ ಪದಾಧಿಕಾರಿ ಮೂಗೂರು ನಂಜುಂಡ ಸ್ವಾಮಿ, ರಾಜಶೇಖರ ಕದಂಬ, ಕೆ.ಎಸ್. ಶಿವರಾಂ, ಕೆ.ಎಸ್.ನಾಗರಾಜು ಇನ್ನಿತರರಿದ್ದರು.