ಲಾಕ್‍ಡೌನ್ ಕೊನೆಗೊಂಡಿದೆ ಕೊರೊನಾ ಕೊನೆಗೊಂಡಿಲ್ಲ
ಮೈಸೂರು

ಲಾಕ್‍ಡೌನ್ ಕೊನೆಗೊಂಡಿದೆ ಕೊರೊನಾ ಕೊನೆಗೊಂಡಿಲ್ಲ

October 21, 2020

ನವದೆಹಲಿ: ಲಾಕ್‍ಡೌನ್ ಕೊನೆಗೊಂಡಿದೆ ಅಷ್ಟೆ. ಆದರೆ ಕೊರೊನಾ ಕೊನೆಗೊಂಡಿಲ್ಲ. ಲಸಿಕೆ ಬರುವವರೆಗೆ ದೇಶದ ಜನತೆ ಎಚ್ಚರದಿಂದಿದ್ದು, ವೈರಸ್ ವಿರುದ್ಧ ಹೋರಾಡಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ದೇಶದಾದ್ಯಂತ ಕೋವಿಡ್-19 ದೃಢಪಟ್ಟ ಪ್ರಕ ರಣಗಳ ಸಂಖ್ಯೆ 75 ಲಕ್ಷ ದಾಟಿದೆ ಹಾಗೂ ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ಸಮಯದಲ್ಲಿ ದೇಶದ ಜನರು ಬಹಳ ಎಚ್ಚರಿಕೆ ವಹಿಸಬೇಕಿದೆ ಎಂದು ಸೂಚಿಸಿದ್ದಾರೆ.

ಅವರು ಮಂಗಳವಾರ ಸಂಜೆ 6 ಗಂಟೆಗೆ ದೇಶವನ್ನು ಉದ್ದೇ ಶಿಸಿ ಮಾತನಾಡಿದರು. 7 ತಿಂಗಳಲ್ಲಿ ಪ್ರಧಾನಿ ಅವರು ದೇಶವನ್ನುದ್ದೇಶಿಸಿ ಮಾಡಿದ 7ನೇ ಭಾಷಣ ಇದಾಗಿದೆ. ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಯುತ್ತಿದ್ದು, ನಮ್ಮ ಜವಾ ಬ್ದಾರಿ ನಿರ್ವಹಿಸಲು ಮತ್ತು ಜೀವನಕ್ಕೆ ಹೊಸ ಗತಿ ಕೊಡಲು ಪ್ರತಿದಿನ ಮನೆ ಯಿಂದ ಹೊರಗೆ ಬರಬೇಕಿದೆ. ಅಂತೆಯೇ ನಾವು ಮನೆ ಯಿಂದ ಹೊರಗೆ ಬರುತ್ತಲೇ ಇದ್ದೇವೆ. ದೇಶದಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಆದರೆ, ವೈರಸ್ ಇಲ್ಲಿಂದ ಹೊರಗೆ ಹೋಗಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಸೋಂಕಿನಿಂದ ಗುಣಮುಖ ಆಗುತ್ತಿರುವವರ ಪ್ರಮಾಣ ಶೇ.83ರಷ್ಟಿರುವುದು ನಮ್ಮ ಸಾಧನೆಯೇ ಸರಿ. ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಮೆರಿಕ ಮತ್ತು ಬ್ರೆಜಿಲ್‍ಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಉತ್ತಮಗೊಳ್ಳು ತ್ತಿದೆ. ಅಮೆರಿಕ, ಸ್ಪೇನ್, ಬ್ರಿಟನ್‍ನಂಥ ದೇಶಗಳಲ್ಲಿ ಇನ್ನೂ ಸಂಕಷ್ಟ ಪರಿಸ್ಥಿತಿ ಇದೆ. ವಿಶ್ವದ ಹಲವು ಸುಧಾರಿತ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೀವನ ಕಾಪಾಡಲು ಯಶಸ್ವಿಯಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಕ್ವಾರಂ ಟೈನ್ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಬೆಡ್‍ಗಳು ಲಭ್ಯವಿದೆ. ಕೋವಿಡ್ ಪರೀಕ್ಷೆ ಸಂಖ್ಯೆಯು ಶೀಘ್ರದಲ್ಲಿಯೇ 10 ಲಕ್ಷ ದಾಟಲಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಾಗುವುದು ನಮ್ಮ ದೊಡ್ಡ ಶಕ್ತಿಯಾಗಲಿದೆ ಎಂದರು. ಸೇವೆಯೇ ಪರಮ ಧರ್ಮ ಎಂಬಂತೆ ನಮ್ಮ ವೈದ್ಯರು, ನರ್ಸ್‍ಗಳು, ಸುರಕ್ಷಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ನಾನು ಶ್ಲಾಘಿಸುತ್ತೇನೆ. ಅವರ ಶ್ರಮವು ವ್ಯರ್ಥವಾಗಬಾರದು. ಕೊರೊನಾ ದೇಶದಿಂದ ಇನ್ನೂ ಹೊರಗೆ ಹೋಗಿಲ್ಲ, ಇದನ್ನು ನಾವು ಮರೆಯಬಾರದು. ನಾವು ಈಗ ಎಚ್ಚರಗೇಡಿ ಗಳಾಗಬಾರದು. ಮಾಸ್ಕ್ ಇಲ್ಲದೆ ಹೊರಗೆ ಬರುವವರು ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಇಂಥವರು ತಮ್ಮ ಕುಟುಂಬವನ್ನು ತಮ್ಮ ಕೈಯ್ಯಾರೆ ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಅಮೆರಿಕ ಮತ್ತು ಯೂರೋಪ್‍ನ ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಕಡಿಮೆಯಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಹಲವು ದೇಶಗಳಲ್ಲಿ ಏಕಾಏಕಿ ಸೋಂಕು ಹೆಚ್ಚಾಗುತ್ತಿದ್ದು, ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕು. ಕಬೀರರ ವಚನವೊಂದಿದೆ. ನಾವು ಫಸಲು ನೋಡಿ ಕೆಲಸ ಮುಗೀತು ಅಂತ ಖುಷಿ ಪಡ್ತೀವಿ. ಆದರೆ ಫಸಲು ಮನೆಗೆ ಬರುವವರೆಗೆ ಕೆಲಸ ನಿಲ್ಲಸಬಾರದು. ಕೊರೊನಾ ವಿಚಾರದಲ್ಲಿಯೂ ಇದು ನಿಜ. ಮಹಾಮಾರಿಗೆ ಲಸಿಕೆ ಬರುವವರೆಗೆ ನಾವು ನಮ್ಮ ಹೋರಾಟ ನಿಲ್ಲಿಸಬಾರದು ಹಾಗೂ ಎಚ್ಚರ ಕಡಿಮೆಯಾಗಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಜನರನ್ನು ಉಳಿಸಲು ಸಮರೋಪಾದಿಯಲ್ಲಿ ಕೆಲಸಗಳು ಆಗುತ್ತಿವೆ. ನಮ್ಮ ದೇಶದ ವಿಜ್ಞಾನಿಗಳೂ ಲಸಿಕೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರತದಲ್ಲಿಯೂ ಲಸಿಕೆ ವಿಚಾರದಲ್ಲಿ ಆಶಾವಾದ ಬಂದಿದೆ. ಲಸಿಕೆ ಬಂದ ತಕ್ಷಣ ಪ್ರತಿ ಭಾರತೀಯನಿಗೂ ತಲುಪಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಮಚರಿತಮಾನಸದಲ್ಲಿ ಒಂದು ಒಳ್ಳೇ ಮಾತಿದೆ. ಅಗ್ನಿ, ಶತ್ರು, ರೋಗದ ವಿಚಾರದಲ್ಲಿ ಎಂದಿಗೂ ಕಡಿಮೆ ಅಂದಾಜು ಮಾಡಬಾರದು. ಪೂರ್ತಿ ಚಿಕಿತ್ಸೆ ಸಿಗದಿದ್ದರೆ ಅಪಾಯ ತಪ್ಪಿದ್ದಲ್ಲ’ ಎಂದರು.

ಕೊರೊನಾ ವಿಚಾರದಲ್ಲಿಯೂ ಈ ಮಾತು ನಿಜ. ಔಷಧಿ ಬರುವವರೆಗೆ ಅಪಾಯ ತಪ್ಪಿದ್ದಲ್ಲ. ಎಚ್ಚರಗೇಡಿತನವು ನಮ್ಮ ಖುಷಿಯನ್ನು ನುಂಗಿಹಾಕಬಹುದು. ಎರಡು ಗಜ (6 ಅಡಿ) ಅಂತರ, ಆಗಿದ್ದಾಂಗ್ಗೆ ಸಾಬೂನಿನಿಂದ ಕೈತೊಳೆಯುವುದು, ಮಾಸ್ಕ್ ಹಾಕುವುದನ್ನು ಮರೆಯಬೇಡಿ. ನಾನು ನಿಮಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ನೀವು ಸುರಕ್ಷಿತವಾಗಿರ ಬೇಕೆಂದು ನಾನು ಬಯಸುತ್ತೇನೆ. ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ ರುವವರಲ್ಲಿ ವಿನಂತಿಸುತ್ತೇನೆ; ದಯವಿಟ್ಟು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಜನಜಾಗೃತಿ ಅಭಿಯಾನ ನಡೆಸಿ ಎಂದು ಕೋರಿದರು. ನಾವೆಲ್ಲರೂ ಸೇರಿ ದೇಶವನ್ನು ಮುನ್ನಡೆಸೋಣ ಎಂದ ಪ್ರಧಾನಿ, ನವರಾತ್ರಿ, ದಸರಾ, ಈದ್, ದೀಪಾವಳಿ, ಷಟ್‍ಪೂಜಾ, ಗುರುನಾನಕ್ ಜಯಂತಿ ಸೇರಿದಂತೆ ಎಲ್ಲ ಹಬ್ಬಗಳಿಗೂ ಶುಭಾಶಯ ತಿಳಿಸಿದರು.

Translate »