ಮೈಸೂರಲ್ಲಿ ‘ಮಣ್ಣು ಉಳಿಸಿ’ ಅಭಿಯಾನ ನಾವು ಮಣ್ಣನ್ನು ರಕ್ಷಿಸದಿದ್ದರೆ ಮನುಕುಲ ನಾಶ
ಮೈಸೂರು

ಮೈಸೂರಲ್ಲಿ ‘ಮಣ್ಣು ಉಳಿಸಿ’ ಅಭಿಯಾನ ನಾವು ಮಣ್ಣನ್ನು ರಕ್ಷಿಸದಿದ್ದರೆ ಮನುಕುಲ ನಾಶ

June 20, 2022

ಮೈಸೂರು,ಜೂ.19(ಎಂಕೆ)-ಮಣ್ಣಿನ ಸಂರಕ್ಷಣೆಗಾಗಿ ಈಗಲೇ ಎಚ್ಚರಗೊಳ್ಳಬೇಕು. ಮುಂದಿನ 8-12 ವರ್ಷದೊಳಗೆ ಮಣ್ಣಿನ ರಕ್ಷಣೆ ಆಗಬೇಕು. ಇಲ್ಲದಿದ್ದರೆ ನಾಶವಾಗಿರುವ 27 ಸಾವಿರ ಪ್ರಭೇದ ಗಳ ಜೊತೆಗೆ ನಾವೂ ಸೇರಬೇಕಾಗುತ್ತದೆ ಎಂದು ಇಶಾ ಪ್ರತಿ ಷ್ಠಾನದ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಎಚ್ಚರಿಸಿದರು.

‘ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ ಮೈಸೂರಿಗೆ ಆಗಮಿಸಿ, ಮೈಸೂರು ವಿವಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಮೂಹವನ್ನುದ್ದೇಶಿಸಿ ಮಾತನಾಡಿದ ಅವರು, ‘ಮಣ್ಣು ಉಳಿಸಿ’ ಅಭಿಯಾನದಲ್ಲಿ 28 ಸಾವಿರ ಕಿ.ಮೀ ಬೈಕ್ ರ್ಯಾಲಿ ನಡೆಸಿದ್ದು, 74 ದೇಶಗಳಲ್ಲಿನ ನಾಯಕರನ್ನು ಭೇಟಿ ಮಾಡಿ ಸಹಿ ಪಡೆಯ ಲಾಗಿದೆ. ಎಲ್ಲರೂ ‘ಮಣ್ಣು ಉಳಿಸಿ’ ಅಭಿಯಾನಕ್ಕೆ ಬೆಂಬಲ ನೀಡಿದ್ದು, ಮಣ್ಣಿನ ಸಂರಕ್ಷಣೆಗೆ ಭರವಸೆ ನೀಡಿದ್ದಾರೆ. ಅಲ್ಲದೆ ಕಳೆದ 2 ವರ್ಷಗಳಿಂದ ವಿಶ್ವದಲ್ಲಿನ ಪ್ರಖ್ಯಾತ ವಿಜ್ಞಾನಿಗಳನ್ನೂ ಭೇಟಿ ಮಾಡಿ ಮಣ್ಣಿನ ಸಂರಕ್ಷಣೆಯನ್ನು ಹೇಗೆ? ಮಾಡಬೇಕು. ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ಚರ್ಚಿಸಿದ್ದು, ಎಲ್ಲಾ ಅಂಶಗಳನ್ನು ದಾಖಲಿಸಿ, ರೈತ ರಿಗೆ ಹಾಗೂ ಎಲ್ಲರಿಗೂ ಮಣ್ಣಿನ ಅಗತ್ಯತೆ ಕುರಿತು ಜಾಗೃತಿ ಮೂಡಿ ಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಮ್ಮೆಲ್ಲರ ಜವಾಬ್ದಾರಿ: ನಾವೆಲ್ಲರೂ ಉಸಿರಾಡುತ್ತಿರುವುದಕ್ಕೆ ಮಣ್ಣು ಕಾರಣ. ಮಾತೃ ಸ್ವರೂಪಿಯಾದ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿಯಾಗಿದೆ. ಮಾವಿನ ಹಣ್ಣಿಗಾಗಿ ಮರದ ಬುಡ ದಲ್ಲಿರುವ ಮಣ್ಣಿನ್ನು ತೆಗದು ಹಾಕಿ ಮರವನ್ನೇ ಮೇಲೆ ಕೆಡಗಿಕೊಂಡಂತೆ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡಿದ್ದೇವೆ. ಸಿಹಿ ನೀರಿನಲ್ಲಿ ಬದುಕುವ ಶೇ.92ರಷ್ಟು ಜೀವಿಗಳ ನಾಶವಾಗಿದ್ದು, ಉಳಿದ ಜೀವಿಗಳ ನ್ನಾದರೂ ಸಂರಕ್ಷಣೆ ಮಾಡಬೇಕಾಗಿದೆ. ಮಣ್ಣಿನಲ್ಲಿ ಹೊರಳಾಡುವ ಹುಳುಗಳಂತೆ ಇರುವ ನಮ್ಮ ಮೇಲೆ ಮಣ್ಣಿನ ಮೇಲಾಗುವ ಎಲ್ಲಾ ಪರಿಣಾಮಗಳು ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಮರಳನ್ನು ಮಣ್ಣಾಗಿಸುತ್ತಿದ್ದಾರೆ: ಅರಬ್ ದೇಶಗಳಲ್ಲಿ ಮರಳಿಗೆ ಜೈವಿಕ ಅಂಶಗಳನ್ನು ಬೆರೆಸಿ ಮಣ್ಣಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಆದರೆ ನಾವುಗಳು ಇರುವ ಮಣ್ಣಿನ ಫಲವತ್ತತೆಯನ್ನು ತೆಗೆದು ಮಣ್ಣನ್ನು ಮರಳಾಗಿ ಮಾಡುತ್ತಿದ್ದೇವೆ. ಪರಿಸರ ಸಂರಕ್ಷಣೆ ಕುರಿತು ಬರೀ ಮಾಹಿತಿ ಪಡೆದು ಸುಮ್ಮನಾಗುವುದಲ್ಲ. ನಮ್ಮ ಸುತ್ತ-ಮುತ್ತ ಏನಾಗುತ್ತಿದೆ ಎಂಬುದರತ್ತ ಗಮನ ಹರಿಸಬೇಕು. ಕಡೆಯ ಪಕ್ಷ ನಾವು ಎರೆಹುಳುವಿನಂತೆ ವರ್ತಿಸಿದರೆ ಸಾಕು ಮಣ್ಣಿನ ರಕ್ಷಣೆಯಾಗುತ್ತದೆ ಎಂದು ಹೇಳಿದರು.

ಆನಂದಮಯ ಜೀವನ: ನಮ್ಮ ಜೀವನ ಆನಂದಮಯವಾಗಿರಬೇಕು. ನಾವು ಆನಂದವಾಗಿದ್ದರೆ ನಮ್ಮ ಕುಟುಂಟ ನಂತರ ಸಮಾಜ ಆನಂದ ವಾಗಿರುತ್ತದೆ. ಎಲ್ಲರ ಜೀವನವೂ ಆನಂದಮಯವಾದರೆ ಯಶಸ್ಸು ದೊರಕುತ್ತದೆ. ಬ್ರಹ್ಮಾಂಡದಲ್ಲಿ ನಮ್ಮನ್ನು ಮಾತ್ರವೇ ಮನುಷ್ಯ (ಊUಒಂಓ ಃಇIಓಉ) ಎನ್ನುವುದು. ಹೇಗಿರಬೇಕು. ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬುದು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಿಂತಿರುತ್ತದೆ. ಆನಂದ ಹುಡುಕಾಟದಲ್ಲಿ ಮಣ್ಣಿನ್ನು ಹಾಳು ಮಾಡಿದ್ದೇವೆ. ನಮ್ಮಲ್ಲಿನ ಮಾನವೀಯ ಅಂಶಗಳು ಬೇರೆ ಕಡೆ ಸಾಗುತ್ತಿವೆ ಎಂದು ವಿಷಾದಿಸಿದರು.

ಮಣ್ಣಿನಿಂದಲೇ ಬಂದವರು: ಧರ್ಮ, ಲಿಂಗ, ಮತ ಎಂದೆಲ್ಲಾ ಮಾತ ನಾಡುವವರೆಲ್ಲರೂ ಮಣ್ಣಿನಿಂದಲೇ ಬಂದವರು. ನಮ್ಮ ಮುಂದಿನ ತಲೆ ಮಾರಿನ ಒಳಿಗಾಗಿಯಾದರೂ ಮಣ್ಣು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನಿಷ್ಟ 400 ಕೋಟಿ ಜನರಿಗೆ ಅರಿವು ಮೂಡಿಸಬೇಕು ಎಂದು ಗುರಿ ನಿರ್ಧ ರಿಸಿಕೊಂಡಿದ್ದೇವೆ. ಜೀವನದಲ್ಲಿ ಬರುವುದೆಲ್ಲವನ್ನೂ ಪಡೆದುಕೊಳ್ಳುವುದಕ್ಕಿಂತ ಉತ್ತಮವಾದುದನ್ನು ಆಯ್ಕೆ ಮಾಡಿ ಕೊಳ್ಳುವುದು ಮುಖ್ಯ. ಹಾಗಾಗಿ ನಮ್ಮ ನಡೆ ಮಣ್ಣು ಉಳಿಸುವತ್ತಾ ಸಾಗಬೇಕು ಎಂದು ಕರೆ ನೀಡಿದರು.

ಭೂಮಿಯ ವಿಸ್ತೀರ್ಣ ಹೆಚ್ಚಿಸಲು ಸಾಧ್ಯವಿಲ್ಲ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಣ್ಣಿನಲ್ಲಿ ಮುಖ್ಯವಾಗಿ ಸದಾ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಭೂಮಿಯ ವಿಸ್ತೀರ್ಣ ಹೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಭೂಮಿಗೆ ಬೇಡವಾದುದನ್ನು ಬೆರೆಸದಿದ್ದರೇ ಸಾಕು ಭೂಮಿ(ಮಣ್ಣು) ಸ್ವಚ್ಛವಾಗಿರುತ್ತದೆ. ಮುಖ್ಯವಾಗಿ ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿ ದರು. ಮಣ್ಣು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಂದು ಕಾಲದಲ್ಲಿ ರೈತರು ಮಣ್ಣಿಗೆ(ಭೂಮಿಗೆ)ಪೂಜೆ ಸಲ್ಲಿಸಿ ಉಳುಮೆ ಮಾಡುತ್ತಿದ್ದರು. ಭೂಮಿಯನ್ನು ತಾಯಿಯೆಂದೇ ಪ್ರೀತಿಸಿ, ಗೌರವಿಸಿದ ದೇಶ ಭಾರತ. ಭೂಮಿಯ ಸವಕಳಿಯನ್ನು ತಪ್ಪಿಸುವುದು, ರಸಾಯನಿಕ ಮುಕ್ತಗೊಳಿಸಿ ಮಣ್ಣನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

Translate »