ಉಪ ಚುನಾವಣೆ ನಂತರ ಯಡಿಯೂರಪ್ಪ ನಾಯಕತ್ವ ಬದಲಾವಣೆ
ಮೈಸೂರು

ಉಪ ಚುನಾವಣೆ ನಂತರ ಯಡಿಯೂರಪ್ಪ ನಾಯಕತ್ವ ಬದಲಾವಣೆ

October 21, 2020

ಬೆಂಗಳೂರು, ಅ. 20(ಕೆಎಂಶಿ)- ವಿಧಾನಸಭಾ ಉಪಚುನಾವಣೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರ ನಾಯ ಕತ್ವ ಬದಲಾವಣೆಯಾಗ ಲಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ. ಪಕ್ಷದ ವರಿಷ್ಠ ರಿಗೂ ಇವರ ಬಗ್ಗೆ ಸಾಕಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮುಂದುವರೆದು ಮಾತನಾಡಿದ ಯತ್ನಾಳ್, ಉತ್ತರ ಕರ್ನಾಟಕ ಭಾಗದವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ. ನಮ್ಮ ಭಾಗದಿಂದ 100 ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ಆದರೆ ಹಳೇ ಮೈಸೂರು ಭಾಗದಲ್ಲಿ ಕೇವಲ 10ರಿಂದ 20 ಶಾಸಕರಷ್ಟೇ ಬಿಜೆಪಿ ಚಿನ್ಹೆಯಡಿ ಆಯ್ಕೆಯಾಗುತ್ತಾರೆ. ಇವರದ್ದೇ ರಾಜ್ಯಭಾರ, ಇವರಲ್ಲಿ ಆಯ್ಕೆಗೊಂಡವರೇ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ. ಮಂಡ್ಯ, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಯಾರು ವೋಟ್ ಹಾಕುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಮೇಲಿನ ವರಿಗೂ ತಿಳಿದಿದೆ. ಉತ್ತರಾಧಿಕಾರಿ, ಉತ್ತರ ಕರ್ನಾಟಕದವರೇ ಆಗುತ್ತಾರೆ. ಪ್ರಧಾನ ಮಂತ್ರಿಗಳ ಮನಸ್ಸಿನಲ್ಲೂ ಈ ವಿಚಾರ ಬಂದಿದೆ. ನಮ್ಮವರೇ ಮುಂದಿನ ಮುಖ್ಯ ಮಂತ್ರಿ. ಇದು ಫೈನಲ್ ಆಗಿದೆ ಎಂದು ತಿಳಿಸಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ್ ನಾಯಕತ್ವ ಬದಲಾವಣೆಯ ಸುಳಿವು ನೀಡುತ್ತಿದ್ದಂತೆ ರಾಜ್ಯ ಬಿಜೆಪಿ ಮತ್ತು ಸರ್ಕಾರದಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡಿದೆ. ಇವರ ಹೇಳಿಕೆಗೆ ಯಾವುದೇ ಬೆಲೆ ಇಲ್ಲ ಎಂದು ಡಿಸಿಎಂ ಡಾ. ಅಶ್ವತ್ಥ್‍ನಾರಾಯಣ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಸೇರಿದಂತೆ ಹಲವು ಮಂತ್ರಿಗಳು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿ ಮುಗಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಯತ್ನಾಳ್ ಅವರ ಹೇಳಿಕೆಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವ್ಯಂಗ್ಯವಾಡಿ, ಪ್ರಧಾನಿ ನರೇಂದ್ರ ಮೋದಿ ಅವರು, ಯತ್ನಾಳ್‍ಗೆ ದೂರವಾಣಿ ಮೂಲಕ ಫೋನ್ ಮಾಡಿ, ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರಾ? ಎಂದು ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪ ಸಮರ್ಥರಾಗಿದ್ದಾರೆ ಎಂದ ಗೋಪಾಲಯ್ಯ, ಕಷ್ಟ ಕಾಲದಲ್ಲಿ ಸರ್ಕಾರ ನಡೆಸಿಕೊಂಡು ಹೋಗ್ತಿದ್ದಾರೆ. ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲ, ನಾವು ಅವರ ನಾಯಕತ್ವದಲ್ಲಿ ಉಳಿಯುತ್ತೇವೆ. ಯಡಿಯೂರಪ್ಪರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.

ಯತ್ನಾಳ್‍ಗೆ ಏನಾದರೂ ಇದ್ರೆ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ಕಳೆದ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದು ಯಡಿಯೂರಪ್ಪರಿಂದಲೇ, ಇವಾಗ ಎರಡು ಚುನಾವಣೆಗಳಲ್ಲೂ ಅವರ ನಾಯಕತ್ವದಲ್ಲೇ ಗೆಲ್ತೇವೆ ಎಂದರು.

ಪ್ರತ್ಯೇಕವಾಗಿ ಮಾತನಾಡಿದ ರೇಣುಕಾಚಾರ್ಯ, ಯತ್ನಾಳರದ್ದು ವೈಯಕ್ತಿಕ ಹೇಳಿಕೆ. ಅವರು ಯಾವಾಗ ಯಾರನ್ನ ಟೀಕೆ ಮಾಡ್ತಾರೆ ಗೊತ್ತಾಗಲ್ಲ. ಯಾರನ್ನ ವೈಭವೀಕರಿಸ್ತಾರೆ ಗೊತ್ತಿಲ್ಲ. 2007 ರಲ್ಲಿ ಶೆಟ್ಟರ್ ಎತ್ತಿಕೊಡುವ ಕೆಲಸ ಮಾಡಿದ್ದರು. ಯತ್ನಾಳ್ ಬಗ್ಗೆ ನನಗೆ ಅಪಾರ ಗೌರವವಿದೆ. ಅವರಿಗೆ ನಾಯಕತ್ವದ ಲಕ್ಷಣಗಳಿವೆ. ಅವರು ಹಿಂದೂ ಹುಲಿ ಅಂತ ನಾನೇ ಕರೆದಿದ್ದೆ. ಎಂಎಲ್‍ಸಿ ಆಗಿದ್ದಾಗ ಶೆಟ್ಟರ್,ಜೋಶಿ ವಿರುದ್ಧ ಟೀಕೆ ಮಾಡಿದ್ದರು.

ಬಿಜೆಪಿ ಎಲ್ಲ ವರ್ಗಗಳ ಪಕ್ಷ, ದೇಶದಲ್ಲಿ ಬಿಜೆಪಿ ಉತ್ತಮ ಸ್ಥಾನದಲ್ಲಿದೆ. ವಿಶ್ವ ಪ್ರಧಾನಿಯವರನ್ನು ಮೆಚ್ಚಿದೆ. ರಾಜ್ಯ ಯಡಿಯೂರಪ್ಪನವರನ್ನು ಮೆಚ್ಚಿದೆ, ಪ್ರಧಾನಿ ನಿಮಗೆ ದೂರವಾಣಿ ಕರೆಮಾಡಿದ್ರಾ, ಕರೆ ಮಾಡಿ ಯಡಿಯೂರಪ್ಪ ಇಳಿಸ್ತೇವೆ ಅಂದಿದ್ರಾ, ಯತ್ನಾಳ್ ಅವರೇ ಬಿಎಸ್‍ವೈ ಟೀಕೆ ಮಾಡಿದ್ರೆ ನೀವು ನಾಯಕರಾಗಲ್ಲ. ನೀವು ನಾನೇ ಮುಖ್ಯಮಂತ್ರಿ ಅಂತ ಹಗಲುಗನಸು ಕಾಣ್ತಿದ್ದೀರಾ ಎಂದು ಕಿಡಿಕಾರಿದರು.

 

 

 

Translate »