ಪ್ರಧಾನಿಯಿಂದ ಲೋಕಾರ್ಪಣೆಗೊಂಡ  ಆಯಿಷ್ ಉತ್ಕøಷ್ಠ ಕೇಂದ್ರದ ವಿಶೇಷತೆ
ಮೈಸೂರು

ಪ್ರಧಾನಿಯಿಂದ ಲೋಕಾರ್ಪಣೆಗೊಂಡ ಆಯಿಷ್ ಉತ್ಕøಷ್ಠ ಕೇಂದ್ರದ ವಿಶೇಷತೆ

June 21, 2022

Éುೈಸೂರು, ಜೂ.20(ಆರ್‍ಕೆಬಿ)- ಐದು ಸಂಶೋ ಧನಾ ಕೇಂದ್ರ, ಐದು ಚಿಕಿತ್ಸಾ ಕೇಂದ್ರ ಹಾಗೂ ಎರಡು ಬಾಹ್ಯ ಸೇವಾ ಕೇಂದ್ರಗಳನ್ನು ಒಳಗೊಂಡಿರುವ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ (ಆಯಿಷ್)ಯ ಉತ್ಕøಷ್ಟ ಕೇಂದ್ರದ ಹೊಸ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

155.49 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಸಂಶೋಧನಾ ಕೇಂದ್ರ, ಚಿಕಿತ್ಸಾ ಕೇಂದ್ರ ಮತ್ತು ಬಾಹ್ಯ ಸೇವಾ ಕೇಂದ್ರಗಳು, ಸಂವ ಹನ ನ್ಯೂನತೆಯುಳ್ಳ ವ್ಯಕ್ತಿಗಳ ರೋಗ ನಿರ್ಣಯ, ತಪಾಸಣೆ ಹಾಗೂ ಪುನಶ್ಚೇತನ ಸೇವೆಗಳನ್ನು ಒದಗಿಸಲು ಅತ್ಯಾಧು ನಿಕ ಪ್ರಯೋಗಾಲಯಗಳು ಹಾಗೂ ಸೌಲಭ್ಯಗಳನ್ನು ಹೊಂದಿವೆ. ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ಜೀವನವನ್ನು ಸುಧಾರಿಸಲು ಮತ್ತು ಅವರಲ್ಲಿ ಅರಿವು ಮೂಡಿಸಿ, ಸಬಲ ಗೊಳಿಸುವ ಸಲುವಾಗಿ ತರಬೇತಿ, ಸಂಶೋಧನೆ, ಚಿಕಿತ್ಸಾ ಸೇವೆಗಳು ಹಾಗೂ ಅದರ ವಿಸ್ತರಣೆಗೆ ಸಂಬಂಧಿಸಿದಂತೆ ಸಾಕಷ್ಟು ಚಟುವಟಿಕೆಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಈ ಮೂಲಕ ಅವರ ತೊಂದರೆಗಳನ್ನು ಕಡಿಮೆ ಮಾಡು ವುದು ಮುಖ್ಯ ಉದ್ದೇಶವಾಗಿದೆ.
ವಾಕ್‍ದೋಷ ಹಾಗೂ ಇತರ ಸಂವಹನ ನ್ಯೂನತೆ ಯುಳ್ಳವರಿಗೆ ಅನುಗುಣವಾಗಿ ಡೆಟಾಬೇಸ್, ಪರೀಕ್ಷೆಗಳು ಮತ್ತು ಮಾದರಿಗಳನ್ನು ರಚಿಸುವ ಸಲುವಾಗಿ ಸಂಶೋ ಧನೆಗಳನ್ನು ಕೈಗೊಳ್ಳುವುದು. ಸಂವಹನ ನ್ಯೂನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ.

ಏನೇನು ಸೌಲಭ್ಯಗಳು

ಐದು ಸಂಶೋಧನಾ ಕೇಂದ್ರಗಳು: ಮಾತು-ಭಾಷಾ ವಿಜ್ಞಾನ ಕೇಂದ್ರ, ಶ್ರವಣ ವಿಜ್ಞಾನ ಕೇಂದ್ರ, ಸಂವಹನ ನ್ಯೂನತೆಗಳ ತಡೆಗಟ್ಟುವಿಕೆ ಹಾಗೂ ಸಾಂಕ್ರಾಮಿಕತೆಯ ಸಂಶೋಧನೆ ಮತ್ತು ಸಂವಹನ ನ್ಯೂನತೆಗಳ ಅರಿವಿನ ವರ್ತನೆಯ ವಿಜ್ಞಾನ ಕೇಂದ್ರ, ಪುನರ್ವಸತಿ ಎಂಜಿನಿ ಯರಿಂಗ್, ಅಕೌಸ್ಟಿಕ್ಸ್ ಮತ್ತು ಬಯೋಮೆಡಿಕಲ್ ಎಂಜಿನಿ ಯರಿಂಗ್ ಕೇಂದ್ರ, ಸಂವರ್ಧನ ಹಾಗೂ ಪರ್ಯಾಯ ಸಂವಹನ ಮತ್ತು ಸಂಜ್ಞಾ ಭಾಷಾ ಕೇಂದ್ರ.

ಐದು ಚಿಕಿತ್ಸೆ ಕೇಂದ್ರಗಳು: ಮಾತು, ಭಾಷಾ ನ್ಯೂನತೆ ಯುಳ್ಳ ಮಕ್ಕಳು, ವಯಸ್ಕರು, ಹಿರಿಯ ನಾಗರಿಕರಿಗಾಗಿ ಕೇಂದ್ರ, ಕಿವಿಮೊರೆತ ಹಾಗೂ ತಲೆ ಸುತ್ತುವಿಕೆ ನ್ಯೂನತೆಯುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ, ಶ್ರವಣದೋಷವುಳ್ಳ ಮಕ್ಕಳು, ವಯ ಸ್ಕರು ಮತ್ತು ಹಿರಿಯ ನಾಗರಿಕರಿಗಾಗಿ ಕೇಂದ್ರ, ನುಂಗುವ ಕ್ರಿಯೆಯಲ್ಲಿ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಚಿಕಿತ್ಸಾ ಕೇಂದ್ರ, ಸಂವಹನ ನ್ಯೂನತೆಗಳ ಶಸ್ತ್ರಚಿಕಿತ್ಸೆ, ಪುನರ್ವಸತಿ ಕೇಂದ್ರ
ಎರಡು ಬಾಹ್ಯಸೇವಾ ಕೇಂದ್ರಗಳು: ಪ್ರಮುಖ ಚಟು ವಟಿಕೆಗಳು- ಸಂಶೋಧನಾ ಕೇಂದ್ರಗಳು

Translate »