ಸದ್ಯಕ್ಕೆ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬೇಡ
ಮೈಸೂರು

ಸದ್ಯಕ್ಕೆ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬೇಡ

August 27, 2021

ಬೆಂಗಳೂರು, ಆ.೨೬(ಕೆಎಂಶಿ)-ಸದ್ಯಕ್ಕೆ ಮಂತ್ರಿಮಂಡಲ ವಿಸ್ತರಣೆಯೂ ಬೇಡ, ಹಂಚಿಕೆಯಾಗಿರುವ ಖಾತೆಗಳಲ್ಲೂ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರ ಸೂಚನೆ ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿರುವ ಮುಖ್ಯಮಂತ್ರಿಯವರು ಸಂಪುಟ ರಚನೆಯ ನಂತರ ಉಂಟಾದ ಗೊಂದಲಗಳಿಗೆ ವರಿಷ್ಠರಿಂದಲೇ ಪರಿಹಾರ ಕಂಡುಕೊಳ್ಳಲು ನಡೆಸಿದ ಯತ್ನ ಸಫಲವಾಗಿಲ್ಲ.

ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯಲ್ಲಿ ಆಗಿರುವ ಗೊಂದಲ ನಿವಾರಿಸಿಕೊಳ್ಳುವ ಉದ್ದೇಶದಿಂದ ನಿನ್ನೆ ರಾತ್ರಿ ಗೃಹ ಸಚಿವರನ್ನು ಭೇಟಿ ಮಾಡಿದ ಸಂದರ್ಭ ದಲ್ಲಿ ಮುಖ್ಯಮಂತ್ರಿಯವರಿಗೆ ಈ ಆದೇಶ ಸಿಕ್ಕಿದೆ.

ನಮ್ಮದು ಪ್ರಾದೇಶಿಕ ಪಕ್ಷವಲ್ಲ. ಒತ್ತಡಗಳಿಗೆ ಮಣ ಯುತ್ತಾ ಹೋದರೆ, ಅದಕ್ಕೆ ಕೊನೆಯೇ ಇರುವುದಿಲ್ಲ. ಇರುವ ಅವಕಾಶವನ್ನು ಬಳಸಿಕೊಂಡು, ಉತ್ತಮ ಕೆಲಸ ಮಾಡಿ, ತಮ್ಮ ಪ್ರತಿಭೆಯನ್ನು ತೋರಿಸಬೇಕು. ಅದನ್ನು ಬಿಟ್ಟು ಇಂತಹುದ್ದೇ ಇಲಾಖೆ ಬೇಕೆನ್ನುವುದಾದರೂ ಏತಕ್ಕೆ? ಅವರ ಉದ್ದೇಶವೇನು? ಅಂತಹವರನ್ನು ಮಂತ್ರಿ ಮಾಡಿರುವುದಾದರೂ ಏತಕ್ಕೆ? ಮೊದಲು ಕೊಟ್ಟ ಕೆಲಸ ಮಾಡಲಿ. ಅದು ಸಾಧ್ಯವಾಗಲಿಲ್ಲವೆಂದರೆ, ಅಧಿಕಾರ ತ್ಯಜಿಸಿ ಹೋಗಲಿ. ಒತ್ತಡ ತಂತ್ರ ಅನುಸರಿಸುವವರಿಗೆ ಮಣೆ ಹಾಕಬೇಡಿ. ಬಿಜೆಪಿ ಇದಕ್ಕೆ ಎಂದೂ ಅವಕಾಶ ನೀಡುವುದಿಲ್ಲ. ನಿಮಗೆ ಎಲ್ಲಿಯಾದರೂ, ಕೆಲವರ ಖಾತೆ ಬದಲಾವಣೆ ಮಾಡಿ, ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕೆನ್ನುವುದಾದರೆ ನೀವು ಮಾಡಿಕೊಳ್ಳಿ. ಯಾರೋ ಬೆದರಿಕೆ ಹಾಕಿದರು ಎಂಬ ಕಾರಣಕ್ಕೆ ಮಣಯುತ್ತಾ ಕೂರಬೇಡಿ. ಹಾಗೆ ಮಾಡಿ ದರೆ ನಿಮ್ಮ ಜವಾಬ್ದಾರಿಗೆ ಅರ್ಥ ಇರುವುದಿಲ್ಲ. ಪಕ್ಷ ಎಲ್ಲ ಕೋನಗಳಿಂದಲೂ ಅಳೆದು ತೂಗಿ ನಿಮಗೆ ಮಂತ್ರಿಮಂಡಲ ರಚನೆಗೆ ಅವಕಾಶ ಕೊಟ್ಟಿದೆ.

ಇದನ್ನು ಪ್ರಶ್ನಿಸುವವರಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಇಲಾಖೆ ರಚನೆ ಮಾಡಿರುವು ದಾದರೂ ಏತಕ್ಕೆ. ಆ ಇಲಾಖೆಗಳಿಗೆ ಬೆಲೆ ಇಲ್ಲವೇ ಎಂದು ಅಮಿತ್ ಷಾ, ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಆಡಳಿತ ಮತ್ತು ಸಂಘಟನೆ ದೃಷ್ಟಿಯಿಂದ ಅಗತ್ಯವಿದ್ದಾಗ ಮಂತ್ರಿಮಂಡಲದ ಖಾಲಿ ಸ್ಥಾನಗಳನ್ನು ರಾಷ್ಟೀಯ ಅಧ್ಯಕ್ಷರೊಟ್ಟಿಗೆ ಚರ್ಚಿಸಿ, ಭರ್ತಿ ಮಾಡುವ ಬಗ್ಗೆ ತೀರ್ಮಾನ ಮಾಡಿ ಎಂದಿದ್ದಾರೆ.

ಸಂಪುಟ ರಚನೆಯ ನಂತರ ಆದ ಎಲ್ಲಾ ಬೆಳವಣಗೆಗಳ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಯವರು, ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಲ್ಲದೆ, ನಮ್ಮ ಪಾಲಿಗೆ ಬರಬೇಕಾಗಿ ರುವ ೧೮ ಸಾವಿರ ಕೋಟಿ ರೂ. ಜಿಎಸ್‌ಟಿ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ, ನಮ್ಮ ಸ್ಥಿತಿ ಚಿಂತಾ ಜನಕವಾಗುತ್ತದೆ. ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದ ನಮ್ಮ ಖಜಾನೆ ಮೇಲೆ ಮಾರಕ ಪರಿ ಣಾಮವುಂಟಾಗಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಹಕಾರ ಅತ್ಯಗತ್ಯ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ನೀವು ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಧಾನಿಯವರು ನನ್ನ ಬಳಿ ಹೇಳಿದ್ದಾರೆ. ನಿಮಗೆ ಎಲ್ಲಾ ರೀತಿಯ ಸಹಕಾರ ನಾವು ನೀಡುತ್ತೇವೆ. ಕೇಂದ್ರದ ಅನುದಾನದಡಿ ನೀವು ತೆಗೆದುಕೊಳ್ಳಬೇಕಾದ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಕೈಗೊಳ್ಳಿ. ಆದರೆ ಅದು ದೊಡ್ಡ ಪ್ರಚಾರಕ್ಕೆ ಬರುವುದು ಬೇಡ, ನಾವು ನಿಮಗೆ ಎಲ್ಲಿ ಸಹಾಯ ಬೇಕೋ ಅಲ್ಲಿ ಮಾಡುತ್ತೇವೆ ಎಂದು ಕಿವಿಮಾತು ಹೇಳಿದ್ದಾರೆ.

ಮಾರು ೭೦ ನಿಮಿಷಗಳ ಕಾಲ ಮುಖ್ಯಮಂತ್ರಿಯವರೊಟ್ಟಿಗೆ ಸಮಾಲೋಚನೆ ನಡೆಸಿದ ಗೃಹ ಸಚಿವರು, ಪಕ್ಷ ಸಂಘಟನೆ ಮತ್ತು ಸರ್ಕಾರಕ್ಕೆ ಸಂಬAಧಿಸಿದAತೆ ಕಿವಿಮಾತುಗಳನ್ನೂ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತದಲ್ಲಿ ಕೆಲವು ಬದಲಾವಣೆ ಮಾಡುವ ವಿಚಾರ, ಇದಕ್ಕಾಗಿ ಅಧಿಕಾರಿಗಳ ಬದಲಾವಣೆ ಮಾಡಲು ನಿಮ್ಮ ಅನುಮತಿ ಕೋರುತ್ತೇನೆ ಎಂದು ಮುಖ್ಯಮಂತ್ರಿ ಯವರು, ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಸಮೀಪವಾಗಿದ್ದರೂ, ಐಎಎಸ್, ಐಪಿಎಸ್ ಸೇರಿದಂತೆ ಯಾವುದೇ ಉನ್ನತ ಮಟ್ಟದ ಅಧಿಕಾರಿಗಳ ಬದಲಾವಣೆ ಮಾಡಿಲ್ಲ.ಇಂದು ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ತಲುಪಿದರು.

 

Translate »