ನೂತನ ಪೊಲೀಸ್ ವಸತಿಗೃಹಗಳ ಲೋಕಾರ್ಪಣೆ
ಚಾಮರಾಜನಗರ

ನೂತನ ಪೊಲೀಸ್ ವಸತಿಗೃಹಗಳ ಲೋಕಾರ್ಪಣೆ

August 28, 2021

ಚಾಮರಾಜನಗರ, ಆ.27-ಚಾಮರಾಜನಗರ ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸರಿಗಾಗಿ ನೂತನವಾಗಿ ನಿರ್ಮಿಸಿರುವ 52 ವಸತಿಗೃಹಗಳನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಲೋಕಾರ್ಪಣೆಗೊಳಿಸಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿಎಆರ್) ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಸತಿಗೃಹಗಳನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ತರ ಹೊಣೆಯನ್ನು ಪೊಲೀಸರು ಸಮರ್ಥ ವಾಗಿ ನಿರ್ವಹಿಸುತ್ತಿದ್ದಾರೆ. ಜಟಿಲ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖ್ಯವಾ ದದ್ದು. ರಾತ್ರಿ, ಹಗಲು ಎನ್ನದೆ ಸಮಾಜದ ನೆಮ್ಮದಿ ಶಾಂತಿಗಾಗಿ ಪೊಲೀಸರು ನಿರ್ವಹಿಸುತ್ತಿರುವ ಕರ್ತವ್ಯ ಶ್ಲಾಘನೀಯ ಎಂದರು.

ರಾಜ್ಯ ಸರ್ಕಾರ ಪೊಲೀಸರಿಗೆ ಸೌಲಭ್ಯ ಒದಗಿಸು ವಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೈಟೆಕ್ ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ಅನುದಾನ ನೀಡುತ್ತಿದೆ. ಪೊಲೀಸ್ ಸಿಬ್ಬಂದಿ ನೆಮ್ಮದಿಯಿಂದ ಇರಲು ಉತ್ತಮ ವಸತಿಗೃಹಗಳ ನಿರ್ಮಾಣ ಮಾಡು ತ್ತಿದೆ. ಇದರಿಂದ ಪೊಲೀಸ್‍ರಿಗೆ ಅನುಕೂಲವಾಗಲಿದೆ ಎಂದು ಸಚಿವ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಪುಟ್ಟ ರಂಗಶೆಟ್ಟಿ, ಪೊಲೀಸÀರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸರ್ಕಾರಕ್ಕೆ ಆದ್ಯತೆಯಾಗಿದೆ. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಕುಡಿಯುವ ನೀರು, ಒಳಚರಂಡಿಯಂತಹ ಕಾಮಗಾರಿಗಳು ಇನ್ನು ಪೂರ್ಣ ವಾಗಿಲ್ಲ. ನೂತನ ಸುಸಜ್ಜಿತ ಬಸ್ ನಿಲ್ದಾಣ ಜಿಲ್ಲಾ ಕೇಂದ್ರ ದಲ್ಲಿ ಆಗಬೇಕಿದೆ. ಈ ಎಲ್ಲಾ ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ಕೈಗೊಳ್ಳಬೇಕಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಎಸ್ಪಿ ದಿವ್ಯ ಸಾರಾ ಥಾಮಸ್ ಮಾತಾನಾಡಿ, 9 ಕೋಟಿ 70 ಲಕ್ಷದ 10 ಸಾವಿರ ರೂ. ವೆಚ್ಚದಲ್ಲಿ ಒಟ್ಟು 52 ವಸತಿಗೃಹಗಳನ್ನು ಪೊಲೀಸ್ ಸಿಬ್ಬಂದಿಗೆ ನಿರ್ಮಿಸಲಾ ಗಿದೆ. ಇದರಲ್ಲಿ ನಗರದ ಡಿಎಆರ್ ಆವರಣದಲ್ಲಿ ಕಾನ್ಸ್ ಟೇಬಲ್‍ಗಳಿಗೆ 24, ಪೊಲೀಸ್ ಅಧಿಕಾರಿಗಳಿಗೆ 2 ವಸತಿ ಗೃಹಗಳು, ಸಂತೆಮರಹಳ್ಳಿಯಲ್ಲಿ ಕಾನ್ಸ್‍ಟೇಬಲ್‍ಗಳಿಗೆ 12 ವಸತಿಗೃಹಗಳು ಹಾಗೂ ಯಳಂದೂರು ಪಟ್ಟಣದಲ್ಲಿ ಕಾನ್ಸ್‍ಟೇಬಲ್‍ಗಳಿಗೆ 12, ಪೊಲೀಸ್ ಅಧಿಕಾರಿಗಳಿಗೆ 2 ವಸತಿಗೃಹಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಪೊಲೀಸ್ ವಸತಿ ಗೃಹಗಳ ಸಮುಚ್ಛಯವಾದ ಶರಾವತಿ ವಿಭಾಗವನ್ನು ಶಾಸಕ ಎನ್.ಮಹೇಶ್ ಉದ್ಘಾಟಿಸಿ ದರು. ಅಧಿಕಾರಿಗಳ ವಸತಿಗೃಹವನ್ನು ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಬರಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಸಿ.ಎಂ. ಆಶಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತ ಮೂರ್ತಿ ಕುಲಗಾಣ, ಯಳಂದೂರು ಪಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಮಹೇಶ್, ಸಂತೆಮರಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಪಿ.ಶಂಕರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕೆ.ಎಸ್.ಸುಂದರ್‍ರಾಜ್ ಮತ್ತಿತರÀರಿದ್ದರು.

Translate »