ಗ್ಯಾಂಗ್ ರೇಪ್ ಆರೋಪಿಗಳ ಶೀಘ್ರ ಬಂಧನ: ಸಿಎಂ
ಮೈಸೂರು

ಗ್ಯಾಂಗ್ ರೇಪ್ ಆರೋಪಿಗಳ ಶೀಘ್ರ ಬಂಧನ: ಸಿಎಂ

August 27, 2021

ನವದೆಹಲಿ:ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರ ವಾಗಿ ಪರಿಗಣ ಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ, ಸಂತ್ರಸ್ತ ಯುವತಿಗೆ ನ್ಯಾಯ ಕಲ್ಪಿಸಲಾ ಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಸಂಸ್ಥೆಯೊAದರ ಜೊತೆ ಮಾತನಾ ಡಿದ ಅವರು, ತಾವು ದೆಹಲಿಯಲ್ಲಿದ್ದರೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ಜೊತೆ ಮೊಬೈಲ್‌ನಲ್ಲಿ ಸತತವಾಗಿ ಸಂಪರ್ಕ ದಲ್ಲಿದ್ದು, ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ತಿಳಿದು ಕೊಳ್ಳುತ್ತಿರುವುದಾಗಿ ಹೇಳಿದ ಅವರು, ಸಂತ್ರಸ್ತ ಯುವತಿ ಹಾಗೂ ಆಕೆಯ ಜೊತೆಗಿದ್ದ ಗೆಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೊಂದು ದುರದೃಷ್ಟ ಘಟನೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.

 

Translate »