ಪತ್ರ ಬರೆಯುವ ಸ್ಪರ್ಧೆ
ಮೈಸೂರು

ಪತ್ರ ಬರೆಯುವ ಸ್ಪರ್ಧೆ

June 28, 2018

ಮೈಸೂರು: ಅಂಚೆ ಇಲಾಖೆ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. ಪತ್ರ ಬರೆಯುವ ಸ್ಪರ್ಧೆಗೆ ವಿಷಯ Letter to my motherland (ನನ್ನ ತಾಯಿನಾಡಿಗೆ ಪತ್ರ) ಯಾಗಿರುತ್ತದೆ. ಪತ್ರವನ್ನು ಇಂಗ್ಲಿಷ್/ಹಿಂದಿ/ ಸ್ಥಳೀಯ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಯು 18 ವರ್ಷದೊಳಗಿನವರಿಗೆ ಹಾಗೂ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಎರಡು ವಿಭಾಗದಲ್ಲಿ ನಡೆಯಲಿದೆ. ಇನ್ಲಂಡ್ ಲೆಟರ್ ಕಾರ್ಡ್ ವಿಭಾಗದಲ್ಲಿ 500 ಪದ ಹಾಗೂ ಎನ್ವಲಪ್ ವಿಭಾಗದಲ್ಲಿ 1000 ಪದಗಳ ಮಿತಿಯಲ್ಲಿರಬೇಕು. ಪತ್ರವನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ಸರ್ಕಲ್, ಪ್ಯಾಲೆಸ್ ರಸ್ತೆ, ಬೆಂಗಳೂರು-560001. ಪತ್ರದಲ್ಲಿ ರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆ ಎಂದು ನಮೂದಿಸಿ ಸ್ಥಳೀಯ ಅಂಚೆ ಕಚೇರಿಗೆ ಸೆಪ್ಟೆಂಬರ್ 30 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ www.indiapost.gov.in ಸಂಪರ್ಕಿಸುವುದು.

Translate »